ಫ್ಯಾಕ್ಟ್‌ಚೆಕ್: ಮದುವೆ ಪಾರ್ಟಿಯಲ್ಲಿ ರಾಹುಲ್ ಗಾಂಧಿ ಜೊತೆ ಇರುವ ಮಹಿಳೆ ಚೀನಾ ರಾಯಭಾರಿಯಲ್ಲ

ಮೇ 3 ರಂದು ತನ್ನ ಗೆಳತಿಯ ಮದುವೆಗೆ ರಾಹುಲ್ ಗಾಂಧಿಯ ನೇಪಾಳಕ್ಕೆ ತೆರಳಿದ್ದರು. ಆಗ ಅವರು ಮಹಿಳೆಯ ಜೊತೆ ನಿಂತಿರುವ ವಿಡಿಯೊ ಭಾರಿ ಟ್ರೆಂಡ್ ಆಗಿದೆ. ಇನ್ನು ಕೆಲವರು ರಾಹುಲ್ ಜೊತೆಗಿರುವ ಮಹಿಳೆ ನೇಪಾಳದ ಚೀನಾ ರಾಯಭಾರಿ ‘ಹೌ ಯಾಂಕಿ’ ಎಂದು ಪ್ರತಿಪಾದಿಸಿ ಟ್ವಿಟರ್ ಮತ್ತು ಫೇಸ್‌ಬುಕ್‌ನಲ್ಲಿ ಹಂಚಿಕೊಂಡಿದ್ದಾರೆ.

ಅವರು ನೈಟ್‌ಕ್ಲಬ್‌ನಲ್ಲಿ ಚೀನಾದ ರಾಯಭಾರಿಯನ್ನು ಯಾಕೆ ಭೇಟಿಯಾದರು ಮತ್ತು ಅವರು ಏನು ಮಾತನಾಡುತ್ತಿದ್ದಾರೆ ಎಂದು ಹಲವರು ಪ್ರಶ್ನಿಸಿದ್ದಾರೆ.

ರಾಹುಲ್ ಗಾಂಧಿಯೊಂದಿಗೆ ಇರುವ ಮಹಿಳೆಯ ಕುರಿತು ವಿಸ್ತೃತ ವರದಿಯನ್ನು ಮಾಡಿರುವ ಏಷಿಯಾನೆಟ್ ಸುವರ್ಣ ಕನ್ನಡದ ಸುದ್ದಿ ವಾಹಿನಿಯು ರಾಹುಲ್ ಗಾಂಧಿಯೊಂದಿಗೆ ಇರುವ ಮಹಿಳೆ ನೇಪಾಳದ ಚೀನಾ ರಾಯಭಾರಿ ಹೌ ಯಾಂಕಿ ಎಂದು ಹೇಳಿ “ಪಬ್‌ನಲ್ಲಿ ರಾಹುಲ್ ಗಾಂಧಿ ಪಾರ್ಟಿ, ಜೊತೆಗಿದ್ದ ಯುವತಿ ಯಾರು? ಸದ್ದು ಮಾಡುತ್ತಿದೆ ಚೀನಾ ಸುಂದರಿಯ ಹೆಸರು!” ಎಂದು ವರದಿ ಮಾಡಿದೆ.

ಫ್ಯಾಕ್ಟ್‌ಚೆಕ್

ಇಂಡಿಯಾ ಟುಡೇ ಆಂಟಿ ಫೇಕ್ ನ್ಯೂಸ್ ವಾರ್ ರೂಮ್ (ಎಎಫ್‌ಡಬ್ಲ್ಯೂಎ) ವಿಡಿಯೊದಲ್ಲಿರುವ ಮಹಿಳೆಯು ರಾಹುಲ್ ಗಾಂಧಿ ನೇಪಾಳದಲ್ಲಿ ಭಾಗವಹಿಸಿದ್ದ ಮದುವೆಯಲ್ಲಿ ಭಾಗವಹಿಸಿದ್ದ ವಧುವಿನ ಸ್ನೇಹಿತೆ ಎಂದು ಪತ್ತೆ ಮಾಡಿದೆ. ಅಲ್ಲದೆ ಆ ಮಹಿಳೆ ನೇಪಾಳದ ಚೀನಾ ರಾಯಭಾರಿ ‘ಹೌ ಯಾಂಕಿ’ ಅಲ್ಲ ಎಂದು ಖಚಿತಪಡಿಸಿದೆ.

ಕಾಂಗ್ರೆಸ್ ಪಕ್ಷದ ವಕ್ತಾರರಾದ ರಣದೀಪ್ ಸುರ್ಜೇವಾಲಾ ಸುದ್ದಿಗಾರರೊಂದಿಗೆ ಮಾತನಾಡುತ್ತಾ, ರಾಹುಲ್ ಗಾಂಧಿ ನೇಪಾಳಕ್ಕೆ “ಸ್ನೇಹಿತರ ಖಾಸಗಿ ವಿವಾಹ ಸಮಾರಂಭದಲ್ಲಿ ಭಾಗವಹಿಸಲು ಹೋಗಿದ್ದರು. ಆಗ ಅವರ ಜೊತೆಯಲ್ಲಿದ್ದ ಮಹಿಳೆ ವಧು CNN ಸುದ್ದಿ ಸಂಸ್ಥೆಯ ಪತ್ರಕರ್ತೆ ಸುಮ್ನಿಮಾ ಉದಾಸ್‌ರವರ ಸ್ನೇಹಿತೆ ಹೊರತು ಚೀನಾದ ರಾಯಭಾರಿಯಲ್ಲ ಎಂದು ಹೇಳಿದ್ದಾರೆ.
ಏನ್‌ಸುದ್ದಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
100 ₹200 ₹500 ₹1000 Others

ಸುದ್ದಿ ವರದಿಗಳ ಪ್ರಕಾರ, ಕಾಂಗ್ರೆಸ್ ನಾಯಕರು ತಮ್ಮ ಸ್ನೇಹಿತೆ, CNN ಇಂಟರ್‌ನ್ಯಾಶನಲ್‌ನ ದೆಹಲಿ ಮೂಲದ ವರದಿಗಾರರಾದ ಸುಮ್ನಿಮಾ ಉದಾಸ್ ಅವರ ವಿವಾಹದಲ್ಲಿ ಪಾಲ್ಗೊಳ್ಳಲು ಕಠ್ಮಂಡುವಿಗೆ ಬಂದಿದ್ದರು. ಸುಮ್ನಿಮಾ ಉದಾಸ್ ಅವರು ಮ್ಯಾನ್ಮಾರ್‌ನ ಮಾಜಿ ನೇಪಾಳಿ ರಾಯಭಾರಿ ಭೀಮ್ ಉದಾಸ್ ಅವರ ಪುತ್ರಿ ಎಂದು ವರದಿಗಳಲ್ಲಿ ಉಲ್ಲೇಖಿಸಿದ್ದಾರೆ

ಕಠ್ಮಂಡು ಪೋಸ್ಟ್ ಪ್ರಕಾರ, ನಿಮಾ ಮಾರ್ಟಿನ್ ಶೆರ್ಪಾ ಅವರೊಂದಿಗೆ ಸುಮ್ನಿಮಾ ಉದಾಸ್ ಅವರ ವಿವಾಹವು ಮೇ 3 ರಂದು ನಡೆದಿದ್ದು. ಮೇ 5 ರಂದು ಆರತಕ್ಷತೆಯನ್ನು ನಿಗದಿಪಡಿಸಲಾಗಿದೆ ಎಂದು ಹೇಳಿವೆ. ವೀಡಿಯೊದಲ್ಲಿ ಕಂಡುಬರುವ ನೈಟ್‌ಕ್ಲಬ್ ಕಠ್ಮಂಡುವಿನ ಜನಪ್ರಿಯ ಪಬ್ ಆದ ‘ಲಾರ್ಡ್ ಆಫ್ ದಿ ಡ್ರಿಂಕ್ಸ್’ ಎಂದು ಸುದ್ದಿ ವರದಿಗಳು ಸೂಚಿಸಿವೆ.

ಇಂಡಿಯಾ ಟುಡೇ ಕಠ್ಮಂಡುವಿನಲ್ಲಿ ಪಬ್‌ನ ಆಡಳಿತ ಮಂಡಳಿಯ ಸಿಇಒ ರಾಬಿನ್ ಶ್ರೇಷ್ಠಾ ಅವರನ್ನು ದೂರವಾಣಿ ಮೂಲಕ ಸಂಪರ್ಕಿಸಿದಾಗ, ಮೇ 2 ರಂದು ಐದಾರು ಜನರೊಂದಿಗೆ ಗಾಂಧಿ ಪಬ್‌ಗೆ ಭೇಟಿ ನೀಡಿದ್ದರು ಎಂದು ಲಾರ್ಡ್ ಆಫ್ ದಿ ಡ್ರಿಂಕ್ಸ್‌ನ ಸಿಇಒ ರಾಬಿನ್ ಶ್ರೇಷ್ಠಾ ಹೇಳಿದ್ದು, ಅವರ ಭೇಟಿಯ ವೇಳೆ ರಾಹುಲ್ ಗಾಂಧಿ ಅವರೊಂದಿಗೆ ಯಾವುದೇ ಚೀನಾ ರಾಯಭಾರಿ ಇರಲಿಲ್ಲ ಎಂದು ಅವರು ಖಚಿತಪಡಿಸಿದ್ದಾರೆ. “ಅವರು [ರಾಹುಲ್ ಗಾಂಧಿ] ಒಂದೂವರೆ ಗಂಟೆಗಳ ಕಾಲ ಇಲ್ಲಿದ್ದರು. ಅದು ಅವರ ವೈಯಕ್ತಿಕ ಭೇಟಿಯಾಗಿತ್ತು. ಚೀನಾ ರಾಯಭಾರಿ ಕಚೇರಿಯಿಂದ ಯಾರೂ ಅವರೊಂದಿಗೆ ಇರಲಿಲ್ಲ” ಎಂದಿದ್ದಾರೆ.

ವೈರಲ್ ವೀಡಿಯೊದಲ್ಲಿ ಗಾಂಧಿಯೊಂದಿಗೆ ಕಾಣಿಸಿಕೊಂಡ ಮಹಿಳೆಯ ಗುರುತನ್ನು ವಿಚಾರಿಸಿದಾಗ, ಅವರು ವಧುವಿನ ಸ್ನೇಹಿತೆ ಮತ್ತು ಮದುವೆ ಸಮಾರಂಭಕ್ಕೆ ಆಹ್ವಾನಿಸಲ್ಪಟ್ಟಿದ್ದರು ಎಂದು ಹೇಳಿದರು. “ಖಂಡಿತವಾಗಿಯೂ, ಅವರು ಚೀನಾದ ರಾಯಭಾರಿಯಾಗಿರಲಿಲ್ಲ” ಎಂದು ಶ್ರೇಷ್ಠಾ ಹೇಳಿದ್ದಾರೆ. ಇದು ವೈಯಕ್ತಿಕ ಭೇಟಿಯಾಗಿರುವುದರಿಂದ, ಅತಿಥಿಗಳ ಬಗ್ಗೆ ಹೆಚ್ಚಿನ ವಿವರಗಳನ್ನು ಬಹಿರಂಗಪಡಿಸಲು ಶ್ರೇಷ್ಠಾ ಬಯಸಲಿಲ್ಲ.

ಇಂಡಿಯಾ ಟುಡೇ ಕಠ್ಮಂಡು ಪೋಸ್ಟ್‌ನ ಹಿರಿಯ ಪತ್ರಕರ್ತ ಅನಿಲ್ ಗಿರಿ ಅವರನ್ನು ಸಂಪರ್ಕಿಸಿ ವಿಚಾರಿಸಿದಾಗ “ರಾಹುಲ್ ಗಾಂಧಿ ವಧು-ವರರ ಸ್ನೇಹಿತರೊಂದಿಗೆ ಪಬ್‌ನಲ್ಲಿದ್ದರು. ಮಹಿಳೆ ಖಂಡಿತವಾಗಿಯೂ ಚೀನಾದ ರಾಯಭಾರಿ ಅಲ್ಲ. ಅವರು ವಧುವಿನ ಸ್ನೇಹಿತೆ ನೇಪಾಳಿ ಮಹಿಳೆ ” ಎಂದು ಹೇಳಿದ್ದಾರೆ.

ರಾಹುಲ್ ಗಾಂಧಿ ಮತ್ತವರ ಸ್ನೇಹಿತೆಯ ಖಾಸಗಿತನಕ್ಕೆ ಧಕ್ಕೆಯಾಗಬಾರದು ಎಂಬ ಕಾರಣಕ್ಕೆ ಅವರ ಜೊತೆ ಕಾಣಿಸಿಕೊಂಡ ಮಹಿಳೆಯ ಮಾಹಿತಿಯನ್ನು ಹೆಚ್ಚು ಕೆದುಕಲಾಗಿಲ್ಲ. ಪ್ರತ್ಯಕ್ಷದರ್ಶಿಗಳ ಹೇಳಿಕೆಗಳ ಆಧಾರದ ಮೇಲೆ, ವೈರಲ್ ವೀಡಿಯೊದಲ್ಲಿ ರಾಹುಲ್ ಗಾಂಧಿಯೊಂದಿಗೆ ಕಾಣಿಸಿಕೊಂಡಿರುವ ಮಹಿಳೆ ಚೀನಾದ ರಾಯಭಾರಿ ‘ಹೌ ಯಾಂಕಿ’ ಅಲ್ಲ ಬದಲಿಗೆ ಆಕೆ ವಧುವಿನ ನೇಪಾಳಿ ಸ್ನೇಹಿತೆ ಎಂದು ಇಂಡಿಯಾಟುಡೆ ತಿಳಿಸಿದೆ.

ಕೃಪೆ:ಇಂಡಿಯಾಟುಡೆ

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ.


ಇದನ್ನು ಓದಿರಿ: POST CARD ಪ್ರತಿಪಾದಿಸಿದಂತೆ PSI ಪರೀಕ್ಷೆ ಅಕ್ರಮದಲ್ಲಿ ಆರೋಪಿ ದಿವ್ಯಾ ಜೊತೆ ಡಿಕೆಶಿ ನಂಟಿದೆಯೇ?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights