ಫ್ಯಾಕ್ಟ್‌ಚೆಕ್: ಅಂಬೇಡ್ಕರ್‌ರವರ ಮಗಳು ಅಮೇರಿಕಾದ ಸುಪ್ರಿಂ ಕೋರ್ಟ್ ನ್ಯಾಯಾಧೀಶೆ ಎಂಬುದು ನಿಜವೇ?
ಸಾಮಾಜಿಕ ಜಾಲತಾಣವಾದ ವಾಟ್ಸಾಪ್‌ನಲ್ಲಿ ಸುದ್ದಿಯೊಂದು ಹರಿದಾಡುತ್ತಿದ್ದು, ಅಮೇರಿಕಾ ದೇಶದ ಸುಪ್ರೀಂ ಕೋರ್ಟ್ ನ್ಯಾಯಾಧೀಶರಾಗಿ ವಿಶ್ವಜ್ಞಾನಿ ಡಾ.ಬಿ.ಆರ್.ಅಂಬೇಡ್ಕರ್‌ರವರ ಪುತ್ರಿ ಮಂಜರಿ ಚಾವ್ಲಾ ನೇಮಕಗೊಂಡಿದ್ದಾರೆ ಎಂದು ಹಂಚಿಕೊಳ್ಳಲಾಗುತ್ತಿದೆ. ಇದನ್ನು ಯಾವ ಮುಖ್ಯವಾಹಿನಿಗಳು ಸುದ್ದಿ ಮಾಡದ ಕಾರಣ ಸಾಮಾಜಿಕ ಜಾಲತಾಣದಲ್ಲಿ ಪ್ರಚಾರ ಮಾಡಿ ಎಂಬ ಸಂದೇಶಗಳನ್ನುವಾಟ್ಸಾಪ್‌ನಲ್ಲಿ ಹರಿಯಬಿಡಲಾಗುತ್ತಿದೆ.


ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಮಗಳು ಅಮೇರಿಕಾದ Supreme Court ಗೆ ನ್ಯಾಯಾಧೀಶೆ ಆಗಿ ನೇಮಕಗೊಂಡಿದ್ದಾರೆ ಎನ್ನು ಸುದ್ದಿ ನಿಜವೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಸಂದೇಶದ ಸತ್ಯಾಸತ್ಯತೆಗಳನ್ನು ಪರಿಶೀಲಿಸೋಣ.
ಏನ್‌ಸುದ್ದಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
100 ₹200 ₹500 ₹1000 Others
ಫ್ಯಾಕ್ಟ್‌ಚೆಕ್ :
ವಾಟ್ಸಾಪ್ ಸಂದೇಶವನ್ನು ಸೂಕ್ಷ್ಮವಾಗಿ ಪರಿಶೀಲಿಸಿದಾಗ ಸಂದೇಶವನ್ನು ಹೆಚ್ಚು ಪ್ರಚಾರ ಮಾಡಿ ಎಂದು ಹೇಳುವ ಹೇಳಿಕೆಯೊಂದಿಗೆ ನರೇಂದ್ರ ಬಾಬು, ವಕೀಲರು ಕೋಲಾರ ಎಂದು ಒಂದು ಮೊಬೈಲ್ ಸಂಖ್ಯೆಯನ್ನು ನೀಡಲಾಗಿದೆ ಆ ಸಂಖ್ಯೆಯು 7022272226 ಎಂದು ನಮೂದಿಸಲಾಗಿದೆ. ಈ ಸಂದೇಶದ ಸತ್ಯಾಸತ್ಯತೆಯನ್ನು ಪರಿಶೀಲಿಸಲು ಕರೆ ಮಾಡಿದರೆ ಕರೆಯನ್ನು ಸ್ವೀಕರಿಸಲಿಲ್ಲ. ಹಾಗಾಗಿ ಅವರಿಂದ ಹೆಚ್ಚಿನ ಮಾಹಿತಿ ಪಡೆಯಲು ಸಾಧ್ಯವಾಗಿಲ್ಲ.
ಮಂಜರಿ ಚಾವ್ಲಾ ಅಂಬೇಡ್ಕರ್ ಅವರ ಮಗಳಾ?
ಮಂಜರಿ ಚಾವ್ಲಾ ಅಂಬೇಡ್ಕರ್ ಅವರ ಮಗಳಾ? ಎಂದು ಪರಿಶೀಲಿಸಿದಾಗ ಸತ್ಯ ಹೊರಬಿದ್ದಿದೆ. ವಾಸ್ತವವಾಗಿ ಬಾಬಾ ಸಾಹೇಬ್ ಅಂಬೇಡ್ಕರ್ ಅವರಿಗೆ 5 ಜನ ಮಕ್ಕಳು. ಐದು ಮಕ್ಕಳಲ್ಲಿ ನಾಲ್ಕು ಮಕ್ಕಳು ಅನಾರೋಗ್ಯದ ಕಾರಣ ತೀರಿಕೊಂಡರು ಕೊನೆಗೆ ಉಳಿದದ್ದು ಯಶವಂತ ಮಾತ್ರ. (ಕೆಳಗೆ ಮಕ್ಕಳ ಹೆಸರನ್ನು ನೋಡಬಹುದು)
1. ಯಶವಂತ್
2. ರಮೇಶ್
3. ಇಂದು
4. ಗಂಗಾಧರ್
5. ರಾಜರತ್ನ
ಹಾಗಾಗಿ ಮಂಜರಿ ಚಾವ್ಲಾ ಎನ್ನುವ ಮಹಿಳೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪುತ್ರಿ ಎಂಬುದು ಸುಳ್ಳು, ನಂತರದಲ್ಲಿ ಅಂಬೇಡ್ಕರ್ ಅವರ ವಂಶ ವೃಕ್ಷಕ್ಕೂ ಮಂಜರಿ ಚಾವ್ಲಾಗೂ ಯಾವ ಸಂಬಂಧವೂ ಇಲ್ಲ. ಅಂಬೇಡ್ಕರ್ ಅವರ ವಂಶ ವೃಕ್ಷವನ್ನು ಕೆಳಗೆ ನೀಡಲಾಗಿದೆ.


ಮಂಜರಿ ಚಾವ್ಲ ಹೆಸರು ಅಂಬೇಡ್ಕರ್ ಅವರ ವಂಶವೃಕ್ಷದ ಯಾವ ಪಟ್ಟಿಯಲ್ಲು ಇಲ್ಲ ಹಾಗಾಗಿ ಅವರನ್ನು ಅಂಬೇಡ್ಕರ್ ಮಗಳು ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳು ಸುದ್ದಿ ಹರಡಲಾಗಿದೆ.
ಆದರೆ ಮಂಜರಿ ಚಾವ್ಲಾ ಅಮೇರಿಕಾದ ಕ್ಯಾಲಿಫೋರ್ನಿಯಾದ ಸುಪ್ರೀಂ ಕೋರ್ಟ್‌ನ ನ್ಯಾಯಾಧೀಶೆಯಾಗಿ ಆಯ್ಕೆಯಾಗಿದ್ದಾರೆ ಎನ್ನುವ ಸುದ್ದಿಗಳು 2018ರಲ್ಲಿ ಸುದ್ದಿ ಮಾಧ್ಯಮಗಳು ವರದಿ ಮಾಡಿದ್ದವು ಅವುಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು. DNA ಸುದ್ದಿ ಜಾಲತಾಣದಲ್ಲಿ ಮಂಜರಿ ಚಾವ್ಲಾ ನ್ಯಾಯಾಧೀಶೇಯಾಗಿ ನೇಮಕಗೊಂಡ ಸುದ್ದಿಯ ವರದಿಯನ್ನು ನೋಡಬಹುದು.

ಹಾಗೆಯೇ ಟ್ವೀಟರ್ ಮತ್ತು ಪೇಸ್‌ಬುಕ್‌ನಲ್ಲಿ ಮಂಜರಿ ಸಾಧನೆ ಬಗ್ಗೆ ಹೆಮ್ಮೆಯಿಂದ ಪೋಸ್ಟ್ ಮಾಡಿರುವುದನ್ನು ಇಲ್ಲಿ ನೋಡಬಹುದು.
Jaipur’s #ManjariChawla is appointed as a judge in California's Supreme Court. She is the first Asian woman to be appointed a judge.#Rajasthan #Jaipur pic.twitter.com/gJKx0TBnBu
— beatofjoypur (@jaipurbeat) September 10, 2018

ಮಂಜರಿ ಅವರು ಕ್ಯಾಲಿಫೋರ್ನಿಯಾದ ಸುಪ್ರೀಂ ಕೋರ್ಟ್‌ನಿಂದ ನ್ಯಾಯಾಧೀಶರಾಗಿ ನೇಮಕಗೊಂಡ ಮೊದಲ ಏಷ್ಯಾದ ಮಹಿಳೆಯಾಗಿದ್ದಾರೆ. ಅವರು ವಿಶ್ವದ ಅತ್ಯಂತ ಪ್ರತಿಷ್ಠಿತ ಯೇಲ್ ವಿಶ್ವವಿದ್ಯಾಲಯದಲ್ಲಿ ತನ್ನ ಅಧ್ಯಯನವನ್ನು ಪೂರ್ಣಗೊಳಿಸಿದ್ದಾರೆ. ಅಮೆರಿಕದ ಮಾಜಿ ಅಧ್ಯಕ್ಷ ಜಾರ್ಜ್ ಡಬ್ಲ್ಯೂ ಬುಷ್, ಬಿಲ್ ಕ್ಲಿಂಟನ್ ಮತ್ತು ಮಾಜಿ ವಿದೇಶಾಂಗ ಸಚಿವೆ ಹಿಲರಿ ಕ್ಲಿಂಟನ್ ಕೂಡ ಇದೇ ವಿಶ್ವವಿದ್ಯಾಲಯದಲ್ಲಿ ಅಧ್ಯಯನ ಮಾಡಿದ್ದಾರೆ. ಮಂಜರಿಯ ಕುಟುಂಬ ಈಗ ಯುನೈಟೆಡ್ ಸ್ಟೇಟ್ಸ್‌ನಲ್ಲಿ ನೆಲೆಸಿದೆ. ಮಂಜರಿ ಅವರು ಸ್ಯಾನ್ ಫ್ರಾನ್ಸಿಸ್ಕೋ ಮತ್ತು ಚಿಕಾಗೋ ನ್ಯಾಯಾಲಯಗಳಲ್ಲಿ ವಕೀಲಿಕೆಯನ್ನು ಅಭ್ಯಾಸ ಮಾಡಿದ್ದಾರೆ ಎಂದು DNA ವರದಿ ಮಾಡಿದೆ.

ಮಂಜರಿ ಚಾವ್ಲಾ ರಾಜಸ್ಥಾನದ ಗ್ರಾಮೀಣ ಪ್ರದೇಶದಿಂದ ಬಂದಿರುವ ಪ್ರತಿಭೆಯಾಗಿದ್ದು, ಅಂತರಾಷ್ಟ್ರೀಯ ನ್ಯಾಯಾಲಯದಲ್ಲಿ ನ್ಯಾಯಾಧೀಶರಾಗಿ ನೇಮಕಗೊಂಡ ನ್ಯಾಯಮೂರ್ತಿ ದಲ್ವೀರ್ ಸಿಂಗ್ ಭಂಡಾರಿ ನಂತರ ರಾಜ್ಯದ ನ್ಯಾಯಾಂಗ ಕ್ಷೇತ್ರದ ವರ್ಚಸ್ಸನ್ನು ಹೆಚ್ಚಿಸಿದ ಕೀರ್ತಿ ಮಂಜರಿ ಅವರದ್ದು.
ಒಟ್ಟಾರೆಯಾಗಿ ಹೇಳುವುದಾದರೆ ಮಂಜರಿ ಚಾವ್ಲಾ ಅಮೇರಿಕಾದ ಪ್ರತಿಷ್ಟಿತ ಸುಪ್ರೀಂ ಕೋರ್ಟ್‌ನಲ್ಲಿ ನ್ಯಾಯಾಧೀಶೆ ಹುದ್ದೆಯನ್ನು ಅಲಂಕರಿಸಿದ್ದು ನಿಜ, ಆದರೆ ಅವರು ಡಾ. ಬಾಬಾ ಸಾಹೇಬ್ ಅಂಬೇಡ್ಕರ್ ಅವರ ಪುತ್ರಿ ಎಂಬುದೆಲ್ಲ ಸುಳ್ಳು . ಹಾಗಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಪ್ರತಿಪಾದಿಸಿರುವ ಸುದ್ದಿ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ.
ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಪೂಜಾರಿಗೆ ಮುಸ್ಲಿಂ ದಂಪತಿ ಸಹಾಯ- ಇದು ನಾಟಕೀಯ ವಿಡಿಯೋ

