ಇಷ್ಟ ದಿನ ಬದಲಾವಣೆ ಆಟ.. ಈಗ ಸಂಭ್ರಮದಾಟ : ಟೈಮ್ ಪಾಸ್ ಸರ್ಕಾರಕ್ಕೆ ಜನರ ಹಿಡಿ ಶಾಪ!

ಸಿಎಂ ಸ್ಥಾನ ಅಲಂಕರಿಸಿ ಕೆಲವೇ ದಿನಗಳಲ್ಲಿ ಬಸವರಾಜ್ ಬೊಮ್ಮಾಯಿ ಸರ್ಕಾರ ಟೈಮ್ ಪಾಸ್ ಸರ್ಕಾರ ಎನ್ನುವ ಪಟ್ಟ ಪಡೆದುಕೊಂಡಿದೆ. ರಾಜ್ಯದಲ್ಲಿ ಪ್ರವಾಹದಿಂದ ಜನ ತತ್ತರಿಸಿದ್ದರೆ ಮೋದಿ ಆಶೀರ್ವಾದ ಪಡೆಯೋಕೆ ಸಿಎಂ ದೆಹಲಿ ಟೂರ್ ಮಾಡಿದ್ದಾರೆಂದು ನೆರೆ ಸಂತ್ರಸ್ತರು ಆರೋಪಿಸಿದ್ದಾರೆ.

ಹೌದು… ನೂತನ ಸಿಎಂ ಬೊಮ್ಮಾಯಿ ಇಂದು ದೇಹಲಿಯಲ್ಲಿ ಪ್ರಧಾನಿ ಮೋದಿ ಅವರನ್ನು ಭೇಟಿ ಮಾಡ್ತಾರಂತೆ ಆದರೆ ನೆರೆ ಬಗ್ಗೆ ಮಾತನಾಡುವುದಿಲ್ಲವಂತೆ. ಅಮಿತ್ ಶಾ ಅವರನ್ನು ಭೇಟಿ ಮಾಡ್ತಾರಂತೆ ಆದರೆ ಸಂಪುಟ ಬಗ್ಗೆ ಮಾತನಾಡಲ್ವಂತೆ. ಅದ್ಯಾಕೆ ಅನ್ನೋ ಪ್ರಶ್ನೆ ರಾಜ್ಯದ ಜನತೆಯಲ್ಲಿ ಮೂಡಿದೆ. ನಿನ್ನೆ ಸಿಎಂ ನೆರೆ ಪ್ರವಾಸಕ್ಕೆ ಹೋಗಿ ಹುಬ್ಬಳ್ಳಿಯಲ್ಲಿ ಟೈಮ್ ಪಾಸ್ ಮಾಡಿದ್ದಾರೆಂದು ದೂರಲಾಗುತ್ತಿದೆ.

ಕಳೆದ ಬಾರಿ ರಾಜ್ಯದಲ್ಲಿ ಉಂಟಾದ ಪ್ರವಾಹದಿಂದ ಜನ ಚೇತರಿಸಿಕೊಳ್ಳಲು ಆಗುತ್ತಿಲ್ಲ. ಯಡಿಯೂರಪ್ಪ ಭರವಸೆ ನೀಡಿದಂತೆ ಯಾವುದೇ ನೆರವು ಸಿಕ್ಕಿಲ್ಲ. ಕೇಂದ್ರದಿಂದಲೂ ಯಾವುದೇ ನೆರವು ಬಂದಿಲ್ಲ. ಹೀಗಿರುವಾಗ ನೂತನ ಸಿಎಂ ರಾಜ್ಯಕ್ಕೆ ಅನುದಾನ ತರುತ್ತಾರೆನ್ನುವ ಆಸೆ ನೆರೆ ಸಂತ್ರಸ್ತರಲ್ಲಿದೆ. ಆದರೆ  ಬೊಮ್ಮಾಯಿ ಅವರು ಮಾತ್ರ ಈ ಬಗ್ಗೆ ಚರ್ಚೆ ಮಾಡುವುದೇ ಇಲ್ಲ ಎಂದಿದ್ದಾರೆ.

ಬೊಮ್ಮಾಯಿ ತಾವು ಹೈಕಮಾಂಡ್ ಮುಂದೆ ನೆರೆ ಪರಿಹಾರ ಹಾಗೂ ಸಂಪುಟ ರಚನೆ ಬಗ್ಗೆ ಪ್ರಸ್ತಾಪ ಮಾಡುವುದಿಲ್ಲ ಎಂದು ಹೇಳಿ ಕೂಡ ಮಾಡುವ ಸಾಧ್ಯತೆ ಇದೆ. ಯಾಕೆಂದರೆ ಸಚಿವ ಆಕಾಂಕ್ಷಿಗಳ ಒತ್ತಡ ತಮ್ಮ ಮೇಲೆ ಅಧಿಕವಾಗುವುದನ್ನು ತಪ್ಪಿಸಲು ತಾವು ಸಂಪುಟ ರಚನೆ ಬಗ್ಗೆ ಹೈಕಮಾಂಡ್ ಮುಂದೆ ಪ್ರಸ್ತಾಪ ಮಾಡುವುದಿಲ್ಲ ಎಂದು ಹೇಳಿದ್ದಾರೆ ಎನ್ನಲಾಗುತ್ತಿದೆ.

ಬೆಳಗಾವಿ ಜಿಲ್ಲೆಯಲ್ಲಿ ಬೇರೆ ಬೇರೆ ತಾಲೂಕುಗಳು ಪ್ರವಾಹದಲ್ಲಿ ಮುಳುಗಿ ಹೋಗಿದ್ದಾರೆ. ಹಲವು ತಾಲೂಕುಗಳಲ್ಲಿ ಮಳೆ ದೊಡ್ಡ ಅವಾಂತರ ಸೃಷ್ಟಿಯಾಗಿದೆ. ಶಾಸಕರು ಪ್ರವಾಸ ಸ್ಥಳಗಳತ್ತ ಸುಳಿಯುತ್ತಿಲ್ಲ. ಸಿಎಂ ನಿಂದಲೂ ನಿರ್ಲಕ್ಷ್ಯವಿದೆ ಎನ್ನುವ ಆರೋಪಗಳು ಕೇಳಿಬರುತ್ತಿವೆ.

ಓಟ ಹಾಕಿದ ಶಾಸಕರು ಸಚಿವ ಸ್ಥಾನಕ್ಕೆ ಲಾಬಿ ನಡೆಸಲು ದೆಹಲಿಯಲ್ಲಿದ್ದಾರೆ. ಇತ್ತಾ ಸಿಎಂ ಕೂಡ ದೆಹಲಿಗೆ ಹೋಗಿದ್ದಾರೆ.ಶಶಿಕಲಾ ಜೊಲ್ಲೆ ಕೂಡ ಪ್ರವಾಹದ ಹೊಡೆತಕ್ಕೆ ಸಿಲುಕಿದವರ ಅಳಲು ಕೇಳಲು ಸಿಗುತ್ತಿಲ್ಲ. ರಾಜ್ಯದಲ್ಲಿ ತೊಂದರೆಗೊಳಗಾದ ಜನರಿಗೆ ಸಾಂತ್ವಾನ ಹೇಳುವವರು ಗತಿಯಿಲ್ಲದಂತಾಗಿದೆ.

ಶಾಸಕರು ಸಚಿವರಾದರೆ ಮಾತ್ರ ಜನರು ಅಳಲು ಕೇಳಲು ಸಾಧ್ಯ ಅನ್ನೋ ಮಟ್ಟಕ್ಕೆ ಬಂದು ತಲುಪಿದ್ದಾರೆ. ಸಿಎಂ ಬದಲಾದರೂ ಪರಿಸ್ಥಿತಿ ಮಾತ್ರ ಬದಲಾಗಿಲ್ಲ ಎಂದು ನೆರೆ ಸಂತ್ರಸ್ತರು ಹಿಡಿ ಶಾಪ ಹಾಕುತ್ತಿದ್ದಾರೆ.

 

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights