ಯುಎಪಿಎ ಈಗಿನ ಸ್ವರೂಪವು ಪ್ರಜಾಪ್ರಭುತ್ವಕ್ಕೆ ಮಾರಕವಾಗುತ್ತದೆ: 108 ಅಧಿಕಾರಿಗಳ ಬಹಿರಂಗ ಪತ್ರ

ಕಾನೂನುಬಾಹಿರ ಚಟುವಟಿಕೆಗಳ (ತಡೆ) ಕಾಯ್ದೆ (ಯುಎಪಿಎ)ಯನ್ನು ಈಗ ಬಳಸಿಕೊಳ್ಳಲಾಗುತ್ತಿರುವ ರೀತಿಯು ಪ್ರಜಾಪ್ರಭುತ್ವ ಹಾಗೂ ಪ್ರಜೆಗಳ ಸ್ವಾತಂತ್ರ್ಯಕ್ಕೆ ಮಾರಕವಾಗಬಲ್ಲದು ಎಂದು ಮಾಜಿ ಅಧಿಕಾರಿಗಳ ಗುಂಪೊಂದು ಬಹಿರಂಗ ಪತ್ರ ಬರೆದಿದ್ದಾರೆ.

“ಸರ್ಕಾರ ಯುಎಪಿಎ ಕಾಯ್ದೆಗೆ ತಿದ್ದುಪಡಿ ತಂದಿರುವ ಸ್ವರೂಪವು ಅಪಾಯಕಾರಿಯಾಗಿದ್ದು, ಈಸ್ವರೂಪದಿಂದ ಯುಎಪಿಎಯನ್ನು ಬದಲಾವಣೆ ಮಾಡಬೇಕು” ಎಂದು ಸಾಂವಿಧಾನಿಕ ನೀತಿ ತಂಡದ 108 ಮಂದಿ ಮಾಜಿ ಅಧಿಕಾರಿಗಳು ಬಹಿರಂಗ ಪತ್ರದಲ್ಲಿ ಒತ್ತಾಯಿಸಿದ್ದಾರೆ.

1967 ರಲ್ಲಿ ಕೋಮುವಾದ, ಜಾತೀಯತೆ, ಧಾರ್ಮಿಕತೆ, ಭಾಷಾ ದುರಭಿಮಾನಗಳನ್ನು, ಪ್ರತ್ಯೇಕತಾವಾದಿ ಚಟುವಟಿಕೆಗಳನ್ನು ಎದುರಿಸಲು ರಾಷ್ಟ್ರೀಯ ಏಕೀಕರಣ ಮಂಡಳಿಯ ಶಿಫಾರಸ್ಸುಗಳನ್ನು ಆಧರಿಸಿ ಯುಎಪಿಎಯ ಕಾನೂನನ್ನು ಜಾರಿಗೊಳಿಸಲಾಗಿತ್ತು. ಆದರೆ, ಈಗ ಪ್ರಜಾಪ್ರಭುತ್ವ ವ್ಯವಸ್ಥೆಗೆ ಮಾರಕವಾಗುವ ರೀತಿಯಲ್ಲಿ ಅದರ ಸ್ವರೂಪವನ್ನು ಬದಲಾಯಿಸಲಾಗುತ್ತಿದೆ ಎಂದು ಆರೋಪಿಸಿದ್ದಾರೆ.

ಇದನ್ನೂ ಓದಿ: ಯುಎಪಿಎ ಅಡಿಯಲ್ಲಿ ಬುಡಕಟ್ಟು ಜನಾಂಗದ ದಮನ; ಪ್ರತಿ ವರ್ಷವೂ ಏರುತ್ತಲೇ ಇದೆ ಬಂಧನದ ಸಂಖ್ಯೆ!

5 ದಶಕಗಳಿಂದ ಅಸ್ತಿತ್ವದಲ್ಲಿರುವ ಯುಎಪಿಎಯನ್ನು ಇತ್ತೀಚಿನ ದಿನಗಳಲ್ಲಿ ಕಠಿಣ, ದಮನಕಾರಿ ಕಾನೂನಾಗಿ ಮಾರ್ಪಾಡಾಗಿದ್ದು ಆಳುವ ರಾಜಕಾರಣಿಗಳು, ಪೊಲೀಸರು ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಆತಂಕ ವ್ಯಕ್ತಪಡಿಸಿದ್ದಾರೆ.

ಯುಎಪಿಎ ಕಾನೂನು ಈಗಿನ ಸ್ವರೂಪದಲ್ಲಿ ಹಲವು ಲೋಪದೋಷಗಳಿಂದ ಕೂಡಿದ್ದು, ರಾಜಕಾರಣಿಗಳು, ಪೊಲೀಸರಿಂದ ದುರುಪಯೋಗಪಡಿಸಿಕೊಳ್ಳುವ ಸಾಧ್ಯತೆ ಇದೆ ಆದ್ದರಿಂದ ಕಾನೂನಿಗೆ ತಿದ್ದುಪಡಿ ತರಬೇಕೆಂದು ಅಧಿಕಾರಿಗಳು ಪತ್ರದಲ್ಲಿ ಹೇಳಿದ್ದಾರೆ.

ಇದೇ ವೇಳೆ ಬ್ರಿಟನ್ ನಲ್ಲಿ ನಡೆದ ಜಿ-7 ಶೃಂಗಸಭೆಯಲ್ಲಿ ಭಾಗವಹಿಸಿ ಮಾತನಾಡಿದ್ದ ಮೋದಿ “ಪ್ರಜಾಪ್ರಭುತ್ವ ಹಾಗೂ ಸ್ವಾತಂತ್ರ್ಯ ಭಾರತೀಯ ತತ್ವಗಳ ಭಾಗ ಎಂದು ಹೇಳಿದ್ದನ್ನು ಉಲ್ಲೇಖಿಸಿರುವ ಅಧಿಕಾರಿಗಳು, “ಮೋದಿ ತಮ್ಮ ಮಾತಿಗೆ ಬದ್ಧರಾಗಿರುವುದಾದರೆ ಅವರ ಸರ್ಕಾರ ಕಾನೂನು ತಜ್ಞರ ಅಭಿಪ್ರಾಯಗಳಿಗೆ ಮನ್ನಣೆ ನೀಡಬೇಕು ಹಾಗೂ ಈಗಿರುವ ಸ್ವರೂಪದಿಂದ ಯುಎಪಿಎಯನ್ನು ಬದಲಾವಣೆ ಮಾಡಬೇಕು ಎಂದು ಆಗ್ರಹಿಸಿದ್ದಾರೆ.

ಇದನ್ನೂ ಓದಿ: ತಾಲಿಬಾನ್ ಆಕ್ರಮಣ: 200ಕ್ಕೂ ಹೆಚ್ಚು ಭಾರತೀಯರು ಕಾಬೂಲ್ ರಾಯಭಾರ ಕಚೇರಿಯಲ್ಲಿ ಸಿಲುಕಿದ್ದಾರೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights