ಫ್ಯಾಕ್ಟ್‌ಚೆಕ್: ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆಯಾಗಿದೆ ಎಂದು ಒಡಿಸ್ಸಾದ ಶಿವಲಿಂಗದ ಫೋಟೋವನ್ನು ಹಂಚಿಕೊಂಡ ಈಶ್ವರಪ್ಪ

ಇತ್ತೀಚೆಗೆ ಜ್ಞಾನವಾಪಿ ಮಸೀದಿಯಲ್ಲಿ ನಡೆದ ವಿಡಿಯೊ ಸಮೀಕ್ಷೆ ವೇಳೆ  ‘ಶಿವಲಿಂಗ’ ಕಂಡುಬಂದಿದೆ ಎಂದು ಹೇಳಿಕೊಂಡು ಕೆಲವು ಚಿತ್ರಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ. ಸದ್ಯ ಎಲ್ಲಾ ಫೋಟೋಗಳು ವೈರಲ್ ಆಗುತ್ತಿದ್ದು ವಾಸ್ತವ ಏನೆಂದು ತಿಳಿದುಕೊಳ್ಳಬೇಕಿದೆ. ಜ್ಞಾನವಾಪಿಯಲ್ಲಿ ಶಿವಲಿಂಗ ಪತ್ತೆಯಾಗಿದೆ ಎಂದು ಯಾವ ಯಾವ ಫೋಟೋಗಳನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿದೆ ಎಂದು ನೋಡೋಣ.

ಮಾಜಿ ಸಚಿವ ಕೆ.ಎಸ್‌ ಈಶ್ವರಪ್ಪನ ಪೋಸ್ಟ್

Photo 1

ಮಾಜಿ ಸಚಿವ ಕೆ.ಎಸ್‌ ಈಶ್ವರಪ್ಪ ಹೆಸರಿನ ಫೇಸ್‌ಬುಕ್‌ ಪೇಜ್‌ನಲ್ಲಿ ಪೋಸ್ಟ್‌ ಒಂದನ್ನು ಶೇರ್ ಮಾಡಿದ್ದು ಮಾಡಿದ್ದು ಅದರಲ್ಲಿ “ಜ್ಞಾನವಾಪಿ ಮಸೀದಿಯಲ್ಲಿ ತ್ರೈಲೋಕ್ಯಮಹಾದೇವ ನಂದಿ ಹಾಗೂ ಶಿವಲಿಂಗ ವಿಗ್ರಹ ಪತ್ತೆಯಾಗಿರುವುದು ಬಚ್ಚಿಟ್ಟ ಕ್ರೌರ್ಯದ ಇತಿಹಾಸವನ್ನ ತೆರೆದಿಟ್ಟಿದೆ. ದೇಶದಲ್ಲಿರುವ ಎಲ್ಲ ಪುರಾತನ ಮಸೀದಿಗಳನ್ನು ಹಿಂದೂ ದೇವಾಲಯಗಳನ್ನು ಧ್ವಂಸ ಮಾಡಿಯೇ ಕಟ್ಟಲಾಗಿದೆ ಹೊರತು ದೈವಭಕ್ತಿಯಿಂದ ಕಟ್ಟಿದ್ದಲ್ಲ. ದೋಷವಿರುವುದು ಮುಸಲ್ಮಾನರಲ್ಲಿ ಅಲ್ಲ ಮುಸಲ್ಮಾನರ ಧರ್ಮಗ್ರಂಥದಲ್ಲಿ”. ಎಂಬ ಹೇಳಿಕೆಯೊಂದಿಗೆ ಹಂಚಿಕೊಂಡಿದ್ದಾರೆ.

 

350 ವರ್ಷಗಳ ಕುತಂತ್ರದಾಟಕ್ಕೆ ತೆರೆ!

Photo 2:
ಕಾಶಿ ಜ್ಞಾನವ್ಯಾಪಿ ಮಸೀದಿಯ ಕೊಳದಲ್ಲಿನ ನೀರನ್ನು ಖಾಲಿ ಮಾಡುತ್ತಿದ್ದಂತೆ.. ಸಾಕ್ಷಾತ್ ವಿಶ್ವನಾಥನ (ಶಿವಲಿಂಗ) ದರ್ಶನ! ಎಂದು ಮತ್ತೊಂದು ಫೋಟೋವನ್ನು ಫೇಸ್‌ಬುಕ್ ಬಳಕೆದಾರರೊಬ್ಬರು ಪೋಸ್ಟ್ ಮಾಡಿದ್ದು, 350 ವರ್ಷಗಳ ಕುತಂತ್ರದಾಟಕ್ಕೆ ತೆರೆ ಎಂದು ಬರೆದಿದ್ದಾರೆ.
Photo 3

ಮತ್ತೊಬ್ಬ ಫೇಸ್‌ಬುಕ್ ಬಳಕೆದಾರರೊಬ್ಬರು ಫೊಸ್ಟ್‌ವೊಂದನ್ನು ಮಾಡಿದ್ದುಇಂದು ಬಹಳ ಸಂತೋಷದ ಸೋಮವಾರ ಮತ್ತು ಹುಣ್ಣಿಮೆ ಕೂಡ, ಜ್ಞಾನವಾಪಿ ಸಮೀಕ್ಷೆಯ ವೇಳೆ ಬಾವಿಯೊಳಗಿಂದ ಶಿವಲಿಂಗ ಪತ್ತೆಯಾಗಿದೆ.. ಸುಮಾರು 12 ಅಡಿಗಳಿಗಿಂತ ದೊಡ್ಡದು. ಜ್ಞಾನವಾಪಿ ದೇವಸ್ಥಾನದಲ್ಲಿ ಶಿವಲಿಂಗ ಪತ್ತೆಯಾದ ಪ್ರದೇಶವನ್ನು ಸೀಲ್ ಮಾಡಲು ವಾರಣಾಸಿ ಜಿಲ್ಲಾ ನ್ಯಾಯಾಲಯ ಆದೇಶ ನೀಡಿದೆ. ಎಂದು ಪೋಸ್ಟ್‌ ಮೂಲಕ ಫೋಟೋವನ್ನು ಶೇರ್ ಮಾಡಿದ್ದಾರೆ.

“ಜ್ಞಾನವಾಪಿ ಮಸೀದಿ ಆವರಣದ ಸ್ಥಳದಲ್ಲಿ ಬಿಗಿ ಪೊಲೀಸ್ ಬಂದೂಬಸ್ತ್ ಮಾಡುವಂತೆ ನ್ಯಾಯಾಲಯವು  ಆದೇಶಿಸಿದೆ. ಅಲ್ಲಿ ವಕೀಲ ಕಮಿಷನರ್ ಸಮೀಕ್ಷೆಯಲ್ಲಿ ಶಿವಲಿಂಗವನ್ನು ಪತ್ತೆ ಮಾಡಿದ್ದಾರೆ ಎಂದು ಕೆಲವು ಸುದ್ದಿ ವಾಹಿನಿಗಳು ವರದಿ ಮಾಡಿದೆ “. ಹಾಗಿದ್ದರೆ ಮಸೀದಿಯಲ್ಲಿ ಶಿವಲಿಂಗ ಪತ್ತೆಯಾಗಿದೆಯೇ ಹಾಗೆಯೇ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿರುವ ಶಿವಲಿಂಗದ ಹಲವು ವಿಡಿಯೊ ಮತ್ತು ಫೋಟೋಗಳು ಜ್ಞಾನವಾಪಿ ಮಸೀದಿ ಆವರಣದ ಪತ್ತೆಯಾದ ಫೋಟೋಗಳೇ? ಎಂದು  ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.
ಏನ್‌ಸುದ್ದಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
100 ₹200 ₹500 ₹1000 Others

ಫ್ಯಾಕ್ಟ್‌ಚೆಕ್:

ಫೋಟೋ 1:

ಸೋಶಿಯಲ್ ಮೀಡಿಯಾದಲ್ಲಿ ವೈರಲ್‌ ಆಗಿರುವ ಕೆಎಸ್‌ ಈಶ್ವರಪ್ಪ ಹೆಸರಿನಲ್ಲಿ ಫೋಸ್ಟ್‌ ಮಾಡಿದ ದೊಡ್ಡ ಶಿವಲಿಂಗದ ಫೋಟೋವನ್ನು ಗೂಗಲ್ ರಿವರ್ಸ್ ಇಮೇಜ್ ಸರ್ಚ್ ಮೂಲಕ ಫೋಟೋವನ್ನು ರನ್ ಮಾಡಿದಾಗ, ಫೋಟೋ ಒಡಿಸ್ಸಾದಲ್ಲಿರುವ ಬಾಬಾ ಭುಸಂದೇಶ್ವರ ದೇವಾಲಯಕ್ಕೆ ಸಂಬಂಧಿಸಿದೆ ಎಂದು ಕಂಡುಬಂದಿದೆ. ಆ ದೇವಾಲಯದ ಇತರ ಫೋಟೋಗಳನ್ನು ಇಲ್ಲಿ, ಇಲ್ಲಿ ಮತ್ತು ಇಲ್ಲಿ ನೋಡಬಹುದು.

ಹಾಗಾಗಿ, ಕೆಎಸ್‌ ಈಶ್ವರಪ್ಪ ಹೆಸರಿನಲ್ಲಿ ಮಾಡಿರುವ ಪೋಸ್ಟ್‌ನಲ್ಲಿ ಜ್ಞಾನವಾಪಿ ಮಸೀದಿಯಲ್ಲಿ ತ್ರೈಲೋಕ್ಯಮಹಾದೇವ ನಂದಿ ಹಾಗೂ ಶಿವಲಿಂಗ ವಿಗ್ರಹ ಪತ್ತೆಯಾಗಿರುವುದು ಬಚ್ಚಿಟ್ಟ ಕ್ರೌರ್ಯದ ಇತಿಹಾಸವನ್ನ ತೆರೆದಿಟ್ಟಿದೆ. ಎಂದು ಪೋಸ್ಟ್ ಮಾಡಿದ್ದರು, ಆದರೆ ಮಾಜಿ ಸಚಿವ ಕೆಎಸ್‌ ಈಶ್ವರಪ್ಪ ಮಾಡಿರುವ ಪೋಸ್ಟ್‌ನಲ್ಲಿರುವ ಫೋಟೋದಲ್ಲಿ ಜ್ಞಾನವಾಪಿ ಮಸೀದಿಯಲ್ಲಿರುವ ‘ಶಿವಲಿಂಗ’ ಅಲ್ಲ.

ಫೋಟೋ 2:

ಈ ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಮತ್ತು ನಂದಿ ಫೋಟೋ ಎಂದು  ಹೇಳಿಕೊಂಡು ಹಂಚಿಕೊಳ್ಳಲಾಗಿರುವ ಫೋಟೋವನ್ನು ಗೂಗಲ್‌ನಲ್ಲಿ ಸರ್ಚ್ ಮಾಡಿದಾಗ ಅದು ಸುಮಾರು ಎರಡು ವರ್ಷದಿಂದ ಇಂಟರ್‌ನೆಟ್‌ ನಲ್ಲಿ (ಸಾಮಾಜಿಕ ಮಾಧ್ಯಮಗಳಾದ ಫೇಸ್‌ಬುಕ್, ಟ್ವಿಟರ್ ಮತ್ತು ಫೇಸ್‌ಬುಕ್‌ನಲ್ಲಿ) ಲಭ್ಯವಿರುವುದಾಗಿ ಕಂಡು ಬಂದಿದೆ. ಶಿವಲಿಂಗ ಮತ್ತು ನಂದಿ ಚಿತ್ರವು ಡಿಜಿಟಲ್ ಆರ್ಟ್ ಮೂಲಕ ಚಿತ್ರಿಸಲಾಗಿದೆ ಎಂದು ತಿಳಿದು ಬಂದಿದೆ. ಹಾಗಾಗಿ ಫೇಸ್‌ಬುಕ್‌ ಫೋಸ್ಟ್‌ನಲ್ಲಿ ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಎಂದು ಪ್ರತಿಪಾದಿಸಿದ ಫೋಸ್ಟ್ ಸುಳ್ಳಾಗಿದೆ.

ಟ್ವಿಟರ್‌ನಲ್ಲಿ ಸುಮಾರು 2020ರಿಂದಲೂ ನಂದಿ ಮತ್ತು ಶಿವಲಿಂಗ ಫೋಟೋಗಳನ್ನು ಸೋಶಿಯಲ್ ಮೀಡಿಯಾದಲ್ಲಿ ಪೋಸ್ಟ್ ಮಾಡಲಾಗಿದೆ. ಹಾಗಾಗಿ ಈ ಚಿತ್ರವು  ಜ್ಞಾನವಾಪಿ ಮಸೀದಿಗೆ ಸಂಬಂಧಿಸಿಲ್ಲ ಎಂದು ಹೇಳಬಹುದು.

 

ಸಂಕ್ಷಿಪ್ತವಾಗಿ ಹೇಳುವುದಾದರೆ, ಜ್ಞಾನವಾಪಿ ಮಸೀದಿಯಲ್ಲಿ ಕಂಡುಬರುವ ‘ಶಿವಲಿಂಗ’ದ ದೃಶ್ಯಗಳೆಂದು ಸಂಬಂಧವಿಲ್ಲದ ಚಿತ್ರಗಳನ್ನು ತಪ್ಪಾಗಿ ಹಂಚಿಕೊಳ್ಳಲಾಗುತ್ತಿದೆ.

ವಿಡಿಯೊ:

ಜ್ಞಾನವಾಪಿ ಮಸೀದಿಗೆ ಸಂಬಂಧಿಸಿದೆ ಎಂದು ಮತ್ತೊಂದು ವಿಡಿಯೊವನ್ನು ಶೇರ್ ಮಾಡಲಾಗುತ್ತಿದೆ. ಆದರೆ ಇದೂ ಕೂಡ ವಾರನಾಸಿಯ ಜ್ಞಾನವಾಪಿ ಮಸೀದಿಯಲ್ಲಿ ಪತ್ತೆಯಾಗಿದೆ ಎಂದು ಹೇಳುವ ಯಾವ ಪುರಾವೆಗಳು ಇಲ್ಲ. ವೀಡಿಯೊದ ನಿಖರವಾದ ಸ್ಥಳವನ್ನು ನಾವು ಕಂಡುಹಿಡಿಯಲಾಗದಿದ್ದರೂ, ವೀಡಿಯೊ ಕನಿಷ್ಠ ಒಂದು ವರ್ಷ ಹಳೆಯದು ಎಂದು ಕಂಡುಬಂದಿದೆ. ಹಾಗಾಗಿ ಇತ್ತೀಚೆಗಷ್ಟೇ ಜ್ಞಾನವಾಪಿ ಮಸೀದಿಯಲ್ಲಿ ಸಮೀಕ್ಷೆ ನಡೆದಿರುವ ಹಿನ್ನೆಲೆಯಲ್ಲಿ ಹಳೆಯ ವಿಡಿಯೋ ಮತ್ತು ಫೋಟೋ ಶೇರ್ ಆಗುತ್ತಿವೆ.

ಒಟ್ಟಾರೆಯಾಗಿ ಹೇಳುವುದಾದರೆ ಜ್ಞಾನವಾಪಿಯಲ್ಲಿ ಶಿವಲಿಂಗ ಮತ್ತು ನಂದಿ ವಿಗ್ರಹ ಪತ್ತೆಯಾಗಿದೆ ಎಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿರುವ ಪೋಸ್ಟ್‌ಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಫೋಟೋಗಳು ಜ್ಞಾನವಾಪಿ ಮಸೀದಿಯಲ್ಲಿ ಪತ್ತೆಯಾದ ಫೋಟೋಗಳಲ್ಲ ಎಂದು ನಮ್ಮ ಪ್ರಾಥಮಿಕ ತನಿಖೆಯಿಂದ ತಿಳಿದು ಬಂದಿದೆ. ಸದ್ಯ ಜ್ಞಾನವಾಪಿ ಮಸೀದಿಯ ವಿಚಾರಣೆಯು ಸುಪ್ರೀಂ ಕೋರ್ಟ್‌ನಲ್ಲಿ ನಡೆಯುತ್ತಿದ್ದು ತೀರ್ಪು ಬಂದ ನಂತರವೇ ವಾಸ್ತವ ಏನೆಂದು ತಿಳಿಯುತ್ತದೆ. ಅಲ್ಲಿಯವರಗೆ ಸುಳ್ಳು ಸುದ್ದಿಯನ್ನು ಹರಡದಂತೆ ಎಚ್ಚರವಹಿಸಿ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ದೇವಾಲಯದಲ್ಲಿ ಸಮಾಧಿ ನಿರ್ಮಿಸಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ ಕಿಡಿಗೇಡಿಗಳು


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

One thought on “ಫ್ಯಾಕ್ಟ್‌ಚೆಕ್: ಜ್ಞಾನವಾಪಿ ಮಸೀದಿಯಲ್ಲಿ ಶಿವಲಿಂಗ ಪತ್ತೆಯಾಗಿದೆ ಎಂದು ಒಡಿಸ್ಸಾದ ಶಿವಲಿಂಗದ ಫೋಟೋವನ್ನು ಹಂಚಿಕೊಂಡ ಈಶ್ವರಪ್ಪ

  • May 18, 2022 at 4:35 pm
    Permalink

    K S Eshwarappa is now unemployed and no job to do. This joker is fedup with political party which he is in.
    God has to save him.

    Reply

Leave a Reply

Your email address will not be published.

Verified by MonsterInsights