ಫ್ಯಾಕ್ಟ್‌ಚೆಕ್: ದೇವಾಲಯದಲ್ಲಿ ಸಮಾಧಿ ನಿರ್ಮಿಸಿದ್ದಾರೆ ಎಂದು ಸುಳ್ಳು ಸುದ್ದಿ ಹಬ್ಬಿಸಿದ ಕಿಡಿಗೇಡಿಗಳು

ಹಿಂದೂ ದೇವಾಲಯದ ಆವರಣದಲ್ಲಿ ಸಮಾಧಿಯಂತಹ ರಚನೆಯನ್ನು ತೋರಿಸುವ ವೀಡಿಯೊದೊಂದಿಗೆ ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಅನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ದೇವಾಲಯವನ್ನು ಅತಿಕ್ರಮಣ ಮಾಡುವ ಉದ್ದೇಶದಿಂದ ಕುರುಕ್ಷೇತ್ರದ ‘ಗೀತಾ ಉಪದೇಶ ಸ್ಥಳ’ದಲ್ಲಿ ಇಸ್ಲಾಮಿಕ್ ಸಮಾಧಿಯನ್ನು ನಿರ್ಮಿಸಲಾಗಿದೆ  ಎಂಬ ಹೇಳಿಕೆಯೊಂದಿಗೆ ವಿಡಿಯೊವನ್ನು ಹಂಚಿಕೊಳ್ಳಲಾಗುತ್ತಿದೆ.

ಸಾಮಾಜಿಕ ಮಾಧ್ಯಮಗಳಲ್ಲಿ  ಹಂಚಿಕೊಳ್ಳಲಾಗುತ್ತಿರುವ ವಿಡಿಯೊ.

ಗೋರಿ ನಿರ್ಮಾಣದ ಹಿಂದೆ ದೇವಸ್ಥಾನವನ್ನು ಒತ್ತುವರಿ ಮಾಡುವ ಹುನ್ನಾರವಿದೆ ಎಂದು ಜಾಲತಾಣ ಬಳಕೆದಾರರು ಆರೋಪಿಸಿದ್ದಾರೆ. ಈ ಆರೋಪದ ಹಿಂದಿರುವ ಸತ್ಯಾಸತ್ಯತೆಗಳನ್ನು ಪರಿಶೀಲಿಸೋಣ.
ಏನ್‌ಸುದ್ದಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
100 ₹200 ₹500 ₹1000 Others

ಫ್ಯಾಕ್ಟ್‌ಚೆಕ್:

ವೈರಲ್ ವೀಡಿಯೊದ ಸ್ಕ್ರೀನ್‌ಶಾಟ್‌ಗಳ  ತೆಗೆದು ಗೂಗಲ್ ರಿವರ್ಸ್ ಇಮೇಜ್‌ ಸರ್ಚ್ ಮಾಡಿದಾಗ  ಕುರುಕ್ಷೇತ್ರದಲ್ಲಿ ಕೆಲವು ದುಷ್ಕರ್ಮಿಗಳು ಭೋರ್ಖಾ (ಅವಿವಾಹಿತರಾಗಿ ಸಾಯುವವರ ನೆನಪಿಗಾಗಿ ನಿರ್ಮಿಸಲಾದ ಹಿಂದೂ ಸಮಾಧಿಯಂತಹ ರಚನೆ) ಮೇಲೆ ನೀಲಿ ಬಟ್ಟೆಯನ್ನು (ಚದ್ದರ್) ಇರಿಸಲಾಗಿದೆ ಎಂಬ ಸುದ್ದಿಯೊಂದು ಲಭ್ಯವಾಗಿದೆ. ವೈರಲ್ ವೀಡಿಯೊದಲ್ಲಿ ತೋರಿಸಲಾಗಿರುವ ಸಮಾಧಿಯ ಆಕಾರದಲ್ಲಿರುವುದು ಇಸ್ಲಾಮಿಕ್ ಗೋರಿ ಅಲ್ಲ, ಹಿಂದೂ ಕುಟುಂಬವು ತಮ್ಮ ಪೂರ್ವಜರ ನೆನಪಿಗಾಗಿ ಹಲವು ವರ್ಷಗಳ ಹಿಂದೆ ನಿರ್ಮಿಸಿದ ಹಿಂದೂಗಳ ಸಮಾಧಿಯ ರಚನೆಯಾಗಿದೆ ಎಂದು ವರದಿಯಲ್ಲಿ ಹೇಳಲಾಗಿದೆ.

ಈ ಲೇಖನವು ವೈರಲ್  ವಿಡಿಯೊದಲ್ಲಿ ತೋರಿಸಿರುವಂತೆಯೇ ರಚನೆಯ ಚಿತ್ರವನ್ನು ಪ್ರಕಟಿಸಿದೆ. ಈ ಎರಡೂ ದೃಶ್ಯಗಳ ಹೋಲಿಕೆಯನ್ನು ಕೆಳಗೆ ನೋಡಬಹುದು. ಆದಾಗ್ಯೂ, ಇದು ಇಸ್ಲಾಮಿಕ್ ರಚನೆಯಲ್ಲ ಎಂದು ಲೇಖನ ವರದಿ ಮಾಡಿದೆ. ಲೇಖನದ ಪ್ರಕಾರ, ಕೆಲವು ಕಿಡಿಗೇಡಿಗಳು ಮೂವತ್ತು ವರ್ಷಗಳ ಹಿಂದೆ ನಿರ್ಮಿಸಲಾದ ಪಂಡಿತ್ ಆತ್ಪಾಲ್ ಅವರ ಪೂರ್ವಜರಿಗೆ ಸೇರಿದ ಭೋರ್ಖಾದ ಮೇಲೆ ಚದ್ದರ್ (786′ ಮತ್ತು ‘ಜೈ ಪಿರ್ ಬೇಬ್ ದಿ’ ಎಂದು ಬರೆಯಲಾಗಿದೆ) ಇರಿಸಿದ್ದಾರೆ.

ಈ ದೇವಾಲಯವನ್ನು ಹಿಂದೂ ಬ್ರಾಹ್ಮಣ ಕುಟುಂಬ ನಿರ್ಮಿಸಿದೆ ಎಂದು ಪೊಲೀಸರು ದೃಢಪಡಿಸಿದ ಮತ್ತೊಂದು ಸುದ್ದಿ ಲೇಖನವನ್ನು ಇಲ್ಲಿ ಓದಬಹುದು. ಹೀಗಾಗಿ ಇಸ್ಲಾಮಿಕ್ ಎಂದು ಹೇಳಲಾದ ರಚನೆಯು ನಿಜವಾಗಿಯೂ ಹಿಂದೂ ರಚನೆಯಾಗಿದೆ ಎಂಬುದು ಸ್ಪಷ್ಟವಾಗಿದೆ.

ಒಟ್ಟಾರೆಯಾಗಿ ಹೇಳುವುದಾದರೆ ವಿಡಿಯೊದಲ್ಲಿ ಉಲ್ಲೇಖಿಸಿರುವಂತೆ ಕುರುಕ್ಷೇತ್ರದಲ್ಲಿ ಗೀತೋಪದೇಶ ನಡೆದಿದ್ದ ಸ್ಥಳದಲ್ಲಿ ಇಸ್ಲಾಮ್‌ಗೆ ಸಂಬಂಧಿಸಿದ ಗೋರಿ ಪತ್ತೆಯಾಗಿಲ್ಲ. ಭೋಕ್ರಾ ಎಂಬ ಸ್ಥಳದಲ್ಲಿ ಗೋರಿ ಸ್ವರೂಪದ ನಿರ್ಮಾಣ ಕಂಡುಬಂದಿದೆ. ಬ್ರಾಹ್ಮಣರ ಕುಟುಂಬವೊಂದು ತಮ್ಮ ಪೂರ್ವಜರ ಸಮಾಧಿಗಳನ್ನು ಈ ಜಾಗದಲ್ಲಿ ನಿರ್ಮಿಸಿದೆ. ಇದನ್ನು ಅಧಿಕಾರಿಗಳು ಹಾಗೂ ಪೊಲೀಸರು ಖಚಿತಪಡಿಸಿದ್ದಾರೆ. ಕೆಲವು ಕಿಡಿಗೇಡಿಗಳು ಈ ಸಮಾಧಿಯ ಮೇಲೆ ಚಾದರ್‌ ಹೊದಿಸಿ, ವಿಡಿಯೊ ಮಾಡಿ ಸಾಮಾಜಿಕ ಜಾಲತಾಣಗಳಲ್ಲಿ ಹರಿಬಿಟ್ಟಿದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ.


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಅಸ್ಸಾಂನಲ್ಲಿ ಮುಸ್ಲಿಮರು ಪ್ರತ್ಯೇಕ ರಾಷ್ಟ್ರಕ್ಕಾಗಿ ಒತ್ತಾಯಿಸಿ ಪ್ರತಿಭಟನೆ ಮಾಡಿದ್ದು ನಿಜವೇ ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.