ಸಿಎಂ ಪಟ್ಟಕ್ಕೇರಿದ ಬೊಮ್ಮಾಯಿಗೆ ಕಾಡುತ್ತಿದೆ ಭಯ : ಕಾರಣವೇನು ಗೊತ್ತಾ..?

ಹಲವಾರು ಸಿಎಂ ಆಕಾಂಕ್ಷಿಗಳ ಪೈಪೋಟಿ ಮಧ್ಯೆ ಬಸವರಾಜ್ ಬೊಮ್ಮಾಯಿ ರಾಜ್ಯದ ಸಿಎಂ ಪಟ್ಟವನ್ನು ಅಲಂಕರಿಸಿದ್ದಾರೆ. ಆದರೆ ಸಿಎಂ ಬೊಮ್ಮಾಯಿಗೆ ಈಗ ಭಯ ಶುರುವಾಗಿ. ಈ ಭಯವನ್ನು ಮೆಟ್ಟಿನಿಲ್ಲಬೇಕಾದ ಅನಿವಾರ್ಯತೆ ಇದೆ. ಪಕ್ಷವನ್ನು ಒಗ್ಗೂಡಿಸಿಕೊಂಡು ಹೋಗುವುದು ಬೊಮ್ಮಾಯಿ ಮುಂದಿರುವ ದೊಡ್ಡ ಸವಾಲಾಗಿದೆ. ಸಿಎಂ ಪಟ್ಟಕ್ಕೇರಿದ ಬೊಮ್ಮಾಯಿಗೆ ಹಲವು ಭಯ ಕಾಡುತ್ತಿವೆ..?

ಸಂಕೋಚವೋ, ಭಯವೋ ಗೊತ್ತಿಲ್ಲ ಮಾಜಿ ಸಿಎಂ ಯಡಿಯೂರಪ್ಪ ಅವರ ಜೊತೆ ಬಸವರಾಜ ಬೊಮ್ಮಾಯಿ ಒಂದೇ ಸೋಫಾದಲ್ಲಿ ಕುಳಿತುಕೊಳ್ಳಲು ಹಿಂದೆ ಮುಂದೆ ನೋಡಿದ್ದರು. ಹೀಗೆ ಯಡಿಯೂರಪ್ಪ ಜೊತೆಗೆ ಕುಳಿತುಕೊಳ್ಳಲು ಹಿಂದೆ ಮುಂದೆ ಯೋಚಿಸಿದ್ದೇ ಇಂದು ಬಸವರಾಜ ಬೊಮ್ಮಾಯಿಗೆ ಸಿಎಂ ಖುರ್ಚಿ ಯಲ್ಲಿ ಕುಳಿತುಕೊಳ್ಳುವಂತೆ ಮಾಡಿದೆ.

ಬಿಎಸ್ ಯಡಿಯೂರಪ್ಪ ಕೃಪಕಟಾಕ್ಷದಿಂದ ಬೊಮ್ಮಾಯಿಗೆ ಸಿಎಂ ಪಟ್ಟ ಸಿಕ್ಕಿದೆ ಎನ್ನಲಾಗುತ್ತಿದೆ. ಇದರ ಮಧ್ಯೆ ಡಿಸಿಎಂ ಆಕಾಂಕ್ಷಿಗಳ ಪೈಪೋಟಿ ಜೋರಾಗಿದೆ. ಹಿರಿಯರನ್ನು ಕೈಬಿಟ್ಟು ಹೊಸಬರಿಗೆ ಮಣೆ ಹಾಕುವ ಮಾತುಗಳು, ಸಚಿವ ಸಂಪುಟ, ಬಾಂಬೆ ಪ್ರೆಂಟ್ಸ್, ಪಕ್ಷಮತ್ತು ಸರ್ಕಾರ ತಾಳಮೇಳ ಪ್ರವಾಹ ಪರಿಹಾರ ಹೀಗೆ ಸಿಎಂ ಸ್ಥಾನವನ್ನು ಅಲಂಕರಿಸಿದ ಬೊಮ್ಮಾಯಿಗೆ ದೊಡ್ಡ ಸವಾಲಾಗಿವೆ.

ಬೊಮ್ಮಾಯಿಗೆ ಯಡಿಯೂರಪ್ಪ ಕೃಪಕಟಾಕ್ಷ :-

ಬೊಮ್ಮಾಯಿಗೆ ಬಿಎಸ್ ಯಡಿಯೂರಪ್ಪ ಕೃಪಕಟಾಕ್ಷ ವರ ಇದೆ. ಹೀಗಾಗಿ ಅವರಿಗೆ ಸಿಎಂ ಸ್ಥಾನ ಸಿಕ್ಕಿದೆ. ಹಾಗಂತ ಬೊಮ್ಮಾಯಿ ಬಿಎಸ್ ವೈ ಯನ್ನ ಕಡೆಗಣಿಸುವಂತಿಲ್ಲ. ಬಿಎಸ್ ವೈ ಬೆಂಬಲ ಇದ್ದರೆ ರಾಜ್ಯದಲ್ಲಿ  ಜನ ಬೆಂಬಲ, ಶಾಸಕ ಬೆಂಬಲ ಗಳಿಸುವುದು ಸುಲಭ. ಸ್ವಲ್ಪ ಯಾಮಾರಿದ್ರು ಖುರ್ಚಿಗೆ ಕಂಟಕ ಬರೋದು ಪಕ್ಕಾ. ಹೀಗಾಗಿ ನೂತನ ಸಿಎಂ ಬೊಮ್ಮಾಯಿ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ವರ್ಚಸ್ಸಿನಲ್ಲಿರುವುದು ಅನಿವಾರ್ಯವಾಗಿದೆ ಎಂದು ವಿಪಕ್ಷ ನಾಯಕ ಸಿದ್ದರಾಮಯ್ಯ ಹೇಳಿದ್ದಾರೆ. ಮಾತ್ರವಲ್ಲದೇ ಖರ್ಚಿ ಕಳೆದುಕೊಳ್ಳುತ್ತಿರುವಾಗ ಖುರ್ಚಿ ಕೊಟ್ಟ ಯಡಿಯೂರಪ್ಪರಿಗೆ ಬೊಮ್ಮಾಯಿ ಕೈಗೊಂಬೆ ಎನ್ನಲಾಗುತ್ತಿದೆ. ಹೀಗಾಗಿ ಸಿಎಂ ಬೊಮ್ಮಾಯಿ ಸ್ಥಿತಿ ಕತ್ತಿ ಮೇಲಿನ ನಡಿಗೆಯಂತಾಗಿದೆ. ಯಡಿಯೂರಪ್ಪ ಕೆಂಗಣ್ಣಿಗೆ ಗುರಿಯಾದರೆ ಆಡಳಿತ ನಡೆಸುವುದು ಕಷ್ಟ. ಹೀಗಾಗಿ ಬ್ಯಾಲೆನ್ಸ್ ಮಾಡಬೇಕಾದ ಅನಿವಾರ್ಯತೆ ಇದೆ.

ಡಿಸಿಎಂ ಸ್ಥಾನದ ಡಿಶುಂ ಡಿಶುಂ :- 

ರಾಜ್ಯದಲ್ಲಿ ಸಿಎಂ ಸ್ಥಾನದ ಬಳಿಕ ಡಿಸಿಎಂ ಸ್ಥಾನಕ್ಕೆ ತೀವ್ರ ಪೈಪೋಟಿ ಆರಂಭವಾಗಿದೆ. ಯಾರಿಗೆ ಉಪಮುಖ್ಯ ಪಟ್ಟ? ಮುಂದಿನ ಡಿಸಿಎಂ ಯಾರು? ಎನ್ನುವುದು ಇನ್ನೂ ನಿಖರವಾಗಿಲ್ಲ. ಬಿಜೆಪಿಯಲ್ಲಿ ಡಿಸಿಎಂ ಸ್ಥಾನಕ್ಕಾಗಿ ಲಾಬಿ ಜೋರಾಗಿದೆ. ಈಶ್ವರಪ್ಪಗೆ ಡಿಸಿಎಂ ಸ್ಥಾನ ಸಿಗಬೇಕು ಅಂತ ಶಾಂತಮಯಾ ಶಿವಾಚಾರ್ಯ ಶ್ರೀ ಆಗ್ರಹಿಸುತ್ತಿದ್ದಾರೆ. ಇನ್ನೂ ಡಿಸಿಎಂ ಸ್ಥಾನಕ್ಕಾಗಿ ಆರ್ ಅಶೋಕ್ , ಶ್ರೀರಾಮುಲು ಕೂಡ ಲಾಬಿ ನಡೆಸಿದ್ದಾರೆ.

ಹಿರಿಯರ ಆಟ :- 

ಬೊಮ್ಮಾಯಿ ಸಿಎಂ ಆದಮೇಲೆ ಹಿರಿಯ ನಾಯಕರು ಅಸಮಧಾನದ ಆರೋಪಕ್ಕೆ ಪುಷ್ಠಿ ನೀಡಿದ್ದಾರೆ. ರಾಜಕಾರಣದಲ್ಲಿ ಬೊಮ್ಮಾಯಿಗಿಂತಲೂ ಹಿರಿಯರಾದ  ಮಾಜಿ ಸಿಎಂ ಜಗದೀಶ್ ಶೆಟ್ಟರ್ ಸಿಎಂ ಬೊಮ್ಮಾಯಿ ಸಂಪುಟ ಸೇರಲ್ಲ ಎಂದಿದ್ದಾರೆ. ಈ ಮೂಲಕ ತಮ್ಮ ಅನುಭವವನ್ನು ಹೈಕಮಾಂಡ್ ಪರಿಗಣಿಸಬೇಕು ಎಂದು ಪರೋಕ್ಷವಾಗಿ ಆಗ್ರಹಿಸಿದ್ದಾರೆ. ಇನ್ನೂ ನಳೀನ್ ಕುಮಾರ್ ಅವರದ್ದು ಎನ್ನಲಾಗಿದ್ದ ಆಡಿಯೋದಲ್ಲಿ ಈಶ್ವರಪ್ಪ ಹಾಗೂ ಶೆಟ್ಟರ್ ಟೀಮ್ ಇತ್ತು ಎಂದು ಆರೋಪಿಸಿ ಸಂಪುಟದಿಂದ ಕೈಬಿಡುವ ಸಾಧ್ಯತೆ ಇದೆ. ಇನ್ನೂ ಮಾಧುಸ್ವಾಮಿ, ಉಮೇಶ್ ಕತ್ತಿ ಕೂಡ ಡಿಸಿಎಂ ಸ್ಥಾನದ ಆಕಾಂಕ್ಷಿಗಳಾಗಿದ್ದಾರೆ. ಆದರೆ ಹಿರಿಯರಿಗೆ ಹೈಕಮಾಂಡ್ ಪಕ್ಷ ಸಂಘಟನೆಗೆ ಮಾತ್ರ ನೇಮಿಸಿಕೊಳ್ಳುವ ಸಾಧ್ಯತೆ ಇದೆ.

ಸಚಿವ ಸಂಪುಟ ರೇಸ್ :- 

ಸದ್ಯ ರಾಜ್ಯದಲ್ಲಿ ಒನ್ ಮ್ಯಾನ್ ಸರ್ಕಾರವಿದೆ. ಸಂಪುಟ ರಚನೆ ಆಗಿಲ್ಲ. ಸಂಪುಟ ರಚನೆ ಮಾಡುವುದು ಬೊಮ್ಮಾಯಿಗೆ ಅತೀ ದೊಡ್ಡ ಸವಾಲುಗಳಲ್ಲಿ ಒಂದು. ಇತ್ತ ಶಾಸಕರು ಸಿಎಂ ಬೊಮ್ಮಾಯಿ , ಮಾಜಿ ಸಿಎಂ ಯಡಿಯೂರಪ್ಪ ಅವರನ್ನು ಭೇಟಿ ಮಾಡಿ ಸಚಿವ ಸ್ಥಾನಕ್ಕಾಗಿ ಬೇಡಿಕೆ ಇಟ್ಟಿದ್ದಾರೆ. ಹಲವು ನಾಯಕರು ಬಹಿರಂಗವಾಗಿ ಮಂತ್ರಿಯಾಗುವ ಆಸೆಯನ್ನು ವ್ಯಕ್ತಪಡಿಸಿದ್ದಾರೆ. ಈ ಬಾರಿ ತಮ್ಮನ್ನು ಹಿರಿಯರು ಪರಿಗಣಿಸುತ್ತಾರೆನ್ನುವ ಭರವಸೆ ಹೊಂದಿದ್ದಾರೆ. ಹೀಗೆ ಸಚಿವರ ಪಟ್ಟಿ ದೊಡ್ಡದಾಗಿದ್ದು ಯಾರಿಗೆ ಮಣೆ ಹಾಕಬೇಕು? ಯಾರನ್ನು ವಿಶ್ವಾಕ್ಕೆ ಪಡೆದುಕೊಳ್ಳಬೇಕು? ಅನ್ನೋದೇ ಬೊಮ್ಮಾಯಿಗೆ ದೊಡ್ಡ ಸವಾಲಾಗಿದೆ. ಒಂದುವೇಳೆ ಆಕಾಂಕ್ಷಿಗಳನ್ನು ಸಚಿವ ಸ್ಥಾನದಿಂದ ಕೈಬಿಟ್ಟರೂ ಭಿನ್ನಮತ ಸ್ಪೋಟಗಿಳ್ಳುವ ಸಾಧ್ಯತೆ ಇದೆ.

ಎರಡು ವರ್ಷ ಹಿಂದಿನಂತೆ ಸಂಪುಟ ರಚನೆ ವಿಳಂಬವಾಗುವ ಸಾಧ್ಯತೆ ಇದೆ.

ಬಾಂಬೆ ಫ್ರೆಂಡ್ಸ್ ಭವಿಷ್ಯವೇನು..?

ಮೈತ್ರಿ ಸರ್ಕಾರ ಬಿಟ್ಟು ಬಿಜೆಪಿ ಅಧಿಕಾರ ಬರಲು ಕಾರಣರಾದ 17 ಶಾಸಕರಿಗೆ ಯಡಿಯೂರಪ್ಪ ಸಚಿವ ಸ್ಥಾನ ನೀಡುವ ಭರವಸೆ ನೀಡಿದ್ದರು. ಆದರೆ ಇವರಲ್ಲಿ ಕೇವಲ 11 ಜನರಿಗೆ ಮಾತ್ರ ಮಂತ್ರಿಗಿರಿ ವಲಿಯಿತು. ಆದರೀಗ ಬೊಮ್ಮಾಯಿ ಸಂಪುಟದಲ್ಲಿ ಇವರೆಲ್ಲರಿಗೂ ಸಚಿವ ಸ್ಥಾನ ಸಿಗುತ್ತಾ ಅನ್ನೋದೇ ದೊಡ್ಡ ಪ್ರಶ್ನೆಯಾಗಿದೆ. ಆದರೆ ಶತಾಯಗತಾಯ ಬೊಮ್ಮಾಯಿ ಸಚಿವ ಸಂಪುಟದಲ್ಲಿ ಸ್ಥಾನ ಪಡೆಯಲು ವಲಸೆ ಬಿಜೆಪಿಗರು ನಿರ್ಧರಿಸಿದ್ದಾರೆ. ಲಸಿಗರಿಗೆ ಹೆಚ್ಚಿನ ಸ್ಥಾನ ನೀಡಿದರೆ ಮೂಲ ಬಿಜೆಪಿಗರ ಕಂಗೆಣ್ಣಿಗೆ ಸಿಎಂ ಬೊಮ್ಮಾಯಿ ಗುರಿಯಾಗುವ ಸಾಧ್ಯತೆ ಇದೆ.

ಪಕ್ಷ ಮತ್ತು ಸರ್ಕಾರ :-

ಪಕ್ಷ ಮತ್ತು ಸರ್ಕಾರ ತಾಳಮೇಳ ಕಳೆದುಕೊಂಡು ಬಿಎಸ್ ಯಡಿಯೂರಪ್ಪ ಸಿಎಂ ಸ್ಥಾನ ಕಳೆದುಕೊಂಡಿದ್ದಾರೆ. ಬಿಎಸ್ ವೈ ಸರ್ಕಾರ ಮುಂದುವರೆದಿದ್ದರೆ ಪಕ್ಷ ಹೀನಾಯವಾಗಿ ಸೋಲುತ್ತದೆ ಎಂದು ಮೋದಿ ಯಡಿಯೂರಪ್ಪ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಿದ್ದಾರೆನ್ನುವ ಆರೋಪವಿದೆ. ಇನ್ನೂ ಯಡಿಯೂರಪ್ಪ ಆಡಳಿತದಲ್ಲಿ ಪುತ್ರ ವಿಜೇಂದ್ರ ಹಸ್ತಕ್ಷೇಪದಿಂದ ಸರ್ಕಾರ ಮತ್ತು ಪಕ್ಷದ ನಡುವೆ ತಾಳಮೇಳ ಸರಿಯಿರಲಿಲ್ಲ. ಆದರೀಗ ಯಡಿಯೂರಪ್ಪ ಕೃಪಕಟಾಕ್ಷದಿಂದ ಸಿಎಂ ಪಟ್ಟ ಏರಿದ ಬೊಮ್ಮಾಯಿಗೆ ಪಕ್ಷ ಹಾಗೂ ಸರ್ಕಾರವನ್ನು ನಿಭಾಯಿಸುವ ಆತಂಕ ಇದೆ. ಇದರೊಂದಿಗೆ ಬೊಮ್ಮಾಯಿ ತಮ್ಮ ವೈಯಕ್ತಿಕ ವರ್ಚಸ್ಸು ಬಲಪಡಿಸಿಕೊಳ್ಳಬೇಕಾಗಿದೆ. ಜನಮನ್ನಣೆ ಗೆಲ್ಲಬೇಕಾಗಿದೆ.

ಪ್ರವಾಹ ಪರಿಹಾರ :- 

ರಾಜ್ಯದಲ್ಲಿ ಉತ್ತರ ಕನ್ನಡ, ಬೆಳಗಾವಿ ಜಿಲ್ಲೆಗಳು ಪ್ರವಾಹ ಹೊಡೆತಕ್ಕೆ ನಲುಗಿವೆ. ರಾಜ್ಯಕ್ಕೆ ಕೇಂದ್ರದಿಂದ ನೆರವು ಸಿಕ್ಕಿಲ್ಲ. ರಾಜ್ಯಕ್ಕೆ ಅನುಧಾನ ತರಲು ಯಡಿಯೂರಪ್ಪ ವಿಫಲವಾಗಿದ್ದರು ಇನ್ನೂ ಬೊಮ್ಮಾಯಿ ಏನ್ ಮಾಡ್ತಾರೆ ಎಂದು ವಿಪಕ್ಷಗಳು ಟೀಕಿಸಿವೆ. ಸಿಎಂ ಬೊಮ್ಮಾಯಿ ಪ್ರವಾಹ ಪ್ರವಾಸ ಮಾಡಿ ಇಂದು ದೆಹಲಿಗೆ ಹಾರಿದ್ದಾರೆ. ನೆರೆ ಜಿಲ್ಲೆಗಳಿಗೆ ಅನುದಾನ ತರುತ್ತಾರಾ ಅನ್ನೋ ನಿರೀಕ್ಷೆ ಇದೆ.

ಹೀಗೆ ಬೆಟ್ಟದಂತ ಸವಾಲುಗಳು ನೂತನ ಸಿಎಂ ಬೊಮ್ಮಾಯಿ ಮುಂದಿವೆ. ಇವೆಲ್ಲವನ್ನು ಬೊಮ್ಮಾಯಿ ಹೇಗೆ ನಿಭಾಯಿಸುತ್ತಾರೆ ಅನ್ನೋದನ್ನ ಕಾದು ನೋಡಬೇಕಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights