ಫ್ಯಾಕ್ಟ್‌ಚೆಕ್: ಇಫ್ತಾರ್ ಊಟದ ವಿಚಾರಕ್ಕೆ ಮುಸ್ಲಿಮರು ಪರಸ್ಪರ ಹೊಡೆದಾಡಿದ್ದಾರೆ ಎಂಬ ವಿಡಿಯೋ ಭಾರತದ್ದಲ್ಲ

ಮುಸ್ಲಿಮರಿಗೆ ರಂಜಾನ್ ಮಾಸ ಹೆಚ್ಚು ವಿಶೇಷ. ಈ ಸಂದರ್ಭದಲ್ಲಿ ಉಪವಾಸ ಮಾಡುವ ಮೂಲಕ ತಾವು ಅಲ್ಲಾಹುಗೆ ಹೆಚ್ಚು ಹತ್ತಿರ ಆಗುತ್ತೇವೆ ಎನ್ನುವ ನಂಬಿಕೆ ಅವರದು. ಜೊತೆಗೆ ಇಸ್ಲಾಂ ಧರ್ಮದ ಪವಿತ್ರ ಗ್ರಂಥ ಖುರಾನ್ ಜಾರಿಯಾಗಿದ್ದು ಇದೆ ರಂಜಾನ್ ತಿಂಗಳಿನಲ್ಲಿ. ಇಸ್ಲಾಮಿನ ಪ್ರಮುಖ ಆಧಾರ ಸ್ತಂಭಗಳು ಎನ್ನುವ ಪಂಚ ತತ್ವಗಳಲ್ಲಿ, ಎರಡು ಮೂಲತತ್ವಗಳಾದ ರೋಜ (ತಿಂಗಳ ಉಪವಾಸ) ಮತ್ತು ಝಖಾತ್. ಉಪವಾಸ, ಪ್ರಾರ್ಥನೆ, ಇಫ್ತಾರ್ ಕೂಟಗಳು, ದಾನ ಧರ್ಮಗಳು, ಧಾರ್ಮಿಕ ಆಚರಣೆಗಳು ಈ ತಿಂಗಳ ವಿಶೇಷ.

ಇಂತಹ ಸಂದರ್ಭದಲ್ಲಿ ಭಾರತದಲ್ಲಿ ಉಪವಾಸದ ನಂತರ ಇಫ್ತಾರ್‌ಗೆ ಮೊದಲು ಮುಸ್ಲಿಮರು ಆಹಾರಕ್ಕಾಗಿ ಪರಸ್ಪರ ಜಗಳವಾಡುತ್ತಿದ್ದಾರೆ ಎಂಬ ಹೇಳಿಕೆಯೊಂದಿಗೆ ವೀಡಿಯೊವನ್ನು ಸಾಮಾಜಿಕ ಮಾಧ್ಯಮದಲ್ಲಿ ವ್ಯಾಪಕವಾಗಿ ಹಂಚಿಕೊಳ್ಳಲಾಗಿದೆ.

ಹಲವರು ಟ್ವಿಟ್ಟರ್ ನಲ್ಲಿ ವಿಡಿಯೋ ಶೇರ್ ಮಾಡಿದ್ದಾರೆ. ಹಾಗಿದ್ದರೆ ಈ ಘಟನೆ ಎಲ್ಲಿ ಮತ್ತು ಯಾವಾಗ ನಡೆದಿದೆ ಎಂದು  ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆಯನ್ನು ಪರಿಶೀಲಿಸೋಣ.
ಏನ್‌ಸುದ್ದಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
100 ₹200 ₹500 ₹1000 Others

ಫ್ಯಾಕ್ಟ್‌ಚೆಕ್:

ಸಾಮಾಜಿಕ ಮಾಧ್ಯಮಗಳಲ್ಲಿ  ಪ್ರತಿಪಾದಿಸಿಲಾದ ಪೋಸ್ಟ್‌ನ ಕೀ ವರ್ಡ್‌ಗಳನ್ನು ಬಳಸಿಕೊಂಡು ಗೂಗಲ್ ಸರ್ಚ್ ಮಾಡಿದಾಗ ವ್ಯಾಪಕವಾಗಿ ಹಂಚಿಕೊಳ್ಳಲಾಗಿರುವ ಸುದ್ದಿ ಇತ್ತೀಚಿನದಲ್ಲ ಇದು ಸುಮಾರು 2019ರಿಂದ ಅಂತರ್ಜಾಲದಲ್ಲಿ ಹರಿದಾಡುತ್ತಿದೆ ಎಂದು ತಿಳಿದು ಬಂದಿದೆ. ಅದೇ ರೀತಿಯ ಹಲವು ವಿಡಿಯೊಗಳನ್ನು ಇಲ್ಲಿ ನೋಡಬಹುದು.

ಇಂಡಿಯಾ ಟುಡೇ ಆಂಟಿ ಫೇಕ್ ನ್ಯೂಸ್ ವಾರ್ ರೂಮ್ (AFWA) ಈ ಘಟನೆಯು ಸೌದಿ ಅರೇಬಿಯಾದ ಮದೀನಾದಲ್ಲಿ ಮೇ 2019 ರಲ್ಲಿ ಸಂಭವಿಸಿದೆ ಎಂದು ಕಂಡುಹಿಡಿದಿದೆ. 2019ರ ಮೇ ತಿಂಗಳಿನಲ್ಲಿ ರಂಜಾನ್ ಸಮಯದಲ್ಲಿ,  ಸಾರ್ವಜನಿಕ ಇಫ್ತಾರ್ ಕೂಟವನ್ನು ಆಯೋಜಿಸಲಾಗಿತ್ತು ಅಲ್ಲಿ ಜಾಗದ ವಿಚಾರವಾಗಿ  ಸ್ಥಳೀಯರ ಗುಂಪು ಜಗಳವಾಡಿತು ಎಂದು ವರದಿಯಾಗಿದೆ. ಪವಿತ್ರ ಮಾಸದಲ್ಲಿ ಇಂತಹ ಹಿಂಸಾಚಾರದಲ್ಲಿ ತೊಡಗಿದ್ದಕ್ಕಾಗಿ ಘಟನೆಯನ್ನು ಖಂಡಿಸಿ ಹಲವರು ಇದೇ ವಿಡಿಯೊವನ್ನು ಹಂಚಿಕೊಂಡಿದ್ದಾರೆ.

ವರದಿಯ ಪ್ರಕಾರ, ಸೌದಿ ಅರೇಬಿಯಾದ ಮದೀನಾದಲ್ಲಿರುವ  ಅಲ್-ಘಮಾಮಾ ಮಸೀದಿಯ ಹೊರಗೆ  ಇಫ್ತಾರ್ ಕೂಟದ ಸಂದರ್ಭದಲ್ಲಿ ಊಟಕ್ಕೆ ಕುಳಿತುಕೊಳ್ಳುವ ವಿಚಾರಕ್ಕೆ ಪರಸ್ಪರ ತಳ್ಳಾಟ ನಡೆದಿದೆ ಎಂದು ಹೇಳಲಾಗಿದೆ.  ಸ್ಥಳೀಯರು ಟ್ವಿಟರ್‌ನಲ್ಲಿ ಆಹಾರವನ್ನು ಬಡಿಸುವ ಮುನ್ನ ಊಟಕ್ಕೆ ಕುಳಿತುಕೊಳ್ಳುವ ಆಸನಗಳ ಕಾರಣಕ್ಕೆ ಜಗಳ ಪ್ರಾರಂಭವಾಯಿತು ಎಂದು ಹೇಳಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ, ಇದು ಭಾರತದ್ದು ಅಲ್ಲ ಇತ್ತೀಚಿನದ್ದು ಅಲ್ಲ.  ಮದೀನಾದ ಮಸೀದಿಯೊಂದರೆ ಹೊರಗೆ ಇಫ್ತಾರ್ ಕೂಟದಲ್ಲಿ ಕುಳಿತುಕೊಳ್ಳುವ ವಿಚಾರಕ್ಕೆ ಪರಸ್ಪರ ಜಗಳ ನಡೆದಿದೆ ಇದು 2019ರಲ್ಲಿ ನಡೆದಿದ್ದು ಇದನ್ನು ಇತ್ತೀಚೆಗೆ ನಡೆದಿದೆ ಎಂದು ತಪ್ಪು ಹೇಳಿಕೆಯೊಂದಿಗೆ ಹಂಚಿಕೊಳ್ಳಲಾಗಿದೆ. ಹೀಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ಇಂಡಿಯಾಟುಡೆ

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ.


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಮದುವೆ ಮಂಟಪದಲ್ಲಿಯೆ ವಧು ಮತ್ತು ವರ ಪರಸ್ಪರ ಕಪಾಳಕ್ಕೆ ಬಾರಿಸುವ ದೃಶ್ಯ ನಿಜವೆ? ಇಲ್ಲಿ ಓದಿ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights