ಫ್ಯಾಕ್ಟ್‌ಚೆಕ್ : RSS ಮುಖ್ಯಸ್ಥ ಭಾಗವತ್ ಜೊತೆ ದ್ರೌಪದಿ ಮುರ್ಮು ಫೋಟೋ ವೈರಲ್ ! ಫೋಟೋದ ಅಸಲಿಯತ್ತೇನು

ರಾಷ್ಟ್ರಪತಿ ಚುನಾವಣೆಗೆ ಬಿಜೆಪಿ ನೇತೃತ್ವದ ಎನ್ ಡಿಎ ಮೈತ್ರಿಕೂಟದ ಅಭ್ಯರ್ಥಿಯಾಗಿ ಜಾರ್ಖಂಡ್ ಮಾಜಿ ರಾಜ್ಯಪಾಲೆ ದ್ರೌಪದಿ ಮುರ್ಮು ಅವರನ್ನು ಆಯ್ಕೆ ಮಾಡಲಾಗಿದ್ದು,  ಅವರು ನಾಗಪುರದ RSS ಕಚೇರಿಗೆ ಭೇಟಿ ನೀಡಿದ್ದಾರೆ ಎಂಬ ಹೇಳಿಕೆಯೊಂದಿಗೆ  ಸಂಚಾಲಕ ಮೋಹನ್ ಭಾಗವತ್ ಅವರೊಂದಿಗೆ ಇರುವ ಫೋಟೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದೆ. ಸುಪ್ರೀಂ ಕೋರ್ಟ್ ನ ವಕೀಲರಾದ ಪ್ರಶಾಂತ್ ಭೂಷಣ್ ಕೂಡ ಈ ಫೋಟೋವನ್ನು  “ಬಿಜೆಪಿಯ ರಾಷ್ಟ್ರಪತಿ ಅಭ್ಯರ್ಥಿ ದ್ರೌಪದಿ ಮುರ್ಮು ಅವರು ನಾಗ್ಪುರದ RSS ಕೇಂದ್ರ ಕಚೇರಿಯಲ್ಲಿ ಮೋಹನ್ ಭಾಗವತ್ ಅವರನ್ನು ಭೇಟಿ ಮಾಡಿದ್ದಾರೆ! ಅವರು ಕೇವಲ ರಬ್ಬರ್ ಸ್ಟಾಂಪ್ ಆಗಿರುತ್ತಾರೆ ಮತ್ತು ಸ್ವತಂತ್ರವಾಗಿ ಕಾರ್ಯನಿರ್ವಹಿಸಲು ಸಾಧ್ಯವಾಗುವುದಿಲ್ಲ ಎಂಬುದರಲ್ಲಿ ಅನುಮಾನವಿದೆಯೇ?” ಎಂಬ ಹೇಳಿಕೆಯೊಂದಿಗೆ ಹಂಚಿಕೊಂಡಿದ್ದಾರೆ.

Prashant Bhushans Facebook post sharing the fake image

ಟ್ವಿಟರ್‌ನಲ್ಲಿ ಹಲವರು ದ್ರೌಪದಿ ಮುರ್ಮು ಅವರು RSS ಮುಖ್ಯಸ್ಥ ಮೋಹನ್ ಭಾಗವತ್ ಅವರೊಂದಿಗೆ ಇದ್ದಾರೆ ಎಂದು ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ. ಹಾಗಿದ್ದರೆ ಈ ಪೋಸ್ಟ್‌ನಲ್ಲಿ ವೈರಲ್ ಮಾಡಲಾಗಿರುವ ಫೋಟೊದ ಸತ್ಯಾಸತ್ಯತೆಯನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿರುವ ದ್ರೌಪದಿ ಮುರ್ಮು ಹಾಗೂ ಮೋಹನ್ ಭಾಗವತ್ ಇಬ್ಬರು ಜೊತೆ ನಿಂತು ಭಾರತಾಂಬೆ ಚಿತ್ರಕ್ಕೆ ಪೂಜೆ ಸಲ್ಲಿಸುತ್ತಿರುವ ಫೋಟೋ ಎಡಿಟ್ ಮಾಡಲಾಗಿದೆ ಎಂದು ತಿಳಿದುಬಂದಿದೆ. ಆರೆಸ್ಸೆಸ್ ಮುಖ್ಯಸ್ಥ ಮೋಹನ್ ಭಾಗವತ್ ಅವರು ಗುಜರಾತ್‌ನಲ್ಲಿ ನಡೆದ ಕಾರ್ಯಕ್ರಮವೊಂದರಲ್ಲಿ ಪ್ರಧಾನ ಕಾರ್ಯದರ್ಶಿ ದತ್ತಾತ್ರೇಯ ಹೊಸಬಾಳೆ ಅವರೊಂದಿಗೆ ಕಾಣಿಸಿಕೊಂಡಿರುವ ಫೋಟೋ ವನ್ನು ಮತ್ತೊಂದು ಫೋಟೋದೊಂದಿಗೆ ಕ್ರಾಪ್ ಮಾಡಲಾಗಿದೆ. ಮಾರ್ಚ್ 11, 2022 ರಂದು ಗುಜರಾತ್‌ನ ಕರ್ಣಾವತಿಯಲ್ಲಿ ನಡೆದ ಆರ್‌ಎಸ್‌ಎಸ್‌ನ ಅಖಿಲ ಭಾರತೀಯ ಪ್ರತಿನಿಧಿ ಸಭೆಯಲ್ಲಿ ಫೋಟೋ ತೆಗೆಯಲಾಗಿದೆ ಎಂದು ಲೇಖನದಲ್ಲಿ ಹೇಳಲಾಗಿದೆ.

Original photo on RSSs website

ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆದ ಚಿತ್ರ ಮತ್ತು RSS ವೆಬ್‌ಸೈಟ್‌ನಲ್ಲಿರುವ ಫೋಟೋದ ಹೋಲಿಕೆಯನ್ನು ಕೆಳಗೆ ನೋಡಬಹುದು. ಮೂಲ ಚಿತ್ರದಲ್ಲಿ ಮುರ್ಮು ಕಾಣಿಸುವುದಿಲ್ಲ.

Comparison between the viral fake photo and the original photo. The viral image has been flipped horizontally

ದ್ರೌಪದಿ ಮುರ್ಮು ಅವರ ಅಸಲಿ ಫೋಟೋ

ಜಾರ್ಖಂಡ್ ಮುಖ್ಯಮಂತ್ರಿ ಹೇಮಂತ್ ಸೊರೆನ್ ಅವರು ದ್ರೌಪದಿ ಮುರ್ಮು ಅವರು ಮುಖ್ಯಮಂತ್ರಿಯಾಗಿ 1 ನೇ ವರ್ಷದ ಅವಧಿಯನ್ನು ಪೂರ್ಣಗೊಳಿಸಿದ ಸಂದರ್ಭದಲ್ಲಿ 29 ಡಿಸೆಂಬರ್ 2020 ರಂದು ರಾಂಚಿಯ ಮೊಹಬಾದಿ ಮೈದಾನದಲ್ಲಿ ಅವರನ್ನು ಸ್ವಾಗತಿಸಿದರು. ಆಗ ಸೆರೆಯಾದ ಫೋಟೋವನ್ನು ಭಾಗವತ್ ಇರುವ ಫೋಟೊದೊಂದಿಗೆ ಸೇರಿಸಿ ಹಂಚಿಕೊಳ್ಳಲಾಗಿದೆ.

ಈ ಮೇಲಿನ ಎರಡೂ ಬೇರೆ ಬೇರೆ ಫೋಟೊಗಳನ್ನು ಎಡಿಟ್ ಮಾಡಿ ಒಂದೇ ಪೋಟೊ ಎನ್ನುವಂತೆ ಕ್ರಾಪ್ ಮಡಲಾಗಿದೆ, ಎರಡು ಬೇರೆ ಬೇರೆ ಫೋಟೋಗಳನ್ನು ಕೆಳಗೆ ನೋಡಬಹುದು.

Comparison between Draupadi Murmus photo in the viral image and her photo in the original image.

ಒಟ್ಟಾರೆಯಾಗಿ ಹೇಳುವುದಾದರೆ ಎರಡು ಬೇರೆ ಬೇರೆ ಫೋಟೋಗಳನ್ನು ಎಡಿಟ್ ಮಾಡಿ  ದ್ರೌಪದಿ ಮುರ್ಮು ಹಾಗೂ ಮೋಹನ್ ಭಾಗವತ್ ಜೊತೆಯಲ್ಲಿ ನಿಂತು ಚಿತ್ರಕ್ಕೆ ನಮನ ಸಲ್ಲಿಸುತ್ತಿರುವಂತೆ ಹಂಚಿಕೊಳ್ಳಲಾಗಿದೆ. ಈ ಫೋಟೊದ ಅಸಲಿಯತ್ತನು ಅರಿಯದ ನ್ಯಾಯವಾದಿ ಪ್ರಾಶಾಂತ್ ಭೂಷಣ್ ತಮ್ಮ ಟ್ವಿಟರ್‌ನಲ್ಲಿ ಹಂಚಿಕೊಂಡಿದ್ದಾರೆ. ಆದರೆ ಇದು ಎಡಿಟ್ ಮಾಡಿರುವ ಫೋಟೋ ಆಗಿದೆ. ಹಾಗಾಗಿ ಫೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : ಫ್ಯಾಕ್ಟ್‌ಚೆಕ್: ಹಾವಿಗೆ ರೆಕ್ಕೆ ಇದೆ ಎಂಬುದು ನಿಜವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights