ಇಂದು ಹೊಸದಾಗಿ 16 ಕೊರೊನಾ ಪಾಸಿಟಿವ್ : ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 443ಕ್ಕೇರಿಕೆ!

ರಾಜ್ಯದಲ್ಲಿ ಕೊರೊನಾ ಕಡಿಮೆಯಾಗುವ ಲಕ್ಷಣವೇ ಕಾಣಸಿಗುತ್ತಿಲ್ಲ. ಕಾರಣ ಇಂದು ಮದ್ಯಾನದ ಹೊತ್ತಿಗೆ ಹೊಸದಾಗಿ 16 ಕೊರೊನಾ ಪಾಸಿಟಿವ್ ಪ್ರಕರಣಗಳು ಪತ್ತೆಯಾಗಿವೆ.

ಹೌದು… ಇಂದು ಒಂದೇ ದಿನಕ್ಕೆ ಮಂಡ್ಯ, ಧಾರವಾಡ, ವಿಜಯಪುರ ತಲಾ ಎರಡು ಪ್ರಕರಣಗಳು,  ದಕ್ಷಿಣ ಕನ್ನಡದಲ್ಲಿ ಒಂದು ಹಾಗೂ  ಬೆಂಗಳೂರು 9 ಪ್ರಕರಣಗಳು ದಾಖಲಾಗಿದೆ. ಸಂಜೆ ವೇಳೆಗೆ ಮತ್ತಷ್ಟು ಅಧಿಕವಾಗುವ ಸಾಧ್ಯತೆ ಇದೆ. ಈ ಮೂಲಕ ಬೆಂಗಳೂರಿನಲ್ಲಿ ಒಟ್ಟು 100 ಜನರಿಗೆ ಸೋಂಕು ದೃಢಪಟ್ಟಂತಾಗುತ್ತದೆ. ರಾಜ್ಯದಲ್ಲಿ ಸೋಂಕಿತರ ಸಂಖ್ಯೆ 443ಕ್ಕೇ ಏರಿಕೆಯಾಗಿದೆ ಎಂದು ಆರೋಗ್ಯ ಇಲಾಖೆ ಮಾಹಿತಿ ನೀಡಿದೆ.

ನಿನ್ನೆ ಸಂಜೆ 5 ಗಂಟೆಯಿಂದ ಇಂದು ಮಧ್ಯಾಹ್ನ 12 ಗಂಟೆವರೆಗಿನ ಸೋಂಕಿತರ ಮಾಹಿತಿಯನ್ನು ಆರೋಗ್ಯ ಇಲಾಖೆ ಬಿಡುಗಡೆ ಮಾಡಿದೆ. ಇದರಂತೆ, ರಾಜ್ಯದಲ್ಲಿ ಇಂದು ದಾಖಲಾದ ಕೇಸ್​ಗಳು ಸೇರಿದಂತೆ ಸೋಂಕಿತರ ಸಂಖ್ಯೆ 443ಕ್ಕೇರಿದೆ. ಅಲ್ಲದೇ ಒಟ್ಟು 141 ಜನರು ಸಂಪೂರ್ಣ ಗುಣಮುಖರಾಗಿ ಆಸ್ಪತ್ರೆಯಿಂದ ಬಿಡುಗಡೆಯಾಗಿದ್ದರೆ, 17 ಜನರು ಸಾವನ್ನಪ್ಪಿದ್ದಾರೆ.

ಬೆಂಗಳೂರು ಅಲ್ಲದೇ 13 ವರ್ಷದ ಬಾಲಕಿಯೂ ಸೇರಿದಂತೆ ಧಾರವಾಡದಲ್ಲಿ ಎರಡು, ವಿಜಯಪುರದಲ್ಲಿ 2, ಮಂಡ್ಯದಲ್ಲಿ 2 ಹಾಗೂ  ದಕ್ಷಿಣ ಕನ್ನಡದಲ್ಲಿ ಒಂದು ಪ್ರಕರಣ ದಾಖಲಾಗಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights