ಫ್ಯಾಕ್ಟ್‌ಚೆಕ್: ಪ್ರತಿ ತಿಂಗಳು ಕೇಂದ್ರ ಸರ್ಕಾರ 1800ರೂ ನೀಡುತ್ತಿದೆ ಎಂಬುದು ನಿಜವಲ್ಲ !

ಕೇಂದರ ಸರ್ಕಾರದ ಹಲವು ಯೋಜನೆಗಳ ಕುರಿತು ಮಾಧ್ಯಮಗಳಲ್ಲಿ ಜಾಹಿರಾತು ಮತ್ತು ಪ್ರಕಟಣೆಗಳು ಸಾಮಾನ್ಯ. ಆದರೆ ಇತ್ತೀಚೆಗೆ ಸರ್ಕಾರದ ಪ್ರತಿ ಯೋಜನೆಗಳ ಜಾಹಿರಾತುಗಳು ಟಿವಿ, ಪತ್ರಿಕೆಗಳಿಗಷ್ಟೆ ಸೀಮಿತವಾಗದೆ ಸಾಮಾಜಿಕ ಮಾಧ್ಯಮಗಳಲ್ಲೂ ಹೆಚ್ಚು ಪ್ರಚಾರ ಮಾಡಲಾಗುತ್ತಿದೆ. ಅವುಗಳಲ್ಲಿ ಕೆಲವು ಸುಳ್ಳಿನಿಂದಲೂ ಕೂಡಿರುತ್ತವೆ. ಹೀಗೊಂದು ಜಾಹಿರಾತು ವ್ಯಾಪಕವಾಗಿ ಹಂಚಿಕೊಳ್ಳಲಾಗುತ್ತಿದ್ದು 18 ರಿಂದ 40 ವರ್ಷದೊಳಗಿನ ಜನರು ಆನ್‌ಲೈನ್ ಫಾರ್ಮ್ ಅನ್ನು ಭರ್ತಿ ಮಾಡಿದರೆ ಪ್ರಧಾನ ಮಂತ್ರಿ ಶ್ರಮ್ ಯೋಗಿ ಮಾನ್-ಧನ್ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರ ಪ್ರತಿ ತಿಂಗಳು 1800 ರೂಪಾಯಿಗಳನ್ನು ನೀಡುತ್ತಿದೆ ಎನ್ನುವ ಸಂದೇಶವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿಬಿಡಲಾಗಿದೆ. ಹಾಗಿದ್ದರೆ ಈ ಯೋಜನೆಯನ್ನು ಕೇಂದ್ರ ಸರ್ಕಾರ ನಿಜವಾಗಿಯೂ ಜಾರಿಗೆ ತಂದಿದೆಯೇ ? ಎಂದು ವ್ಯಾಪಕವಾಗಿ ಹಂಚಿಕೊಳ್ಳಲಾಗಿರುವ ಸುದ್ದಿಯ ಸತ್ಯಾಸತ್ಯತೆಗಳನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

18 ರಿಂದ 40 ವರ್ಷದೊಳಗಿನ ವಯೋಮಾನದವರು ಆನ್‌ಲೈನ್ ಫಾರ್ಮ್ ಅನ್ನು ಭರ್ತಿ ಮಾಡಿದರೆ ಪ್ರಧಾನ ಮಂತ್ರಿ ಶ್ರಮ್ ಯೋಗಿ ಮಾನ್-ಧನ್ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರ ಪ್ರತಿ ತಿಂಗಳು 1800 ರೂಪಾಯಿಗಳನ್ನು ಕೇಂದ್ರ ಸರ್ಕಾರ ನೀಡುತ್ತದೆ ಎನ್ನುವ  ಸಂದೇಶ ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗಿತ್ತು. ಆದರೆ PIB ಯು ಈ ಸಂದೇಶವನ್ನು ತಳ್ಳಿಹಾಕಿದ್ದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದ್ದ ಪೋಸ್ಟ್‌ಅನ್ನು ಪಿಐಬಿ ಸುಳ್ಳು ಸಂದೇಶ ಎಂದು ಹೇಳಿದೆ.

ಪ್ರಧಾನ ಮಂತ್ರಿ ಶ್ರಮ್ ಯೋಗಿ ಮಾನ್-ಧನ್ ಯೋಜನೆ ಪಿಂಚಣಿ ಯೋಜನೆ ಬಗ್ಗೆ ಹಂಚಿಕೊಂಡಿರುವ ಮಾಹಿತಿ ಸುಳ್ಳು ಎಂದು ಹೇಳಿರುವ PIB ಈ ಸಂದೇಶವನ್ನು ನಂಬಬೇಡಿ ಎಂದು ಟ್ವೀಟ್ ಮಾಡಿದೆ. ಮುಂದುವರೆದು ಫಲಾನುಭವಿಗಳಿಗೆ 60 ವರ್ಷ ತುಂಬಿದ ನಂತರವೇ ಪಿಂಚಣಿ ಸಿಗಲಿದೆ. ಇದನ್ನು ಹೊರತಾಗಿ ಯಾರಿಗೂ 1800 ಹಣವನ್ನು ನೀಡುವುದಿಲ್ಲ ಎಂದು ಸ್ಪಷ್ಟಪಡಿಸಿದೆ.
ಏನ್‌ಸುದ್ದಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
100 ₹200 ₹500 ₹1000 Others

ಅಸಂಘಟಿತ ಕಾರ್ಮಿಕರಿಗಾಗಿ ಶ್ರಮ್ ಯೋಗಿ ಮಾನ್-ಧನ್-ಯೋಜನೆ

ಭಾರತದಲ್ಲಿ  ಶೇ 50% ಆಧಾಯವು ಅಸಂಘಟಿತ ಕಾರ್ಮಿಕ ವಲಯದಿಂದ ಉತ್ಪಾದನೆಯಾಗುತ್ತದೆ. ಹಾಗಾಗಿ ತಮ್ಮ ದೈನಂದಿನ ಜೀವನದಲ್ಲಿ ಬೀದಿ ವ್ಯಾಪಾರಿಗಳು, ರಿಕ್ಷಾ ಎಳೆಯುವವರು, ಕಟ್ಟಡ ಕಾರ್ಮಿಕರು, ಮನೆಕೆಲಸದವರು, ಕೃಷಿ ಕಾರ್ಮಿಕರು, ಕಸ ಹೆಕ್ಕುವವರು, ಬೀಡಿ ಕಾರ್ಮಿಕರು, ಹ್ಯಾಡ್‍ಲೂಮ್ ಕಾರ್ಮಿಕರು, ಚರ್ಮೋದ್ಯಮ, ಚಿಂದಿ ಆಯುವವರು ಮತ್ತು ಇತರೇ ವಿವಿಧ ವೃತ್ತಿಗಳಲ್ಲಿ ಕಾರ್ಯ ನಿರ್ವಹಿಸುತ್ತಿರುವ ಅಸಂಘಟಿತ ಕಾರ್ಮಿಕರಿಗಾಗಿ ಸರ್ಕಾರವು ಪ್ರಧಾನಮಂತ್ರಿ ಶ್ರಮ್ ಯೋಗಿ ಮಾನ್-ಧನ್-ಯೋಜನೆಯನ್ನು ಜಾರಿಗೆ ತಂದಿದೆ.

18 ರಿಂದ 40 ವರ್ಷ ವಯಸ್ಸಿನೊಳಗಿನ ಜನರು ಈ ಯೋಜನೆಗೆ ಅರ್ಜಿ ಸಲ್ಲಿಸಬಹುದು. ಈ ಯೋಜನೆಯಲ್ಲಿ ಅರ್ಜಿ ಸಲ್ಲಿಸುವಾಗ ಕಾರ್ಮಿಕರು ಆಧಾರ್ ಕಾರ್ಡ್ ಮತ್ತು ಉಳಿತಾಯ ಬ್ಯಾಂಕ್ ಖಾತೆ ಹೊಂದಿರಬೇಕಾಗುತ್ತದೆ. ಚಂದಾದಾರರು 18 ವರ್ಷ ವಯಸ್ಸಿನಲ್ಲಿ ಈ ಯೋಜನೆಗೆ ಪ್ರವೇಶಿಸಿ, ರೂ. 55 ರ ಮಾಸಿಕ ಕೊಡುಗೆ ಪಾವತಿಸುತ್ತಾ ಹೋದರೆ ಅವನು ಅಥವಾ ಅವಳು ನಿವೃತ್ತಿಯ ಮಾಸಿಕ ಪಿಂಚಣಿಯಾಗಿ ರೂ. 3,000 ಪಡೆಯಬಹುದು. ಖಾತೆಗೆ ಪಿಂಚಣಿದಾರರು ಪಾವತಿಸುವಷ್ಟೇ ಮೊತ್ತವನ್ನು ಸರ್ಕಾರ ಪಾವತಿಸುತ್ತದೆ

ಪ್ರಧಾನ ಮಂತ್ರಿ ಶ್ರಮ ಯೋಗಿ ಮಾನ್-ಧನ್ ಪಿಂಚಣಿ ಯೋಜನೆಯಾಗಿದ್ದು, ಇದು ಭಾರತದಲ್ಲಿ ಅಸಂಘಟಿತ ಕೆಲಸದ ವಲಯ ಮತ್ತು ಹಿರಿಯ ವಯಸ್ಸಿನವರಿಗೆ ಆರ್ಥಿಕ ಭದ್ರತೆಯನ್ನು ಒದಗಿಸುವ ಗುರಿಯನ್ನು ಹೊಂದಿದೆ. ಒಂದು ವರದಿಯ ಪ್ರಕಾರ ಭಾರತದಲ್ಲಿ ಅಂದಾಜು 42 ಕೋಟಿ ಅಸಂಘಟಿತ ಕಾರ್ಮಿಕರಿದ್ದಾರೆ. ಯೋಜನೆಯು ಫಲಾನುಭವಿಯು ರೂ. 60 ವರ್ಷ ವಯಸ್ಸಿನ ನಂತರ ಪ್ರತಿ ತಿಂಗಳು 3000. ಅಲ್ಲದೆ, ಫಲಾನುಭವಿಯ ಮರಣದ ನಂತರ ಪಿಂಚಣಿಯ 50% ಅನ್ನು ಫಲಾನುಭವಿಯ ಸಂಗಾತಿಗೆ ಕುಟುಂಬ ಪಿಂಚಣಿಯಾಗಿ ನೀಡಲಾಗುತ್ತದೆ. ಯೋಜನೆಯು ಸಹಾಯ ಮಾಡುವ ಗುರಿಯನ್ನು ಹೊಂದಿದೆ.

ಹಾಗಾಗಿ ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗಿರುವ  18 ರಿಂದ 40 ವರ್ಷದೊಳಗಿನ ಜನರು ಆನ್‌ಲೈನ್ ಫಾರ್ಮ್ ಅನ್ನು ಭರ್ತಿ ಮಾಡಿದರೆ ಪ್ರಧಾನ ಮಂತ್ರಿ ಶ್ರಮ್ ಯೋಗಿ ಮಾನ್-ಧನ್ ಯೋಜನೆ ಅಡಿಯಲ್ಲಿ ಕೇಂದ್ರ ಸರ್ಕಾರ ಪ್ರತಿ ತಿಂಗಳು 1800 ರೂಪಾಯಿಗಳನ್ನು ನೀಡುತ್ತಿದೆ ಎನ್ನುವ ಸಂದೇಶ ಸುಳ್ಳು

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ.


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ತಮಿಳುನಾಡಿನಲ್ಲಿ ಮಸೀದಿಗಳಿಗಿಂತ ದೇವಸ್ಥಾನಗಳಿಗೆ ಹೆಚ್ಚು ವಿದ್ಯುತ್ ದರ ವಿಧಿಸುತ್ತಿದ್ದಾರೆ ಎಂಬುದು ಸುಳ್ಳು


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.