ಫ್ಯಾಕ್ಟ್‌ಚೆಕ್: ಇದು ಹಿಂದೂ ಸಹೋದರರ ನುಡುವಿನ ಜಗಳವಾಗಿದ್ದು, ಮುಸ್ಲಿಮರ ತಲೆಗೆ ಕಟ್ಟಲಾಗಿದೆ

ದೊಣ್ಣೆ, ಕಬ್ಬಿಣದ ಆಯುಧ ಮತ್ತು ಮರದ ಪಟ್ಟಿಗಳನ್ನಿಡಿದು ಎರಡು ಗುಂಪುಗಳ ನಡುವೆ ಮಾರಾಮಾರಿ ನಡೆದಿದೆ. ಈ ಘಟನೆ ವೇಳೆ ರಕ್ತ ಸುರಿಯುವಂತೆ ಹೊಡೆದಾಡಿಕೊಂಡಿದ್ದಾರೆ,  ದೆಹಲಿಯ ಸಂಗಮ್ ವಿಹಾರ್‌ನಲ್ಲಿ ಮುಸ್ಲಿಂ ಸಮುದಾಯದ ಜನರು ಹಿಂದೂ ಕುಟುಂಬದ ಮೇಲೆ ಹಲ್ಲೆ ನಡೆಸುತ್ತಿದ್ದರೆ ಎಂಬ ಹೇಳಿಕೆಯೊಂದಿಗೆ ವಿಡಿಯೊವನ್ನು ಕೆಲವರು  ಸಾಮಾಜಿಕ ಮಾಧ್ಯಮ  ವ್ಯಾಪಕವಾಗಿ ಹಂಚಿಕೊಂಡಿದ್ದಾರೆ. ಹಾಗಿದ್ದರೆ ಈ ಘಟನೆಯಲ್ಲಿ ಮುಸ್ಲಿಂ ಸಮುದಾಯ ಹಲ್ಲೆ ಮಾಡಿದ್ದು ನಿಜವೇ? ಇದರ ವಾಸ್ತವಾಂಶಗಳೇನು ಎಂದು ಘಟನೆಯ ಸತ್ಯಾಸತ್ಯೆತೆಗಳನ್ನು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್:

ಈ ಕುರಿತು ಸಾಕಷ್ಟು ಹುಡುಕಾಡಿದಾಗ ಘಟನೆಯ 30 ಏಪ್ರಿಲ್ 2022 ರಂದು ನಡೆದಿದೆ ಎಂದು ತಿಳಿದುಬಂದಿದ್ದು, ಈ ಕುರಿತು NDTV ಹಿಂದಿ ಆವೃತ್ತಿಯ ವರದಿ ಲಭ್ಯವಾಗಿದೆ.

ಈ ವರದಿಯ ಪ್ರಕಾರ, ಎರಡು ಕುಟುಂಬಗಳ ನಡುವೆ ಇದ್ದ ಆಸ್ತಿ ವಿವಾದದ ಕಾರಣಕ್ಕೆ ಹೊಡೆದಾಟ ನಡೆದಿದೆ ಎಂದು ವರದಿಯಾಗಿದೆ. ಸಹೋದರರಾದ ಪ್ರೇಂಪಾಲ್ ಮತ್ತು ಶ್ಯಾಮಲಾಲ್ ನಡುವೆ ನಡೆಯುತ್ತಿದ್ದ ಆಸ್ತಿ ವಿವಾದದಿಂದಾಗಿ  ಕಲಹ ಉಂಟಾಗಿದ್ದು, ಈ ಘಟನೆಯಲ್ಲಿ ಪ್ರದಮ್, ಪ್ರೇಂಪಾಲ್ ಮತ್ತು ಬಬ್ಲು ಗಾಯಗೊಂಡಿದ್ದಾರೆ ಎಂದು ಹೇಳಲಾಗಿದ್ದು. ಮತ್ತೊಂದು ಗುಂಪಿನಲ್ಲಿದ್ದ ದಾಳಿ ನಡೆಸಿದವರನ್ನ ಶ್ಯಾಮಲಾಲ್, ಪ್ರದೀಪ್ ಮತ್ತು ಪ್ರಶಾಂತ್ ಎಂದು ಗುರುತಿಸಲಾಗಿದೆ.
ಏನ್‌ಸುದ್ದಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
100 ₹200 ₹500 ₹1000 Others

ಘಟನೆಯ ವೀಡಿಯೋವನ್ನು ಎನ್‌ಡಿಟಿವಿ ಪತ್ರಕರ್ತ ಮುಖೇಶ್ ಸಿಂಗ್ ಸೆಂಗಾರ್ ಅವರ ಪರಿಶೀಲಿಸಿದ ಟ್ವಿಟರ್ ಪ್ರೊಫೈಲ್‌ನಿಂದ ಹಂಚಿಕೊಂಡಿದೆ.

ದಿ ಕ್ವಿಂಟ್‌ಗೆ ಪ್ರತಿಕ್ರಿಯೆ ನೀಡಿರುವ ND TV ವರದಿಗಾರರಾದ ಸೆಂಗಾರ್ ಅವರು ಪೊಲೀಸರು ನೀಡಿದ ಪತ್ರಿಕಾ ಹೇಳಿಕೆಯನ್ನು ಹಂಚಿಕೊಂಡಿದ್ದು, ಘಟನೆಗೆ ಕೋಮು ದ್ವೇಷದ ಹಿನ್ನಲೆ ಇಲ್ಲ ಎಂದು ತಿಳಿಸಿದರು. ಪ್ರಕರಣದಲ್ಲಿ ಭಾಗಿಯಾಗಿರುವವರ ಧರ್ಮದ ಬಗ್ಗೆ ಕೇಳಿದಾಗ, ಕುಟುಂಬದವರೆಲ್ಲರೂ ಹಿಂದೂ ಸಮುದಾಯಕ್ಕೆ ಸೇರಿದವರು ಎಂದು ಖಚಿತಪಡಿಸಿದ್ದು ಪ್ರಕರಣದಲ್ಲಿ ಗಾಯಗೊಂಡವರನ್ನು ಪ್ರದಮ್ (20), ಪ್ರೇಮಲಾಲ್ (55), ಅರ್ಚನಾ (28) ಎಂದು ಗುರುತಿಸಲಾಗಿದೆ ಮತ್ತು ಆರೋಪಿಗಳನ್ನು ಶ್ಯಾಮಲಾಲ್, ಪ್ರದೀಪ್ ಮತ್ತು ಪ್ರಶಾಂತ್ ಎಂದು ಗುರುತಿಸಲಾಗಿದೆ ಎಂದು ತಿಳಿಸಿದ್ದಾರೆ ಎಂದು ದಿ ಕ್ವಿಂಟ್‌ ವರದಿ ಮಾಡಿದೆ.

ಪೊಲೀಸ್‌ ಅಧಿಕಾರಿಗಳ ಸ್ಪಷ್ಟನೆ:

ಘಟನೆಗೆ ಕೋಮು ಬಣ್ಣ ಹಿನ್ನಲೆ ಇರುವುದು ಸುಳ್ಳು ಎಂದು ಸೋನಿಯಾ ವಿಹಾರ್ SHO ಮಾಲ್ತಿ ಬನಾ ದಿ ಕ್ವಿಂಟ್‌ಗೆ ತಿಳಿಸಿದ್ದಾರೆ. ಪ್ರೇಮಲಾಲ್ ಮತ್ತು ಶ್ಯಾಮಲಾಲ್ ಸಹೋದರರು. ನಾನೇ  ಆಸ್ತಿಯ ನಿಜವಾದ ವಾರಸುದಾರ ಎಂದು ಜಗಳವಾಡಿಕೊಂಡಿದ್ದರು. ಇದು ಹಿಂದೂ ಕುಟುಂಬದ ಇಬ್ಬರು ಸಹೋದರರ ನಡುವೆ ಜಗಳ ನಡೆದಿದೆ ಮತ್ತು 3 ಮೇ 2022 ರಂತೆ ಪ್ರಕರಣಕ್ಕೆ ಸಂಬಂಧಿಸಿದಂತೆ ನಾಲ್ವರನ್ನು ಬಂಧಿಸಲಾಗಿದೆ ಎಂದು ಅವರು ಹೇಳಿದ್ದಾರೆ.

ಒಟ್ಟಾರೆಯಾಗಿ ಹೇಳುವುದಾದರೆ ಎರಡು ಕುಟುಂಬ ಸದಸ್ಯರ ನಡುವಿನ ಆಸ್ತಿ ವಿವಾದಕ್ಕೆ ಸಂಬಂಧಿಸಿ ಹೊಡೆದಾಟ ನಡೆದಿದ್ದು ಅವರೆಲ್ಲರೂ ಹಿಂದೂ ಸಮುದಾಯಕ್ಕೆ ಸೇರಿದ್ದಾರೆ. ಘಟನೆಗೂ ಮುಸ್ಲಿಂ ಸಮುದಾಯದಕ್ಕೂ ಸಂಬಂಧವಿಲ್ಲ ಹಾಗಾಗಿ ಮುಸ್ಲಿಮರ ಗುಂಪು ಹಿಂದೂಗಳ ಮೇಲೆ ದಾಳಿ ನಡೆಸಿದ್ದಾರೆ ಎಂಬುದು ಸುಳ್ಳು ಹಾಗೂ ಪೋಸ್ಟ್‌ನಲ್ಲಿ ಮಾಡಲಾದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು  ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ.


ಇದನ್ನು ಓದಿರಿ: ಫ್ಯಾಕ್ಟ್‌ಚೆಕ್: ದರೋಡೆ ಮತ್ತು ಕೊಲೆಯ ಪ್ರಕರಣವನ್ನು ಮುಸ್ಲಿಮರಿಂದ ಹಿಂದೂಗಳ ಹತ್ಯೆ ಎಂದು ತಪ್ಪಾಗಿ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.