ಕೊನೆ ಓವರ್‌ನಲ್ಲಿ ಬೇಕಾಯ್ತು 35 ರನ್; 6 ಸಿಕ್ಸ್‌ ಸಿಡಿಸಿದ ಜಾನ್‌ ಗ್ಲಾಸ್‌; ಗೆದ್ದು ಬೀಗಿದ ಬ್ಯಾಲಿಮೆನಾ ತಂಡ!

ಗುರುವಾರ ನಡೆದ ಎಲ್‌ವಿಎಸ್‌ ಟಿ-20 ಕ್ರಿಕೆಟ್‌ ಟ್ರೋಫಿಯ ಫೈನಲ್‌ ಪಂದ್ಯದಲ್ಲಿ ಬ್ಯಾಲಿಮೆನಾ ತಂಡವು ಉತ್ತರ ಐರಿಶ್ ಕ್ರಿಕೆಟ್ ಕ್ಲಬ್ (ಕ್ರೆಗಾಗ್) ವಿರುದ್ದ ಕೊನೆಯ ಓವರ್‌ನಲ್ಲಿ 36 ರನ್‌ಗಳನ್ನು ಸಿಡಿಸಿ ಗೆಲುವು ಸಾಧಿಸಿದೆ. ಅಲ್ಲದೆ, ಈ ವರ್ಷದ ಟ್ರೋಫಿಯನ್ನು ಗೆದ್ದುಕೊಂಡಿದೆ.

ಗಿಬ್ಸನ್ ಪಾರ್ಕ್‌ನಲ್ಲಿ ನಡೆದ ಫೈನಲ್‌ ಪಂದ್ಯದ ಅಂತಿಮ ಓವರ್‌ನಲ್ಲಿ ಕ್ರೀಸ್‌ನಲ್ಲಿದ್ದ ಜಾನ್ ಗ್ಲಾಸ್ ಅವರು ಕೊನೆಯ ಓವರ್‌ನಲ್ಲಿ ಆರು ಬಾಲ್‌ಗಳಿಗೆ ಆರು ಸಿಕ್ಸ್‌ಗಳನ್ನು ಸಿಡಿಸಿ ವಿಜಯದ ಪತಾಕೆ ಹಾಕಿಸಿದ್ದಾರೆ.

ಎಲ್‌ವಿಎಸ್‌ ಟ್ರೋಫಿಯ ಫೈನಲ್‌ ಪಂದ್ಯದಲ್ಲಿ ಮೊದಲು ಬ್ಯಾಟಿಂಗ್‌ ಮಾಡಿದ್ದ ಉತ್ತರ ಐರಿಶ್ ಕ್ರಿಕೆಟ್ ಕ್ಲಬ್ (ಕ್ರೆಗಾಗ್) ತಂಡವು 147 ರನ್‌ಗಳನ್ನು ಭಾರಿಸಿತ್ತು. ನಂತರ ಬ್ಯಾಟಿಂಗ್‌ಗೆ ಇಳಿದ ಬ್ಯಾಲಿಮೆನಾ ತಂಡವನ್ನು ಕ್ರಿಗಾಗ್‌ ತಂಡ ಅಂತಿಮ ಓವರ್‌ ವೇಳೆಗೆ 113-7ಕ್ಕೆ ಕಟ್ಟಿಹಾಕಿತ್ತು. ಕೊನೆಯ ಓವರ್‌ನಲ್ಲಿ ಬ್ಯಾಲಿಮೆನಾ ತಂಡಕ್ಕೆ 35 ರನ್‌ಗಳ ಅತ್ಯವಿತ್ತು. ಹೀಗಾಗಿ ಬ್ಯಾಲಿಮೆನಾ ತಂಡ ಸೋಲುತ್ತದೆ ಎಂದು ಕ್ರಿಕೆಟ್‌ ಅಭಿಮಾನಿಗಳು ಭಾವಿಸಿದ್ದರು.

ಆದರೆ, ಕ್ರೀಸ್‌ ಪ್ರವೇಶಿದ ಜಾನ್‌ ಗ್ಲಾಸ್‌ ಎಲ್ಲರ ಲೆಕ್ಕಾಚಾರವನ್ನು ತಲೆಗೆಳಗೆ ಮಾಡಿ, ಆರು ಬಾಲ್‌ಗಳಿಗೆ ಆರು ಸಿಕ್ಸ್‌ ಸಿಡಿಸಿದರು, ಸೋಲುವ ಅತಾಶೆಯಲ್ಲಿದ್ದ ಬ್ಯಾಲಿಮೆನಾ ತಂಡ ಕೊನೆಗೂ ಗೆದ್ದು ಬೀಗಿತು.

ಆದಾಗ್ಯೂ, ಕೊನೆಯ ಓವರ್‌ ವೇಳೆಗೆ 51 ರನ್‌ಗಳಿದ್ದ ಜಾನ್ ಗ್ಲಾಸ್‌ ಕೊನೆಯ ಓವರ್‌ನಲ್ಲಿ ಆರು ಸಿಕ್ಸ್‌ಗಳನ್ನು ಸಿಡಿಸಿ 87 ರನ್‌ಗಳನ್ನು ಪಡೆದು, ಅಜೇಯರಾಗಿ ಉಳಿದರು.

ಸ್ಥಾನದಲ್ಲಿದ್ದ ಸ್ಟ್ಯಾಂಡ್-ಇನ್ ಸ್ಕಿಪ್ಪರ್ ಗ್ಲಾಸ್, ಪ್ರತಿ ಎಸೆತದಲ್ಲಿ ಹಗ್ಗಗಳ ಮೇಲೆ 87 ರನ್ ಗಳಿಸಿ ಅಜೇಯರಾಗಿ ಮುಗಿಸಿದರು, ಇದು ಕ್ರೆಗಾಗ್ ಆಟಗಾರರ ಅಪನಂಬಿಕೆಗೆ ಮತ್ತು ಗಿಬ್ಸನ್ ಪಾರ್ಕ್‌ನಲ್ಲಿ ನೆರೆದಿದ್ದವರಿಗೆ.

ಇದನ್ನೂ ಓದಿ: ಕಣವಿ ಕಾರ್ನರ್‌: ಮಾಜಿ ಕ್ರಿಕೆಟಿಗ ಯಶಪಾಲ ಶರ್ಮಾ – ಸಣ್ಣ ನೆನಪು!

Spread the love

Leave a Reply

Your email address will not be published. Required fields are marked *