ಯುಎಪಿಎ ಅಡಿಯಲ್ಲಿ ಬುಡಕಟ್ಟು ಜನಾಂಗದ ದಮನ; ಪ್ರತಿ ವರ್ಷವೂ ಏರುತ್ತಲೇ ಇದೆ ಬಂಧನದ ಸಂಖ್ಯೆ!

ಸಂಸತ್ತಿನಲ್ಲಿ ಬುಡಕಟ್ಟು ವ್ಯವಹಾರಗಳ ಸಚಿವಾಲಯವು ಗುರುವಾರ ನೀಡಿರುವ ಪ್ರತಿಕ್ರಿಯೆಯ ಪ್ರಕಾರ, ಕಠಿಣ ಕಾನೂನುಬಾಹಿರ ಚಟುವಟಿಕೆಗಳ (ತಡೆಗಟ್ಟುವಿಕೆ) ಕಾಯ್ದೆ (ಯುಎಪಿಎ) ಅಡಿಯಲ್ಲಿ ವಿಚಾರಣೆಗೆ ಒಳಪಡುವ ಬುಡಕಟ್ಟು ಜನರ ಸಂಖ್ಯೆ 2017 ಮತ್ತು 2019ರ ನಡುವೆ ಗಣನೀಯವಾಗಿ ಹೆಚ್ಚಾಗಿದೆ.

ನ್ಯಾಷನಲ್ ಕ್ರೈಮ್ ರೆಕಾರ್ಡ್ಸ್ ಬ್ಯೂರೋ ಈ ಡೇಟಾವನ್ನು ನಿರ್ವಹಿಸದಿದ್ದರೂ, ಏಜೆನ್ಸಿಯಿಂದ ಹೆಚ್ಚುವರಿ ಮಾಹಿತಿಯನ್ನು ಪಡೆಯಲಾಗಿದೆ ಎಂದು ಸಚಿವಾಲಯ ಹೇಳಿದೆ. ಆದಾಗ್ಯೂ, ಸುಹ್ ಕೈದಿಗಳ ತ್ವರಿತ ವಿಚಾರಣೆಯನ್ನು ಖಚಿತಪಡಿಸಿಕೊಳ್ಳಲು ಏನು ಮಾಡಲಾಗುತ್ತಿದೆ ಎಂಬ ಪ್ರಶ್ನೆಗೆ ಅದು ಪ್ರತಿಕ್ರಿಯಿಸಲಿಲ್ಲ.

ಕೇಂದ್ರ ಹಂಚಿಕೊಂಡ ಮಾಹಿತಿಯ ಪ್ರಕಾರ, 2017 ರಲ್ಲಿ ಬುಡಕಟ್ಟು ಕೈದಿಗಳ ಸಂಖ್ಯೆ 4,098 ಆಗಿತ್ತು. ಇದು 2018 ರಲ್ಲಿ 4,862 ಕ್ಕೆ ಏರಿತು. 2019ರಲ್ಲಿ ಈ ಸಂಖ್ಯೆ 5,645ಕ್ಕೆ ಏರಿಕೆಯಾಗಿದೆ. ಅಂತಹ ಕೈದಿಗಳು ಪೈಕಿ ಉತ್ತರ ಪ್ರದೇಶದಲ್ಲಿ 2019 ರಲ್ಲಿ 1,519 ರಷ್ಟಿದ್ದು, ಇದು 2017 ರಲ್ಲಿ 784 ರಷ್ಟಿತ್ತು. ಅಸ್ಸಾಂನಲ್ಲಿ ಬುಡಕಟ್ಟು ಕೈದಿಗಳ ಸಂಖ್ಯೆ ಸತತವಾಗಿ ಹೆಚ್ಚಾಗಿದೆ – 2017 ರಲ್ಲಿ 1,337, 2018 ರಲ್ಲಿ 1,397 ಮತ್ತು 2019 ರಲ್ಲಿ 1,374. ಅಲ್ಲದೆ, ಇತರ ರಾಜ್ಯಗಳಲ್ಲಿಯೂ ಗಮನಾರ್ಹ ಏರಿಕೆಯಾಗಿದೆ. ಬುಡಕಟ್ಟು ವಿಚಾರಣಾಧೀನ ಕೈದಿಗಳ ಸಂಖ್ಯೆ ತಮಿಳುನಾಡು – 2017 ರಲ್ಲಿ 8 ಇತ್ತು. ಇದು  2019 ರಲ್ಲಿ 141 ಕ್ಕೆ ಏರಿಕೆಯಾಗಿದೆ.

ಒಟ್ಟಾರೆ ಪ್ರಕರಣಗಳ ಸಂಖ್ಯೆಯು 2017 ರಲ್ಲಿ 901, 2018 ರಲ್ಲಿ 1,182, ಮತ್ತು 2019 ರಲ್ಲಿ 1,226 ಕ್ಕೆ ಏರಿಕೆಯಾಗಿದೆ. 2017 ರಲ್ಲಿ 1,554 ಜನರನ್ನು ಬಂಧಿಸಲಾಗಿದ್ದರೆ, ನಂತರದ ವರ್ಷದಲ್ಲಿ 1,182 ಜನರನ್ನು ಬಂಧಿಸಲಾಗಿದೆ. 2019 ರಲ್ಲಿ 1,226 ಜನರನ್ನು ಬಂಧಿಸಲಾಗಿದೆ.

ಇದನ್ನೂ ಓದಿ: ಬೆಂಗಳೂರಲ್ಲಿ ಬದಲಾಯಿತು ಸಿಎಂ ಹೆಸರು? ಬೆಲ್ಲದ್ ಬದಲು ಬೊಮ್ಮಾಯಿಗೆ ಕುದುರಿತು ಲಕ್!

Spread the love

Leave a Reply

Your email address will not be published. Required fields are marked *