ಪಾದರಾಯನಪುರ : ಗೃಹ ಇಲಾಖೆ, ಸಚಿವರಲ್ಲಿಯೇ ಅಸಮಾಧಾನ, ಪ್ರತಿಪಕ್ಷಗಳಿಂದಲೂ ಟೀಕೆ..

ಕೊರೋನಾ ಸೋಮಕು ಹರಡುವಿಕೆಯನ್ನು ಹದ್ದುಬಸ್ತಿಗೆ ತರಲು ಶತ ಪ್ರಯತ್ನ ನಡೆದಿರುವಾಗಲೇ ಪಾದರಾಯನಪುರ ಗಲಭೆಕೋರರನ್ನು ಸೋಂಕು ರಹಿತ ರಾಮನಗರಕ್ಕೆ ವರ್ಗಾಯಿಸಿದ ಕ್ರಮಕ್ಕೆ ಸಚಿವರ ಮಟ್ಟದಲ್ಲಿಯೇ ಅಸಮಾಧಾನ ವ್ಯಕ್ತವಾಗಿದೆ.

ಎಲ್ಲೂ ಸರಿ ಇದೆ ಎನ್ನುವಾಗಿ ಇಂತಹ ಕ್ರಮಗಳಿಂದ ಸರಕಾರಕ್ಕೆ ಮುಜುಗರ ಉಂಟಾಗುತ್ತದೆ. ಇದನ್ನು ತಡೆಯಬಹುದಿತ್ತು ಎಂಬ ಅಭಿಪ್ರಾಯ ಕೆಲ ಸಚಿವರಿಂದಲೇ ಕೇಳಿಬಂದಿದೆ.  ಪಾದರಾಯನಪುರ ಗಲಭೆ ನಿರ್ವಹಣೆ ವಿಚಾರವಾಗಿ ಗೃಹ ಸಚಿವಾಲಯದ ಕಾರ್‍ಯವೈಖರಿಯನ್ನು ಕೆಲವು ಸಚಿವರು ಪ್ರಶ್ನಿಸಿದ್ದಾರೆ. ಸಹಜವಾಗಿಯೇ ಗೃಹ ಸಚಿವ ಬಸವರಾಜ್ ಬೊಮ್ಮಾಯಿ ಮೇಲೆ ಕೆಲವು ಸಚಿವರು ಕಿಡಿ ಕಾರಿದ್ದಾರೆ.

ಹಸಿರು ವಲಯ ರಾಮನಗರಕ್ಕೆ ಆರೋಪಿಗಳನ್ನು ಶಿಫ್ಟ್ ಮಾಡೋದನ್ನು ತಪ್ಪಿಸಬಹುದಿತ್ತು ಎಂದು ವೈದ್ಯ ಶಿಕ್ಷಣ ಸಚಿವ ಸುಧಾಕರ್‍ ನೇರವಾಗಿಯೇ ಹೇಳಿದ್ದಾರೆ. ಬೆಂಗಳೂರು ಅಥವಾ ಚಿಕ್ಕಬಳ್ಳಾಪುರಕ್ಕೆ ಪಾದರಾಯನಪುರ ಆರೋಪಿಗಳನ್ನು ಶಿಫ್ಟ್ ಮಾಡಬಹುದಿತ್ತು ಎಂದು ಹೇಳುವ ಗೃಹ ಇಲಾಖೆಯ ನಿಧಾರಕ್ಕೆ ಅತೃಪ್ತಿ ಸೂಚಿಸಿದ್ದಾರೆ.

ಇನ್ನು ಪಾದರಾಯನಪುರದಲ್ಲಿ ಗಲಭೆ ಉಂಟಾದ ಸಂದರ್ಭದಲ್ಲಿ ಸಹ ಕೆಲ ಹಿರಿಯ ಸಚಿವರು ಗೃಹ ಮಂತ್ರಿಗಳ ಮೇಲೆ ಅಸಮಾಧಾನ ವ್ಯಕ್ತಪಡಿಸಿದ್ದರು ಎನ್ನಲಾಗಿದೆ. ಪ್ರಭಾವಿ ಸಚಿವರಾಗ ಸೋಮಣ್ಣ, ಅಶೋಕ ಮುಂತಾದವರು ಈ ವಿಚಾರವನ್ನು ಮತ್ತಷ್ಟು ಸೂಕ್ಷ್ಮವಾಗಿ ನಿಭಾಯಿಸಬಹುದಿತ್ತು ಎಂಬ ಅಭಿಪ್ರಾಯ ವ್ಯಕ್ತಪಡಿಸಿದ್ದರು.

ಇನ್ನು ಕೊರೋನಾ ಹೋರಾಟಕ್ಕೆ ಸಂಬಂಧಿಸಿದಂತೆ ಸರಕಾರದ ಕಾರ್‍ಯದಲ್ಲಿ ಹುಳುಕು ಹುಡುಕಲು ಪ್ರತಿಪಕ್ಷಗಳಿಗೆ ಈ ಪ್ರಕರಣ ಪ್ರಧಾನ ಅಸ್ತ್ರವಾಗಿ ಪರಿಣಮಿಸಿದೆ.  ಕಾಂಗ್ರೆಸ್ ಮತ್ತು ಜೆಡಿಎಸ್ ಮುಖ್ಯಸ್ಥರು ಈಗಾಗಲೇ ಸರಕಾರದ ಕಾರ್‍ಯ ನಿರ್ವಹಣೆಯನ್ನು ಕಟುವಾದ ಶಬ್ದಗಳಲ್ಲಿ ಟೀಕೆ ಮಾಡಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights