ಫ್ಯಾಕ್ಟ್‌ಚೆಕ್: ಹಿಂದೂ ಯುವಕನೊಬ್ಬ ಚೂರಿಯಿಂದ ಇರಿದ ವಿಡಿಯೋವನ್ನು ಲವ್ ಜಿಹಾದ್ ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ

ಯುವಕನೊಬ್ಬ ಯುವತಿಯನ್ನು ಚಾಕುವಿನಿಂದ ಚುಚ್ಚಿ ಬೀದಿಯಲ್ಲಿ ಸಾಯಿಸಿದ ವಿಡಿಯೊವೊಂದು ಸಾಮಾಜಿಕ ಜಾಲತಾಣಗಳಲ್ಲಿ ಹರಿದಾಡುತ್ತಿದೆ. ಮುರ್ಷಿದಾಬಾದ್‌ನ ಬಹರಾಮ್‌ಪುರದಲ್ಲಿ ನಡೆದ ಈ ಘಟನೆ ‘ಲವ್’ ಜಿಹಾದ್‘ಗೆ ಸಂಬಂಧಿಸಿದ್ದು ಎಂಬುದಾಗಿ ಚರ್ಚೆಯಾಗುತ್ತಿದೆ. ‘ಆರೋಪಿ ಯುವಕ ಮುಸ್ಲಿಂ ಧರ್ಮದವನಾಗಿದ್ದು, ಮತಾಂತರ ಆಗಲು ಒಪ್ಪದ ಹಿಂದೂ ಯುವತಿಯನ್ನು ಹತ್ಯೆ ಮಾಡಿದ್ದಾನೆ’ ಎನ್ನಲಾಗಿದೆ. ‘ಇಸ್ಲಾಮಿಕ್ ಸ್ಟೇಟ್ ಬಂಗಾಳಕ್ಕೆ ಸ್ವಾಗತ’ ಎಂಬುದಾಗಿ ಕೆಲವರು ಟ್ವಿಟರ್‌ನಲ್ಲಿ ಉಲ್ಲೇಖಿಸಿದ್ದಾರೆ.

ಹಿಂದೂ ಹುಡುಗಿ ತನ್ನ ಶಾಂತಿಯ ಧರ್ಮವನ್ನು ಸ್ವೀಕರಿಸಲು ನಿರಾಕರಿಸಿದಳು ಎಂಬ ಕಾರಣಕ್ಕೆ ಅವನು ಅವಳನ್ನು ಸಾರ್ವಜನಿಕವಾಗಿ  ಇರಿದು ಕೊಂದಿದ್ದಾನೆ ಎಂದು ಹೇಳಿದ್ದಾರೆ.  ಹತ್ಯೆಯಾದ ಯುವತಿಯನ್ನು ಮುರ್ಷಿದಾಬಾದ್ ಬಹರಾಮ್‌ಪುರದ ಕೃಷ್ಣನಾಥ ಕಾಲೇಜಿನ  ಮೂರನೇ ವರ್ಷದ ಪದವಿ ವಿದ್ಯಾರ್ಥಿ ಸುತಾಪ ಚೌಧರಿ ಎಂದು ಪೋಸ್ಟ್‌ನಲ್ಲಿ ಹೇಳಲಾಗಿದೆ.

ಇನ್ನು ಕೆಲವರು ಯುವಕನೊಬ್ಬ ರಸ್ತೆಯ ಅಂಚಿನಲ್ಲಿ ಬಿದ್ದಿರುವ ಯುವತಿಗೆ ಚಾಕುವಿನಿಂದ ಇರಿಯುತ್ತಿರುವ ಭಯಾನಕ ದೃಶ್ಯಾವಳಿಗಳನ್ನು ಕೆಲವರು ಮೊಬೈಲ್‌ನಲ್ಲಿ ಸೆರೆಹಿಡಿದಿದ್ದಾರೆ. ಈ ಕೃತ್ಯದಲ್ಲಿ ಭಾಗಿಯಾಗಿರುವ ಆರೋಪಿಯು ಮುಸ್ಲಿಂ ಯುವಕ ಎಂಬ ಹೇಳಿಕೆಯೊಂದಿಗೆ ಹಂಚಿಕೊಂಡಿದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾಗಿರುವ ಪ್ರತಿಪಾದನೆಯನ್ನು ಪರಿಶೀಲಿಸೋಣ.
ಏನ್‌ಸುದ್ದಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
100 ₹200 ₹500 ₹1000 Others

ಫ್ಯಾಕ್ಟ್‌ಚೆಕ್:

ವೀಡಿಯೊದ ಕೀಫ್ರೇಮ್‌ಗಳ ಸಹಾಯದಿಂದ ಗೂಗಲ್ ರಿವರ್ಸ್ ಇಮೇಜ್‌ ಸರ್ಚ್ ಮಾಡಲಾಗಿದ್ದು ಮೇ 2, 2022 ರಂದು ಯೂಟ್ಯೂಬ್‌ಗೆ ಅಪ್‌ಲೋಡ್ ಮಾಡಿದ ಎಬಿಪಿ ಆನಂದ ಅವರ ವೀಡಿಯೊ ವರದಿ ಲಭ್ಯವಾಗಿದೆ. ವರದಿಯ ಪ್ರಕಾರ,  ಮೇ 2 ರಂದು ಸಂಜೆ ಮುರ್ಷಿದಾಬಾದ್‌ನ ಬಹರಾಮ್‌ಪುರದಲ್ಲಿ  21 ವರ್ಷದ ಸುತಾಪ ಚೌಧುರಿ ಎಂಬ ವಿದ್ಯಾರ್ಥಿನಿಗೆ ಮೊದಲು ಗುಂಡು ಹಾರಿಸಲಾಯಿತು ನಂತರ  ಇರಿದು ಕೊಲ್ಲಲಾಯಿತು ಎಂದು ವರದಿಯಲ್ಲಿ ಹೇಳಲಾಗಿದೆ.

ಲವ್‌ ಜಿಹಾದ್‌ಗೂ ಈ ಘಟನೆಗೂ ಸಂಬಂಧವಿಲ್ಲ ಎಂದು ಇಂಡಿಯಾಟುಡೇ ವರದಿ ಮಾಡಿದೆ. ಆರೋಪಿ ಹಾಗೂ ಸಂತ್ರಸ್ತೆ ಇಬ್ಬರೂ ಹಿಂದೂ ಧರ್ಮಕ್ಕೆ ಸೇರಿದವರು ಎಂದು ತಿಳಿದುಬಂದಿದೆ. ಆರೋಪಿ ಸುಶಾಂತ್ ಚೌಧರಿಯನ್ನು ಪೊಲೀಸರು ಬಂಧಿಸಿದ್ದಾರೆ. ‘ಯುವತಿ ನನ್ನೊಂದಿಗೆ ಸರಿಯಾಗಿ ನಡೆದುಕೊಳ್ಳುತ್ತಿರಲಿಲ್ಲ’ ನನ್ನ ಮನಸ್ಸಿಗೆ ನೋವಾಗುವಂತೆ ನಡೆದುಕೊಳ್ಳುತ್ತಿದ್ದಳು ಹಾಗಾಗಿ ನಾನು ಆಕೆಯನ್ನು ಹತ್ಯೆಗೈದೆ ಎಂದು ಆರೋಪಿ ಹೇಳಿದ್ದಾನೆ.

ಸುದ್ದಿಗಾರರೊಂದಿಗೆ ಮಾತನಾಡಿದ ಮುರ್ಷಿದಾಬಾದ್‌ನ ಎಸ್‌ಪಿ, ಕೆ ಶಬರಿ ರಾಜ್ ಕುಮಾರ್ ಆರೋಪಿ ಸುಶಾಂತ್ ಚೌಧರಿ ಹಾಗೂ ಹತ್ಯೆಯಾದ ವಿದ್ಯಾರ್ಥಿನಿ ಸುತಾಪ ಚೌಧುರಿ ಇಬ್ಬರು ಹಿಂದೂ ಧರ್ಮೀಯರಾಗಿದ್ದು, ಹತ್ಯೆಗೆ ಯಾವುದೇ ಲವ್ ಜಿಹಾದ್ ರೀತಿಯ ದಾರ್ಮಿಕ ಆಯಾಮವಿಲ್ಲ. ಆದರೆ ಸಾಮಾಜಿಕ ಮಾಧ್ಯಮಗಳಲ್ಲಿ ಘಟನೆಯನ್ನು ತಪ್ಪಾಗಿ ಹಂಚಿಕೊಂಡಿದ್ದಾರೆ ಎಂದು ಸ್ಪಷ್ಟನೆ ನೀಡಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ ಮುರ್ಷಿದಾಬಾದ್‌ನ ಬಹರಾಮ್‌ಪುರದಲ್ಲಿ ನಡೆದ ಈ ಘಟನೆ ‘ಲವ್’ ಜಿಹಾದ್‘ ಅಲ್ಲ ಹಾಗೂ ಆರೋಪಿ ಮತ್ತು ಸಂತ್ರಸ್ಥೆ ಇಬ್ಬರು ಹಿಂದೂ ಧರ್ಮದವರು ಎಂದು ಮುರ್ಷಿದಾಬಾದ್‌ನ ಎಸ್‌ಪಿ, ಕೆ ಶಬರಿ ರಾಜ್ ಕುಮಾರ್ ಸ್ಪಷ್ಟನೆ ನೀಡಿದ್ದಾರೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ಕೃಪೆ: ಇಂಡಿಯಾಟುಡೆ

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ.


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ಮದುವೆ ಮಂಟಪದಲ್ಲಿಯೆ ವಧು ಮತ್ತು ವರ ಪರಸ್ಪರ ಕಪಾಳಕ್ಕೆ ಬಾರಿಸುವ ದೃಶ್ಯ ನಿಜವೆ? ಇಲ್ಲಿ ಓದಿ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.