ಪ್ರಧಾನಿ ಮೋದಿಗೆ ಕನ್ನಡಿಗರ ಬಗ್ಗೆ ಕಾಳಜಿ ಇಲ್ಲ – ಸಿದ್ದರಾಮಯ್ಯ

ಪ್ರಧಾನಿ ಮೋದಿಗೆ ಕನ್ನಡಿಗರ ಬಗ್ಗೆ ಕಾಳಜಿ ಇಲ್ಲ. ರಾಜ್ಯದಲ್ಲಿ ನೆರೆ ಹಾವಳಿಯಾಗಿ ಅಪಾರ ಹಾನಿಯಾದ್ರು ರಾಜ್ಯಕ್ಕೆ ಒಂದು ರೂಪಾಯಿ ಪರಿಹಾರ ಕೊಟ್ಟಿಲ್ಲ. ಪರಿಹಾರ ಕೊಡಲು ಕೇಂದ್ರ ಸರ್ಕಾರ ದಿವಾಳಿಯಾಗಿರೋದೆ ಕಾರಣ ಎಂದು ಹಾಸನ ಜಿಲ್ಲೆ ಚನ್ನರಾಯಪಟ್ಟಣ ದಲ್ಲಿ ಮಾಜಿ ಸಿಎಂ ಸಿದ್ದರಾಮಯ್ಯ ವಾಗ್ದಾಳಿ ನಡೆಸಿದ್ದಾರೆ.

ರಾಜ್ಯದಲ್ಲಿ ನೆರೆಯಾದಾಗ ಮೋದಿ ಕರ್ನಾಟಕ ಕಕ್ಕೆ ಬಂದರೂ ವೀಕ್ಷಣೆ ಮಾಡಲಿಲ್ಲ. ಜನರ ಕಷ್ಟ ಕೇಳೋದಿರಲಿ ಯಡಿಯೂರಪ್ಪ ರನ್ನೇ ಬೇಟಿ ಮಾಡಲಿಲ್ಲ ಎಂದು ಕಟು ಟೀಕೆ ಮಾಡಿದ್ದಾರೆ.

ನೆರೆಯಿಂದ ಏಳು ಲಕ್ಷ ಜನ ನೆಲೆ ಕಳೆದುಕೊಂಡಿದ್ದಾರೆ, ಎರಡು ಲಕ್ಷ ಮನೆಗಳು ಬಿದ್ದು ಹೊಗಿವೆ. ಇಷ್ಟ ಹಾನಿಯಾದ್ರೂ ಪರಿಹಾರ ನೀಡಲು ಮುಂದಾಗಿಲ್ಲ. ರಾಜ್ಯದಲ್ಲಿ ಇಷ್ಟು ದೊಡ್ಡ ಪ್ರಮಾಣದಲ್ಲಿ ಜನರು ಎಂದೂ ಬಿಜೆಪಿ ಬೆಂಬಲಿಸಿರಲಿಲ್ಲ. ಇದೀಗ ದೊಡ್ಡ ಬೆಂಬಲ ನೀಡದ್ರೂ‌ಮೋದಿಗೆ ಕನ್ನಡಿಗರ ಬಗ್ಗೆ ಕಾಳಜಿ ಇಲ್ಲಾ ಎಂದು ವಾಗ್ದಾಳಿ ಮಾಡಿದ್ದಾರೆ.

2009 ರಲ್ಲೂ ನೆರೆಯಾಗಿತ್ತು ಆಗ ಮನಮೋಹನ್ ಸಿಂಗ್ ಪ್ರದಾನಿ ಯಾಗಿದ್ರು. ಕೂಡಲೆ ರಾಜ್ಯಕ್ಕೆ ಬಂದು ವೈಮಾನಿಕ ಸಮೀಕ್ಷೆ ಮಾಡಿದ್ರು. ಸ್ಥಳದಲ್ಲೇ 1600. ಕೋಟಿ ಪರಿಹಾರ ಘೋಷಣೆ ಮಾಡಿದ್ರು ಇದು ಮೋದಿಗೆ ಯಾಕೆ ಆಗಲಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

ರಾಜ್ಯದಲ್ಲಿ ಬಿಜೆಪಿಗೆ ಅಭೂತಪೂರ್ವ ಗೆಲುವಿಗೆ ಸಿದ್ದರಾಮಯ್ಯ ಕಾರಣ ಎಂದಿದ್ದ ಈಶ್ವರಪ್ಪಗೆ ತಿರುಗೇಟು ನೀಡಿದ್ದಾರೆ. ಈಶ್ಚರಪ್ಪ‌ ಕಲ್ಚರ್ ಇಲ್ಲದಿರೋ ಮನುಷ್ಯ. ಅವರಿಗೆ ರಾಜಕೀಯ ಭಾಷೆ ಗೊತ್ತಿಲ್ಲ. ಇಂತಹವರ ಬಗ್ಗೆ ಮಾತನಾಡದಿರೋದೆ ಒಳ್ಳೆಯದು ಎಂದಿದ್ದಾರೆ ಸಿದ್ದರಾಮಯ್ಯ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights