ಫ್ಯಾಕ್ಟ್‌ಚೆಕ್: ಕಾಂಗ್ರೆಸ್ ಚಿಂತನ ಶಿಬಿರದಲ್ಲಿ ಪಾಕ್ ಧ್ವಜದ ಬಣ್ಣದಿಂದ ಅಲಂಕಾರ ಮಾಡಿದೆ ಎಂದು ಸುಳ್ಳು ಹೇಳಿದ BJP ಬೆಂಬಲಿಗರು

ಇತ್ತೀಚೆಗೆ ರಾಜಸ್ಥಾನದ ಉದಯಪುರದಲ್ಲಿ ನಡೆದ ಕಾಂಗ್ರೆಸ್‌ನ ಮೂರು ದಿನಗಳ ‘ಚಿಂತನ ಶಿಬಿರ’ದ ಚಿತ್ರವೊಂದು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್‌ ಆಗಿದೆ. ಚಿಂತನ ಶಿಬಿರದಲ್ಲಿ ಪಾಕಿಸ್ತಾನದ ಧ್ವಜದ ಬಣ್ಣಗಳನ್ನು ಕಾಂಗ್ರೆಸ್‌ ಬಳಸಿದೆ ಎಂದು ಪೋಸ್ಟ್‌ ಕಾರ್ಡ್ ಕನ್ನಡ  ಆರೋಪಿಸಲಾಗಿದೆ. ಚಾವಣಿ ಅಲಂಕಾರಕ್ಕೆ ಬಳಸಿರುವ ಬಟ್ಟೆಯು ಹಸಿರು ಮತ್ತು ಬಿಳಿ ಬಣ್ಣದ್ದಾಗಿದೆ. ಆದರೆ ನೆಲಕ್ಕೆ ಕೇಸರಿ ಬಣ್ಣದ ನೆಲಹಾಸನ್ನು ಬಳಸಲಾಗಿದೆ ಎಂದು ಚಿತ್ರದ ಜೊತೆ ವಿವರಿಸಲಾಗಿದೆ. ಹಾಗಿದ್ದರೆ ಪೋಸ್ಟ್‌ ಕಾರ್ಡ್ ಪ್ರತಿಪಾದಿಸಿದಂತೆ ಕಾಂಗ್ರೆಸ್‌ನ ಚಿಂತನಾ ಶಿಬಿರದಲ್ಲಿ ಪಾಕ್ ಧ್ವಜದ ಬಣ್ಣದ ಅಲಂಕಾರ ಮಾಡಲಾಗಿತ್ತೆ ಎಂದು ಪರಿಶೀಲಿಸೋಣ.

 

ಏನ್‌ಸುದ್ದಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
100 ₹200 ₹500 ₹1000 Others

ಫ್ಯಾಕ್ಟ್‌ಚೆಕ್:

ಫೋಟೋಗಳೊಂದಿಗೆ  ನೀಡಲಾಗಿರುವ ಮಾಹಿತಿ ಸುಳ್ಳು ಎಂದು ‘ದಿ ಕ್ವಿಂಟ್‌’ ವರದಿ ಮಾಡಿದೆ. ಕಾಂಗ್ರೆಸ್‌ನ ಹಲವು ನಾಯಕರ ಟ್ವಿಟರ್‌ ಖಾತೆಗಳಲ್ಲಿ ಮತ್ತು ಪಕ್ಷದ ಅಧಿಕೃತ ಟ್ವಿಟರ್‌ ಖಾತೆಯಲ್ಲಿ ಕಾರ್ಯಕ್ರಮದ ಚಿತ್ರಗಳನ್ನು ಪೋಸ್ಟ್‌ ಮಾಡಲಾಗಿದೆ.

BJP  ಮತ್ತು ಬಲಪಂಥೀಯ ಪ್ರತಿಪಾದಕರು ಸಾಮಾಜಿಕ ಮಾಧ್ಯಮಗಳಲ್ಲಿ ಪ್ರತಿಪಾದಿಸಿ ಮಾಡಲಾದ ಪೋಸ್ಟ್‌ನಲ್ಲಿ ಅಪ್‌ಲೋಡ್‌ ಮಾಡಲಾಗಿರುವ ಫೋಟೋಗಳು ಎಡಿಟ್ ಮತ್ತು ಕ್ರಾಪ್ ಮಾಡಿದ ಪೋಟೋಗಳಾಗಿವೆ ಎಂದು ತಿಳಿದು ಬಂದಿದೆ. ಕಾಂಗ್ರೆಸ್‌ ಪಕ್ಷದ ಅಧಿಕೃತ ಟ್ವೀಟರ್ ಗಳಲ್ಲಿ ಸರ್ಚ್ ಮಾಡಿದಾಗ ಚಿಂತನಾ ಶಿಬಿರದಲ್ಲಿ ಮೇಲ್ಚಾವಣಿಗೆ ಬಳಸಲಾದ ಬಟ್ಟೆಗಳು ಪಾಕ್ ಧ್ವಜದ ಬಣ್ಣವಾದ ಬಿಳಿ ಮತ್ತು ಹಸಿರು ಮಾತ್ರವಲ್ಲದೆ ಕೇಸರಿಯೂ ಇರುವುದನ್ನು ನೋಡಬಹುದು.

ಚಾವಣಿಗೆ ಕೇಸರಿ, ಬಿಳಿ, ಹಸಿರು ಬಣ್ಣದ ಬಟ್ಟೆಗಳನ್ನು ಬಳಸಲಾಗಿದೆ. ಪಕ್ಷದ ಯೂಟ್ಯೂಬ್‌ ಚಾನಲ್‌ ಕೂಡಾ ಕಾರ್ಯಕ್ರಮದ ಹಲವು ವಿಡಿಯೊಗಳನ್ನು ಪ್ರದರ್ಶಿಸಿದೆ. ಕಾರ್ಯಕ್ರಮದಲ್ಲಿ ತ್ರಿವರ್ಣ ಧ್ವಜದ ಬಣ್ಣವನ್ನು ಚಾವಣಿಗೆ ಬಳಸಿರುವುದು ಸ್ಪಷ್ಟವಾಗಿ ಕಾಣುತ್ತದೆ ಎಂದು ದಿ ಕ್ವಿಂಟ್‌ ವರದಿಯಲ್ಲಿ ವಿವರಿಸಲಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ ಕಾಂಗ್ರೆಸ್ ಪಕ್ಷವು ಆಯೋಜಿಸಿದ್ದ ಚಿಂತನಾ ಶಿಬಿರದಲ್ಲಿ ಭಾರತ ಧ್ವಜದ ಬಣ್ಣದಿಂದ ಅಲಂಕಾರ ಮಾಡಿದ್ದ ಶಿಬಿರದ ಒಳಾಂಗಣವನ್ನು ಪಾಕ್ ಧ್ವಜದ ಬಣ್ಣದಿಂದ ಅಲಂಕಾರ ಮಾಡಲಾಗಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಪೋಸ್ಟ್‌ಗಳನ್ನು ಮಾಡುವ ಮೂಲಕ ತಪ್ಪಾಗಿ ಹಂಚಿಕೊಂಡಿದೆ. ಹಾಗಾಗಿ BJP ಯು ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ.


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಧನುಷ್‌ರವರ ‘ಕೊಲವೆರಿ ಡಿ’ ಹಾಡನ್ನು ಬೇರೆ ಜಾಹಿರಾತಿನಿಂದ ಕದಿಯಲಾಗಿದೆ ಎಂಬುದು ಸತ್ಯವೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights