ಅಸ್ಸಾಂ ಚುನಾವಣೆ: ಕಾಂಗ್ರೆಸ್‌ನಿಂದ ಗೆದ್ದಿದ್ದ ಏಕೈಕ ಅಭ್ಯರ್ಥಿ ಬಿಜೆಪಿಗೆ ಸೇರ್ಪಡೆ!
ಅಸ್ಸಾಂನ ಬೋಡೋಲ್ಯಾಂಡ್ ಟೆರಿಟೋರಿಯಲ್ ಕೌನ್ಸಿಲ್ (ಬಿಟಿಸಿ) ಚುನಾವಣೆಯಲ್ಲಿ ಕಾಂಗ್ರೆಸ್‌ನಿಂದ ಗೆಲವು ಸಾಧಿಸಿದ್ದ ಏಕೈಕ ಅಭ್ಯರ್ಥಿ ಸಾಜಲ್ ಸಿನ್ಹಾ ಅವರು ಬಿಜೆಪಿಯ ಮೈತ್ರಿ ಕೂಟಕ್ಕೆ ಸೇರುವುದಾಗಿ ಪ್ರಕಟಿಸಿದ್ದಾರೆ.
ಪಶ್ವಿಮ ಬಂಗಾಳ ರಾಜ್ಯದ ಗಡಿಗೆ ಹೊಂದಿರುವ ಶ್ರೀರಾಂಪುರದಿಂದ ಗೆಲವು ಸಾಧಿಸಿದ್ದ ಕಾಂಗ್ರೆಸ್‌ನ ಏಕೈಕ ಅಭ್ಯರ್ಥಿಯಾಗಿರುವ ಸಾಜಲ್ ಸಿನ್ಹಾ, ತಮ್ಮ ಕ್ಷೇತ್ರದ ಅಭಿವೃದ್ಧಿಗಾಗಿ ಬಿಜೆಪಿ ಸೇರುವುದಾಗಿ ತಿಳಿಸಿದ್ದಾರೆ.
ಅಸ್ಸಾಂನಲ್ಲಿರುವ ಈಶಾನ್ಯ ಪ್ರಜಾಸತ್ತಾತ್ಮಕ ಒಕ್ಕೂಟ (ಎನ್‌ಇಡಿಎ)ದ ಸಂಚಾಲಕ ಹಾಗೂ ಸಚಿವ ಹಿಮಂತ್ ಬಿಸ್ವಾ ಶರ್ಮಾ ಅವರ ಜೊತೆಗೆ ಮಾತುಕತೆ ನಡೆಸಿದ್ದು, ಬಿಜೆಪಿ ಸೇರುವ ಮೂಲಕ ಬಿಟಿಸಿ ಕೌನ್ಸಿಲ್ ನಲ್ಲಿ ಬಿಜೆಪಿ-ಯುಪಿಪಿಎಲ್-ಜಿಎಸ್ ಪಿ ಮೈತ್ರಿಕೂಟದ ಭಾಗವಾಗುವುದಾಗಿ ಹೇಳಿದ್ದಾರೆ.
ಇದನ್ನೂ ಓದಿ: ರಾಜಸ್ಥಾನ ಚುನಾವಣೆ: ಆಡಳಿತಾರೂಢ ಕಾಂಗ್ರೆಸ್‌ಗೆ ಹೆಚ್ಚು ಸ್ಥಾನ; BJPಗಿಂತ ಸ್ವತಂತ್ರರೇ ಹೆಚ್ಚು ಗೆಲುವು!
40 ಸದಸ್ಯರಿರುವ ಬಿಟಿಸಿ ಕೌನ್ಸಿಲ್ ಚುನಾವಣೆಯಲ್ಲಿ ಬಿಪಿಎಫ್ ಪಕ್ಷವು 17 ಸ್ಥಾನಗಳನ್ನು ಗೆದ್ದರೆ, ಯುನೈಟೆಡ್ ಪೀಪಲ್ಸ್ ಪಾರ್ಟಿ ಲಿಬರಲ್ (ಯುಪಿಪಿಎಲ್) 12, ಬಿಜೆಪಿ 09, ಕಾಂಗ್ರೆಸ್ ಒಂದು ಮತ್ತು ಜಿಎಸ್‌ಪಿ ಪಕ್ಷವು ಒಂದು ಸ್ಥಾನಗಳನ್ನು ಗೆದ್ದಿದೆ.
ಬಿಜೆಪಿ-ಯುಪಿಪಿಎಲ್-ಜಿಎಸ್‌ಪಿ ಪಕ್ಷಗಳು ಸೇರಿ ಕೌನಿಲ್ಸ್‌ನಲ್ಲಿ ಆಡಳಿತ ರಚಿಸುತ್ತಿದ್ದು, ಕಾಂಗ್ರೆಸ್ ಅಭ್ಯರ್ಥಿಯ ಸೇಪಡೆಯೊಂದಿಗೆ ಬಿಜೆಪಿ ಮೈತ್ರಿಕೂಟದ ಬಲ 23ಕ್ಕೆ ಹೆಚ್ಚಿದೆ.
ಇದನ್ನೂ ಓದಿ: ದ್ರಾವಿಡ ನಾಡಲ್ಲಿ ಬಿಜೆಪಿ ಆಟ: ಕೇಸರಿ ಪಡೆಗೆ ಮರುಳಾಗ್ತಾರಾ ತಮಿಳರು?