ಭಾರತ V/S ಶ್ರೀಲಂಕಾ: ಎಲ್ಲರಿಗೂ ಅವಕಾಶ ನೀಡಬೇಕೆಂಬ ನಿಯಮವಿಲ್ಲ: ಶಿಖರ್ ಧವನ್

ಭಾರತ ಮತ್ತು ಶ್ರೀಲಂಕಾ ಕ್ರಿಕೆಟ್‌ ತಂಡಗಳ ನಡುವೆ ಭಾನುವಾರದಿಂದ ಏಕದಿನ ಸರಣಿ ಪಂದ್ಯಗಳು ಆರಂಭವಾಗಲಿದೆ. ಭಾರತದ ಮೀಸಲು ತಂಡದ ಕ್ಯಾಪ್ಟನ್ಸ್‌ಯಲ್ಲಿ ಶಿಖರ್‌ ಧವನ್‌ ಹೊತ್ತಿದ್ದಾರೆ.

ಇಂದಿನಿಂದ ಲಂಕಾ ವಿರುದ್ದ ಭಾರತ ತಂಡ ಸೆಣೆಸಾಡಲಿದೆ. ಕೆಲವು ಹೊಸ ಆಟಗಾರರು ಇದೇ ಮೊದಲ ಬಾರಿಗೆ ರಾಷ್ಟ್ರೀಯ ತಂಡದಲ್ಲಿ ಅವಕಾಶ ಪಡೆದಿದ್ದಾರೆ. ಇವರೆಲ್ಲರೂ ಆಟ ಆಡಲಿದ್ದಾರೆಯೇ ಎಂಬ ಪ್ರಶ್ನೆಗೆ ಧವನ್‌ ಉತ್ತರಿಸಿದ್ದಾರೆ.

ಈ ಬಗ್ಗೆ ಮಾತನಾಡಿರುವ ಧವನ್‌, ಈ ಸರಣಿಯಲ್ಲಿ ಎಲ್ಲಾ ಆಟಗಾರರಿಗೂ ಆಡುವ ಅವಕಾಶ ಸಿಗಬೇಕು ಎಂಬ ನಿಯಮವೇನು ಇಲ್ಲ. ನಮಗೆ ಸರಣಿ ಗೆಲ್ಲುವುದು ಮುಖ್ಯ. ಆಟದ ಸಂದರ್ಭಕ್ಕೆ ಅನುಗುಣವಾಗಿ ಉತ್ತಮ ಆಟಗಾರರನ್ನು ಆಯ್ಕೆ ಮಾಡಿ ಆಡುತ್ತೇವೆ ಎಂದು ಹೇಳಿದ್ದಾರೆ.

ಟಿ20 ವಿಶ್ವಕಪ್ ಗೆ ಮೊದಲು ಇದು ಕೊನೆಯ ಸರಣಿಯಾದ ಕಾರಣ ವಿಶ್ವಕಪ್ ನಲ್ಲಿ ಆಡಬೇಕಾದ ಆಟಗಾರರ ಮೇಲೂ ಭಾರತ ತಂಡ ಕಣ್ಣಿಟ್ಟಿದೆ. ಲಂಕಾದಲ್ಲಿ ಉತ್ತಮ ಪ್ರದರ್ಶನ ತೋರಿದ ಆಟಗಾರರ ವಿಶ್ವಕಪ್ ತಂಡದಲ್ಲೂ ಸ್ಥಾನ ಪಡೆಯಬಹುದು. ಈ ಬಗ್ಗೆ ಮಾತನಾಡಿದ ಧವನ್, ನಾಯಕ ವಿರಾಟ್ ಮತ್ತು ಕೋಚ್ ರವಿ ಶಾಸ್ತ್ರೀ ವಿಶ್ವಕಪ್ ಆಧರಿಸಿ ಯಾವುದೇ ಆಟಗಾರನ ಮೇಲೆ ಕಣ್ಣಿಟ್ಟಿರಬಹುದು. ಅವರು ಆ ವಿಚಾರವನ್ನು ರಾಹುಲ್ ದ್ರಾವಿಡ್ ಗೆ ತಿಳಿಸಿರಬಹುದು. ಆ ಆಟಗಾರನಿಗೆ ಹೆಚ್ಚಿನ ಅವಕಾಶ ಕೊಡುತ್ತೇವೆ ಎಂದರು.

ಇದನ್ನೂ ಓದಿ: ಕೊನೆ ಓವರ್‌ನಲ್ಲಿ ಬೇಕಾಯ್ತು 35 ರನ್; 6 ಸಿಕ್ಸ್‌ ಸಿಡಿಸಿದ ಜಾನ್‌ ಗ್ಲಾಸ್‌; ಗೆದ್ದು ಬೀಗಿದ ಬ್ಯಾಲಿಮೆನಾ ತಂಡ!

Spread the love

Leave a Reply

Your email address will not be published. Required fields are marked *