ಫ್ಯಾಕ್ಟ್‌ಚೆಕ್: ಅಮೆರಿಕಾದಲ್ಲಿ ಬುರ್ಖಾ, ಹಿಜಾಬ್ ಧರಿಸದ ಯುವತಿಗೆ ಥಳಿಸಲಾಗಿದೆ ಎಂಬುದು ನಿಜವೇ?

ವ್ಯಕ್ತಿಯೊಬ್ಬ ಯುವತಿಯ ಮೇಲೆ ಹಲ್ಲೆ ನಡೆಸುತ್ತಿರುವ ವಿಡಿಯೊವೊಂದು ಸಾಮಾಜಿಕ ಜಾಲತಾಣದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ. ಯುವತಿಯು ಎಷ್ಟೆಲ್ಲ ಪರಿಪರಿಯಾಗಿ ಬೇಡಿಕೊಳ್ಳುತ್ತಿದ್ದರು ಬಿಡದ ಆ ವ್ಯಕ್ತಿಯು ಯುವತಿಯ ಜುಟ್ಟು ಹಿಡಿದು ಎಳೆದಾಡಿ ಕಪಾಳೆಕ್ಕೆ ಹೊಡೆದು, ಕಾಲಿನಲ್ಲಿ ಒದೆಯುವ ದೃಶ್ಯವು ವಿಡಿಯೊದಲ್ಲಿ ಸೆರೆಯಾಗಿದೆ. ಬುರ್ಖಾ ಮತ್ತು ಹಿಜಾಬ್‌ ಧರಿಸಲು ನಿರಾಕರಿಸಿದ್ದಕ್ಕಾಗಿ ಯುಎಸ್‌ನಲ್ಲಿ ಮುಸ್ಲಿಂ ವ್ಯಕ್ತಿಯೊಬ್ಬ ತನ್ನ ಅಕ್ಕನನ್ನು ಥಳಿಸುತ್ತಿದ್ದಾನೆ ಎಂಬ ಹೇಳಿಕೆಯೊಂದಿಗೆ ಹಲವರು ಫೇಸ್‌ಬುಕ್‌ನಲ್ಲಿ ವೀಡಿಯೊವನ್ನು ಹಂಚಿಕೊಂಡಿದ್ದಾರೆ.

ಕೆಲವರು ಅದೇ ವೀಡಿಯೊವನ್ನು ಟ್ವಿಟ್ಟರ್‌ನಲ್ಲಿ ಸ್ವಲ್ಪ ವಿಭಿನ್ನವಾದ ಹೇಳಿಕೆಯೊಂದಿಗೆ ಹಂಚಿಕೊಂಡಿದ್ದು ಮುಸ್ಲಿಂ ಯುವತಿಯೊಬ್ಬಳು ಮುಸ್ಲಿಮೇತರ ವ್ಯಕ್ತಿಯೊಂದಿಗೆ ಮದುವೆಯಾಗಲು ಬಯಸಿದ್ದಕ್ಕಾಗಿ ಆಕೆಯ ಸಹೋದರ ಹೊಡೆದಿದ್ದಾನೆ ಎಂದು ಹೇಳಿದ್ದಾರೆ.

ಆರ್ಕೈವ್ ಮಾಡಿದ ಆವೃತ್ತಿಗಳನ್ನು ಇಲ್ಲಿ ಮತ್ತು ಇಲ್ಲಿ ನೋಡಬಹುದು.
ಏನ್‌ಸುದ್ದಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
100 ₹200 ₹500 ₹1000 Others

ಫ್ಯಾಕ್ಟ್‌ಚೆಕ್:

ಟ್ವಿಟರ್‌ನಲ್ಲಿ ಮಾಡಲಾದ ಪೋಸ್ಟ್‌ನ ಆಧಾರದಲ್ಲಿ ಗೂಗಲ್‌ ಕೀ ವರ್ಡ್ ಸರ್ಚ್ ಇಂಜಿನ್ ಯಾಂಡೆಕ್ಸ್‌ನಲ್ಲಿ  ರಿವರ್ಸ್ ಇಮೇಜ್‌ ಸರ್ಚ್ ಮಾಡಿದಾಗ ಅದು ರಷ್ಯಾದ ಸಾಮಾಜಿಕ ಮಾಧ್ಯಮ ಪ್ಲಾಟ್‌ಫಾರ್ಮ್ VK ನಲ್ಲಿ ಇರುವ ಪೋಸ್ಟ್‌ವೊಂದು ಲಭ್ಯವಾಗಿದೆ. ‘REBORN’ ಹೆಸರಿನ ಪುಟವು ಜುಲೈ 6, 2021 ರಂದು ವೀಡಿಯೊವನ್ನು ಹಂಚಿಕೊಂಡಿದೆ. ಅಂದರೆ ಇದು ಇತ್ತೀಚಿನ ಘಟನೆಯಲ್ಲ ಎಂದು ಹೇಳಬಹುದಾಗಿದೆ. ಜೊತೆಗೆ ರಷ್ಯನ್ ಭಾಷೆಯಲ್ಲಿ ಶೀರ್ಷಿಕೆ ಇದ್ದು, ಹಲ್ಲೆಗೊಳಗಾಗುತ್ತಿರುವ ಯುವತಿಯು ರಷ್ಯಾದ ಕ್ರಾಸ್ನೋಡರ್‌ ನಿವಾಸಿಯಾಗಿದ್ದು ತಾನು ಪ್ರೀತಿಸುತ್ತಿದ್ದ ಉಕ್ರೇನ್‌ ನ ಯುವಕನೊಂದಿಗೆ ಓಡಿಹೋಗಲು ಬಯಸಿದ್ದಳು ಎಂದು ಹೇಳಲಾಗಿದೆ.

ಗೂಗಲ್ ಯಾಂಡೆಕ್ಸ್‌ನಲ್ಲಿ ಮತ್ತಷ್ಟು ಸರ್ಚ್ ನಡೆಸಿದಾಗ ಘಟನೆಯ ಕುರಿತು ಅನೇಕ ರಷ್ಯನ್ ಸುದ್ದಿ ವರದಿಗಳನ್ನು ನೋಡಿದ್ದೇವೆ. ಈ ಘಟನೆಯು ಕಳೆದ ವರ್ಷ ನಡೆದಿರುವುದಾಗಿ ಮಾಹಿತಿ ಲಭ್ಯವಾಗಿದೆ. ಜುಲೈ 5, 2021 ರಂದು “life.ru” ಪ್ರಕಾರ, ದಕ್ಷಿಣ ರಷ್ಯಾದ ನಗರವಾದ ಕ್ರಾಸ್ನೋಡರ್‌ನ ರೋಮಾನಿ ಯುವತಿಯು  ಸೋಶಿಯಲ್ ಮೀಡಿಯಾ ಮೂಲಕ ಪರಿಚಿತನಾದ ಉಕ್ರೇನಿಯನ್ ವ್ಯಕ್ತಿಯೊಂದಿಗೆ ಓಡಿಹೋಗಿ ಮದುವೆಯಾಗಲು ಪ್ರಯತ್ನಿಸಿದ್ದಳು ಎಂದು ವರದಿಯಾಗಿದೆ.

ಯುವತಿಯ ಉದ್ದೇಶದ ಬಗ್ಗೆ ಅರಿತ ಆಕೆಯ ಕುಟುಂಬ ಉಕ್ರೇನ್‌ಗೆ ಹೋಗುವ ಅವಳ ಯೋಜನೆಯನ್ನು ಮೊಟಕುಗೊಳಿಸಿ ಉಕ್ರೇನ್ ವ್ಯಕ್ತಿಯೊಂದಿಗೆ ಓಡಿಹೋಗುವುದನ್ನು ತಪ್ಪಿಸಿದ್ದಾರೆ. ನಂತರ ಮನೆಯವರು ಆಕೆಯನ್ನು ಮನೆಗೆ ಕರೆತಂದು ಅಮಾನುಷವಾಗಿ ಥಳಿಸಿ, ತಮ್ಮ ದೌರ್ಜನ್ಯವನ್ನು ಕ್ಯಾಮರಾದಲ್ಲಿ ಚಿತ್ರೀಕರಿಸಿದ್ದಾರೆ. ಆಕೆಯ ಮೇಲೆ ಹಲ್ಲೆ ನಡೆಸುತ್ತಿರುವ ವ್ಯಕ್ತಿ ಸೋದರ ಸಂಬಂಧಿ ಎಂದು ಎಂದು’ಬ್ಲಾಕ್ನಾಟ್’ ಹೆಸರಿನ ರಷ್ಯಾದ ವೆಬ್‌ಸೈಟ್ ವರದಿ ಮಾಡಿದೆ.

ಒಟ್ಟಾರೆಯಾಗಿ ಹೇಳುವುದಾರೆ ವಿಡಿಯೊ ದೃಶ್ಯಾವಳಿಯಲ್ಲಿ ರಷ್ಯಾದಿಂದ ಬಂದಿದೆಯೇ ಹೊರತು ಅಮೆರಿಕದಿಂದಲ್ಲ. ಯುವತಿಯನ್ನು (ಮುಸ್ಲಿಂ) ಥಳಿಸಿದ ವ್ಯಕ್ತಿ ನಿಜವಾಗಿಯೂ ಮುಸ್ಲಿಂ ಆಗಿದ್ದಾನೆ (ಮಲ ಸಹೋದರ). ಹುಡುಗಿಯ ಗೆಳೆಯ ಕೂಡ ಅದೇ ಧರ್ಮದವನಾಗಿದ್ದು (ಮುಸ್ಲಿಂ) ಆದರೆ ಉಕ್ರೇನ್‌ನಿಂದ ದೇಶದವನಾಗಿದ್ದಾನೆ. ಅಲ್ಲದೆ ಇದು ನಡೆದಿರುವುದು 2021ರಲ್ಲಿ.  ಆದರೆ ಈ ಘಟನೆಯನ್ನು “ಬುರ್ಖಾ ಅಥವಾ ಹಿಜಾಬ್‌ಅನ್ನು ಧರಿಸಲು ನಿರಾಕರಿಸಿದ್ದ ಮಹಿಳೆಯ ಮೇಲೆ ಆಕ್ರಮಣದ ಮಾಡಲಾಗಿದೆ ಎಂಬ ಸುಳ್ಳು ಹೇಳಿಕೆಯೊಂದಿಗೆ ವಿಡಿಯೋ ಇತ್ತೀಚಿನದ್ದು ಎಂಬಂತೆ ಬಿಂಬಿಸಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾಗಿರುವ ಪ್ರತಿಪಾದನೆ ಸುಳ್ಳು.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ.


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಮುಸ್ಕಾನ್‌ ಖಾನ್ ನಿಧನ ಎಂದು ವದಂತಿ ಹಬ್ಬಿಸಿದ ಕಿಡಿಗೇಡಿಗಳು


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.