100 ದಿನಗಳವರೆಗೆ ಒಂದೇ ಉಡುಗೆ ಧರಿಸಿ ದಾಖಲೆ ಮಾಡಿದ ಮಹಿಳೆ!
ಒಂದೇ ಬಟ್ಟೆಯನ್ನು ನೀವು ಎಷ್ಟು ದಿನ ಧರಿಸಬಹುದು…? ಕನಿಷ್ಠ ಎರಡು ಅಥವಾ ಮೂರು ದಿನಗಳು ಎಂದು ನೀವು ಉತ್ತರಿಸಬಹುದು. ಆದರೆ ಇಲ್ಲೊಬ್ಬ ಮಹಿಳೆ 3 ತಿಂಗಳಿಗಿಂತ ಹೆಚ್ಚು ಕಾಲ ಒಂದೇ ಉಡುಪನ್ನು ಧರಿಸಿ ದಾಖಲೆ ಮಾಡಿದ್ದಾಳೆ.
ಸಾರಾ ರಾಬಿನ್ಸ್ ಎಂಬ ಮಹಿಳೆ 100 ದಿನಗಳ ಕಾಲ ಒಂದೇ ಉಡುಪನ್ನು ಧರಿಸಿದ್ದಾಳೆ. ಸಾರಾ ರಾಬಿನ್ಸ್ ಬೋಸ್ಟನ್‌ನ ನಿವಾಸಿ. ಸಾರಾ ರಾಬಿನ್ಸ್ ಕೋಲ್ 100 ದಿನಗಳವರೆಗೆ ಒಂದೇ ರೀತಿಯ ಉಡುಪನ್ನು ಧರಿಸಿದ್ದು ಎಲ್ಲರಲ್ಲೂ ಆಶ್ಚರ್ಯ ಮೂಡಿಸಿದೆ. ಆದರೆ ಪ್ರತಿ ಬಾರಿಯೂ ಅವಳು ವಿಭಿನ್ನವಾಗಿ ವಿನ್ಯಾಸಗೊಳಿಸಿದ ಒಂದೇ ಉಡುಪನ್ನು ಧರಿಸುತ್ತಿದ್ದಳು. ಕೆಲವೊಮ್ಮೆ ಅವಳು ಮೇಲ್ಭಾಗವನ್ನು ವಿನ್ಯಾಸಗೊಳಿಸಿದರೆ, ಕೆಲವೊಮ್ಮೆ ಅದನ್ನು ಸ್ಕರ್ಟ್‌ನಿಂದ ಅಥವಾ ಕೆಲವೊಮ್ಮೆ ಪ್ಯಾಂಟ್‌ನಂತೆ ವಿನ್ಯಾಸಗೊಳಿಸಿ ಧರಿಸುತ್ತಿದ್ದಳು. ಸೆಪ್ಟೆಂಬರ್ 16, 2020 ರಿಂದ ಸಾರಾ 100 ದಿನಗಳ ಡ್ರೆಸ್ ಚಾಲೆಂಜ್‌ನಲ್ಲಿ ಭಾಗವಹಿಸಿ ರಾಬಿನ್ಸ್ ದಾಖಲೆ ಮಾಡಿದ್ದಾಳೆ. ಮಾತ್ರವಲ್ಲದೇ ಅವಳು 100 ದಿನಗಳವರೆಗೆ ಒಂದೇ ರೀತಿಯ ಉಡುಗೆ ಧರಿಸಿ ತನ್ನ ದಿನನಿತ್ಯದ ಕೆಲಸಗಳನ್ನು ಮಾಡಿದ್ದಾಳೆ. ಜೊತೆಗೆ ಕಾರ್ಯಕ್ರಮಗಳಿಗೂ ಹಾಜರಾಗಿದ್ದಾಳೆ.
ವೆಬ್‌ಸೈಟ್‌ಗೆ ನೀಡಿದ ಸಂದರ್ಶನದಲ್ಲಿ ಸಾರಾ, “ಇದು ಒಂದು ಹೆಜ್ಜೆ ಮುಂದೆ ಹೋಗಲು ನನಗೆ ಸ್ಫೂರ್ತಿ ನೀಡಿದೆ. ನಾನು ಪ್ರತಿಯೊಂದು ಸಂದರ್ಭಕ್ಕೂ ವಿಭಿನ್ನ ಬಟ್ಟೆಗಳನ್ನು ಹೊಂದಿದ್ದೇನೆ. ಎಷ್ಟು ಬಟ್ಟೆಯೆಂದರೆ ನನ್ನ ವಾರ್ಡ್ರೋಬ್ ಅನ್ನು ಸ್ವಚ್ಚಗೊಳಿಸಲು ನಾನು ಯೋಚಿಸುತ್ತಿದ್ದೆ. ಆದರೂ ಹೊಸ ವರ್ಷದಲ್ಲಿ ನಾನು ಏನು ಧರಿಸುತ್ತೇನೆ ಎಂದು ಕಾಯುತ್ತೇನೆ. ಜನವರಿ 1, 2021 ಮತ್ತು ಜನವರಿ 1, 2022 ರ ನಡುವೆ ನಾನು ಯಾವುದೇ ಹೊಸ ಬಟ್ಟೆ ಅಥವಾ ಪರಿಕರಗಳನ್ನು ಖರೀದಿಸದಿರಲು ಯೋಚಿಸಿದೆ. ಸ್ವಲ್ಪ ವಿಭಿನ್ನವಾಗಿ ಯೋಚಿಸಿ ಸೆಪ್ಟೆಂಬರ್ 16, 2020 ರಂದು 100 ದಿನಗಳ ಉಡುಗೆ ಸವಾಲಿಗೆ ಸೇರಿಕೊಂಡೆ” ಎಂದಿದ್ದಾರೆ. ಸವಾಲಿನಂತೆ ಸಾರಾ ರಾಬಿನ್ಸ್ ಇತ್ತೀಚಿನ ಫ್ಯಾಷನ್ ಬಟ್ಟೆ ಧರಿಸದೇ ಬದುಕಿದ್ದಾರೆ. ಮಾತ್ರವಲ್ಲದೇ 100 ದಿನಗಳವರೆಗೆ ಒಂದೇ ರೀತಿಯ ಉಡುಪನ್ನು ಧರಿಸಿ US $ 100 ಮೌಲ್ಯದ ವೋಚರ್ ಅನ್ನು ಪಡೆದುಕೊಂಡಿದ್ದಾರೆ. ಇದರಿಂದ ಅವರು ಹೊಸ ಉಡುಗೆಗಳನ್ನು ಖರೀದಿಸಬಹುದು.