ಫ್ಯಾಕ್ಟ್‌ಚೆಕ್: ಅಸ್ಸಾಂನಲ್ಲಿ ಮುಸ್ಲಿಮರು ಪ್ರತ್ಯೇಕ ರಾಷ್ಟ್ರಕ್ಕಾಗಿ ಒತ್ತಾಯಿಸಿ ಪ್ರತಿಭಟನೆ ಮಾಡಿದ್ದು ನಿಜವೇ ?
ಅಸ್ಸಾಂನಲ್ಲಿ “ಬಾಂಗ್ಲಾದೇಶಿ ಮುಸ್ಲಿಮರು” ಪ್ರತ್ಯೇಕ ರಾಷ್ಟ್ರಕ್ಕಾಗಿ ಒತ್ತಾಯಿಸುತ್ತಿದ್ದಾರೆ ಎಂಬ ಹೇಳಿಕೆಯೊಂದಿಗೆ ಮುಸ್ಲಿಂ ಪ್ರತಿಭಟನಾಕಾರರ ಮೇಲೆ ಪೊಲೀಸರು ಲಾಠಿ ಚಾರ್ಜ್ ಮಾಡುತ್ತಿರುವ ವಿಡಿಯೊವನ್ನು ಹಂಚಿಕೊಳ್ಳಲಾಗಿದೆ.
ಕೆಲ ಬಲಪಂಥೀಯ ಪ್ರತಿಪಾದಕರ ಫೇಸ್‌ಬುಕ್ ಪೇಜ್‌ಗಳಲ್ಲಿ ಈ ವಿಡಿಯೊವನ್ನು ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ.
https://twitter.com/SudhirKumarSuri/status/1518269703156027393?ref_src=twsrc%5Etfw%7Ctwcamp%5Etweetembed%7Ctwterm%5E1518269703156027393%7Ctwgr%5E%7Ctwcon%5Es1_&ref_url=https%3A%2F%2Fwww.altnews.in%2Fold-video-falsely-viral-as-bangladeshi-muslims-in-assam-demanding-separate-state%2F
ಅಸ್ಸಾಂನಲ್ಲಿ ಮುಸ್ಲಿಂ ಧರ್ಮೀಯರು ಪ್ರತ್ಯೇಕ ರಾಷ್ಟ್ರಕ್ಕಾಗಿ ಒತ್ತಾಯಿಸಿ ನಿಜವಾಗಿಯೂ ಪ್ರತಿಭಟಿಸಿರುವ ಸುದ್ದಿ ನಿಜವೇ? ಎಂದು ವೈರಲ್ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.
ಏನ್‌ಸುದ್ದಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
100 ₹200 ₹500 ₹1000 Others
ಫ್ಯಾಕ್ಟ್‌ಚೆಕ್:
ಪ್ರತ್ಯೇಕ ರಾಷ್ಟ್ರಕ್ಕಾಗಿ ಪ್ರತಿಭಟನೆ ನಡೆಸಲಾಗುತ್ತಿದೆ ಎಂಬ ಪ್ರತಿಪಾದನೆಯೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿರುವ ವಿಡಿಯೋದ ವಾಸ್ತವಾಂಶಗಳನ್ನು ಪರಿಶೀಲಿಸಲು ಕೆಲವು ಕೀ ವರ್ಡ್‌ಗಳ ಸಹಾಯದಿಂದ ಯೂಟ್ಯೂಬ್ ಸರ್ಚ್ ಮಾಡಿದಾಗ 2 ಜುಲೈ 2017ರಲ್ಲಿ ಇದೇ ವಿಡಿಯೊ ಯೂಟ್ಯೂಬ್ ಚಾನೆಲ್‌ನಲ್ಲಿ ಅಪ್‌ಲೋಡ್ ಆಗಿರುವುದನ್ನು ನೋಡಬಹುದು.
ಅಸ್ಸಾಂ ಸರ್ಕಾರವು ಜಾರಿ ಮಾಡಿದ್ದ ‘doubtful citizens and voters’ ಟ್ಯಾಗ್‌ನ ವಿರುದ್ಧ ಅಸ್ಸಾಂನ ಜನರು ಗೋಲ್‌ಪಾರಾದಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ ಎಂದು ಚಾನಲ್ ಹೇಳಿದೆ. ಪ್ರತಿಭಟನೆ ವೇಳೆ ಪೊಲೀಸರು ನಡೆಸಿದ ಗುಂಡಿನ ದಾಳಿಯಲ್ಲಿ ಯುವಕನೊಬ್ಬ ಮೃತಪಟ್ಟಿದ್ದಾನೆ. ಸ್ಕ್ರಾಲ್ ಪ್ರಕಾರ, ವೀಡಿಯೊವನ್ನು ಅಸ್ಸಾಂ ನಿವಾಸಿ ಹುಸೇನ್ ಅಹ್ಮದ್ ಮದನಿ ಚಿತ್ರೀಕರಿಸಿದ್ದಾರೆ ಎಂದು ಹೇಳಿದೆ.
ಏನ್‌ಸುದ್ದಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
100 ₹200 ₹500 ₹1000 Others
ಜೂನ್ 30, 2017 ರಂದು ಸ್ಥಳಿಯ ನಿವಾಸಿ ಮದನಿ ತಮ್ಮ ಫೇಸ್‌ಬುಕ್ ಪ್ರೊಫೈಲ್‌ನಲ್ಲಿ ವೀಡಿಯೊವನ್ನು ಅಪ್‌ಲೋಡ್ ಮಾಡಿದ್ದರು. ಆದರೆ ಅವರು ಪ್ರತಿಭಟನೆಯ ಭಾಗವಾಗಿರಲಿಲ್ಲ ಎಂದು ಅವರು ಸ್ಕ್ರಾಲ್‌ಗೆ ತಿಳಿಸಿದ್ದರು. ಆದರೆ ಅವರು ಪ್ರತಿಭಟನಕಾರರ ಮೇಲೆ ನಡೆದ ದಾಳಿಯ ವೀಡಿಯೊವನ್ನು ಚಿತ್ರೀಕರಿಸಿದ್ದಾರೆ. ಅಸ್ಸಾಂನ ಗೋಲ್ಪಾರಾ ಜಿಲ್ಲೆಯ ಖುತಾಮರಿ ಗ್ರಾಮದಲ್ಲಿ ಪ್ರತಿಭಟನಾಕಾರರ ಗುಂಪು ರಾಷ್ಟ್ರೀಯ ಹೆದ್ದಾರಿ 37 ರ ಸಮೀಪ ಬಂದಾಗ ವೀಡಿಯೊವನ್ನು ಚಿತ್ರೀಕರಿಸಲಾಗಿದೆ.
“ಪೊಲೀಸರ ಹೇಳಿಕೆಯ ಪ್ರಕಾರ 400 ರಿಂದ 500 ಜನ ಪ್ರತಿಭಟನಾಕಾರರು – ಬ್ಯಾನರ್ ಮತ್ತು ಕೆಲವು ಫಲಕಗಳನ್ನು ಹಿಡಿದುಕೊಂಡು ಘೋಷಣೆಗಳನ್ನು ಕೂಗುತ್ತಾ. “ಭಾರತೀಯ ಮುಸ್ಲಿಂ ನಾಗರಿಕರಿಗೆ ಕಿರುಕುಳ ನೀಡುವುದನ್ನು ನಾವು ಸಹಿಸುವುದಿಲ್ಲ – ಇಂಕ್ವಿಲಾಬ್ ಜಿಂದಾಬಾದ್” ಎಂದು ಘೋಷಣೆ ಕೂಗುತ್ತಾ ಮೆರವಣಿಗೆ ಬಂದಿದ್ದರು” ಎಂದು ಸ್ಕ್ರಾಲ್ ವರದಿ ಮಾಡಿದೆ.
ನ್ಯೂಸ್‌ಕ್ಲಿಕ್ ಅದೇ ರೀತಿ ಗಡಿ ಪೊಲೀಸ್ ಮತ್ತು ಫಾರಿನರ್ಸ್ ಟ್ರಿಬ್ಯೂನಲ್‌ಗಳಿಂದ ಡಿ (ಸಂಶಯಾಸ್ಪದ) ಮತದಾರರಿಗೆ ಕಿರುಕುಳ ನೀಡುವುದರ ವಿರುದ್ಧ ಪ್ರತಿಭಟನಾಕಾರರು ಪ್ರದರ್ಶನ ನಡೆಸುತ್ತಿದ್ದರು ಎಂದು ಬರೆದಿದೆ. ‘ಡಿ-ವೋಟರ್’ ಎಂಬುದು ಅಸ್ಸಾಂನ ಮತದಾರರ ವರ್ಗವಾಗಿದ್ದು, ಅವರು ತಮ್ಮ ಪೌರತ್ವದ ದಾಖಲೆಗಳನ್ನು ಸಲ್ಲಿಸಲು ವಿಫಲರಾದರೆ ನಂತರ ಚುನಾವಣಾ ಆಯೋಗದ ಮತದಾರರ ಪಟ್ಟಿಯಿಂದಲೂ ಹೊರಹಾಕಲಾಗುತ್ತದೆ ನಂತರ ಮತದಾನದಿಂದ ವಂಚಿತರಾಗುತ್ತಾರೆ.
ಅಸ್ಸಾಂನ ಗೋಲ್ಪಾರಾ ಜಿಲ್ಲೆಯ ಖರ್ಬೋಜಾ ಗ್ರಾಮದಲ್ಲಿ ಪ್ರತಿಭಟನಾಕಾರರ ವಿರುದ್ಧ ಪೊಲೀಸರು ಗುಂಡು ಹಾರಿಸಿದಾಗ 22 ವರ್ಷದ ಮುಸ್ಲಿಂ ವ್ಯಕ್ತಿ ಯಾಕುಬ್ ಅಲಿ ಸಾವನ್ನಪ್ಪಿದ್ದಾರೆ. ಗಡಿ ಪೊಲೀಸ್ ಮತ್ತು ವಿದೇಶಿ ನ್ಯಾಯಮಂಡಳಿಗಳು ಡಿ (ಸಂಶಯಾಸ್ಪದ) ಮತದಾರರಿಗೆ ಕಿರುಕುಳ ನೀಡುತ್ತಿರುವುದನ್ನು ವಿರೋಧಿಸಿ ಪ್ರತಿಭಟನಾಕಾರರು ರಾಷ್ಟ್ರೀಯ ಹೆದ್ದಾರಿ 37 ರ ಕಡೆಗೆ ಮೆರವಣಿಗೆ ನಡೆಸುತ್ತಿದ್ದರು. ರ್ಯಾಲಿಯ ನೇತೃತ್ವವನ್ನು ನಜ್ರುಲ್ ಇಸ್ಲಾಂ ಎಂಬ ವಕೀಲರು ಈ ಪ್ರತಿಭಟನೆಯ ನೇತೃತ್ವವಹಿಸಿದ್ದರು.
ಪ್ರತಿಭಟನಕಾರರು ಪ್ರದರ್ಶಿಸಿದ ಬ್ಯಾನರ್‌ನಲ್ಲಿ, ‘ಡಿ ಮತದಾರರ’ ಪಟ್ಟಿಯಲ್ಲಿರುವ ಜನರು ನಿಜವಾದ ಭಾರತೀಯರು ಮತ್ತು ಅವರ ಹೆಸರುಗಳನ್ನು ಪಟ್ಟಿಯಿಂದ ತೆಗೆದುಹಾಕಬೇಕು. ಈ ಪೈಕಿ 40,000 ಭಾರತೀಯರು ನ್ಯಾಯಕ್ಕೆ ಅರ್ಹರು ಮತ್ತು ಪಟ್ಟಿಯನ್ನು ಮರುರೂಪಿಸಬೇಕು, ಹಕ್ಕು ವಂಚಿತರಿಗೆ ಸರ್ಕಾರಿ ಉದ್ಯೋಗ ಮತ್ತು ಭದ್ರತೆ ಒದಗಿಸಬೇಕು ಎಂದು ಬರೆಯಲಾಗಿದೆ.
ಒಟ್ಟಾರೆಯಾಗಿ ಹೇಳುವುದಾದರೆ ಸರ್ಕಾರ ವಿಧಿಸಿದ್ದ ‘ಸಂಶಯಾಸ್ಪದ ನಾಗರಿಕರು ಮತ್ತು ಮತದಾರರು’ ಎಂಬ ಕಾಯ್ದೆಯ ವಿರುದ್ಧ 2017 ರಲ್ಲಿ ಅಸ್ಸಾಂನ ಗೋಲ್ಪಾರಾ ಜಿಲ್ಲೆಯ ಖುತಾಮರಿ ಗ್ರಾಮದಲ್ಲಿ ನಡೆದ ಪ್ರತಿಭಟನೆಯ ಐದು ವರ್ಷಗಳ ಹಳೆಯ ವೀಡಿಯೊವನ್ನು ಪ್ರತ್ಯೇಕ ರಾಷ್ಟ್ರಕ್ಕಾಗಿ ಒತ್ತಾಯಿಸಿ ‘ಬಾಂಗ್ಲಾದೇಶಿ ಮುಸ್ಲಿಂ ನುಸುಳುಕೋರರು’ ಗಲಭೆ ಸೃಷ್ಟಿಸುತ್ತಿದ್ದಾರೆ ಎಂದು ತಪ್ಪಾಗಿ ಮತ್ತು ಕೋಮುದ್ವೇಷದ ಹಿನ್ನಲೆಯಲ್ಲಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ.
ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಇಫ್ತಾರ್ ಊಟದ ವಿಚಾರಕ್ಕೆ ಮುಸ್ಲಿಮರು ಪರಸ್ಪರ ಹೊಡೆದಾಡಿದ್ದಾರೆ ಎಂಬ ವಿಡಿಯೋ ಭಾರತದ್ದಲ್ಲ