ಇನ್ಮುಂದೆ ‘ಮಗಳು ಜಾನಕಿ’ ಧಾರಾವಾಹಿ ಪ್ರಸಾರವಾಗುವುದಿಲ್ಲ : ಕಾರಣವೇನು ಗೊತ್ತಾ…?

ಜೂನ್ ಒಂದರಿಂದ ಕಿರುತೆರೆ ಧಾರವಾಹಿಗಳು ಪ್ರಸಾರವಾಗಲು ಸಿದ್ಧಗೊಳ್ಳುತ್ತಿವೆ. ಆದರೆ ಕೋಟ್ಯಾಂತರ ಅಭಿಮಾನಿಗಳ ಮನಗೆದ್ದ ಖ್ಯಾತ ಧಾರವಾಹಿ ‘ ಮಳು ಜಾನಕಿ’ ಸ್ಥಗಿತಗೊಳ್ಳುತ್ತಿದೆ.

ಹೌದು… ಸಾಕಷ್ಟು ಅಭಿಮಾನಿಗಳನ್ನು ಹೊಂದಿದ ‘ಮಗಳು ಜಾನಕಿ’ ಕೌಟುಂಬಿಕ ಧಾರವಾಹಿ ಸ್ಥಗಿತಗೊಳ್ಳಲಿದೆ. ಈ ಮೂಲಕ ಜೂನ್ ಒಂದರಿಂದ ‘ಮಗಳು ಜಾನಕಿ’ ಧಾರವಾಹಿ ನೋಡಲು ಕಾತುರರಾಗಿದ್ದ ಪ್ರೇಕ್ಷಕರಿಗೆ ನಿರಾಸೆಯಾಗಿದೆ.  ಗುಣಮಟ್ಟದ, ಸದಭಿರುಚಿಯ ಈ ಧಾರವಾಹಿ ಸ್ಥಗಿತಗೊಳ್ಳಲು ಪ್ರಮುಖ ಕಾರಣವೂ ಇದೆ.

ಮಗಳು ಜಾನಕಿ ಧಾರಾವಾಹಿ ಪ್ರಸಾರವಾಗುತ್ತಿದ್ದ ಕಲರ್ಸ್ ಸೂಪರ್ ವಾಹಿನಿ ತಾತ್ಕಾಲಿಕವಾಗಿ ಸ್ಥಗಿತಗೊಳ್ಳುತ್ತಿದೆ. ಹಾಗಾಗಿ ಮಗಳು ಜಾನಕಿ ಧಾರಾವಾಹಿ ಸಹ ಸ್ಥಗಿತಗೊಳ್ಳುತ್ತಿದೆ. ಸದ್ಯಕ್ಕೆ ಮಗಳು ಜಾನಕಿ ಧಾರಾವಾಹಿ ಪ್ರಸಾರವಾಗುವುದಿಲ್ಲ (ಹೊಸ ಎಪಿಸೋಡ್‌) ಮುಂದೆ ಏನಾಗುತ್ತದೆಯೋ ದೇವರೇ ನಿರ್ಧರಿಸಲಿದ್ದಾನೆ’ ಎಂದು ನಿರ್ದೇಶಕ ಸೀತಾರಾಮ್ ಹೇಳಿದ್ದಾರೆ. ಚಾನಲ್ಲೇ ಬಂದ್ ಆಗುತ್ತಿರುವಾಗ ನಾವು ಧಾರವಾಹಿಗೆ ಬೇರೆ ಚಾನಲ್ ಕೇಳಲು ಆಗದು. ಒಂದು ವೇಳೆ  ಕಲರ್ಸ್‌ನ ಬೇರೆ ಚಾನೆಲ್‌ನಲ್ಲಿ ಸ್ಲಾಟ್ ಕೊಟ್ಟರೆ ಖಂಡಿತ ಧಾರಾವಾಹಿ ಚಿತ್ರೀಕರಿಸಿ ಕೊಡುತ್ತೇವೆ ಎಂದಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights