FACT CHECK | ಬೀದಿಯಲ್ಲಿ ತಿರುಗುವ ಯುವಕರಿಗೆ 1 ಲಕ್ಷ ರೂಪಾಯಿ ನೀಡುತ್ತೇವೆ ಎಂದು ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಹೇಳಿದೆ ಎಂದು ಸುಳ್ಳು ಹಂಚಿಕೊಂಡ ಪೋಸ್ಟ್‌ ಕಾರ್ಡ್

ಕನ್ನಡದ ಬಲಪಂಥೀಯ ಸಾಮಾಜಿಕ ಜಾಲತಾಣವಾದ ಪೋಸ್ಟ್‌ಕಾರ್ಡ್ ಕನ್ನಡ ಕಾಂಗ್ರೆಸ್‌ ಪಕ್ಷ 2024ರ ಲೋಕಸಭಾ ಚುನಾವಣಾ ಪ್ರಣಾಳಿಕೆಯಲ್ಲಿ ಘೋಷಿಸಿದೆ ಎನ್ನಲಾದ ಯೋಜನೆಯೊಂದರ ಬಗ್ಗೆ ಪೋಸ್ಟ್‌ಅನ್ನು ಹಂಚಿಕೊಂಡಿದೆ.

ಇದು ಯುವಜನತೆಯ ಸಬಲೀಕರಣವೋ ಅಥವಾ ಸರ್ವನಾಶವೋ ಎಂಬ ಶೀರ್ಷಿಕೆಯೊಂದಿಗೆ ಪೋಸ್ಟ್‌ಅನ್ನು ಹಂಚಿಕೊಂಡಿದೆ. 24*7 ಇನ್‌ಸ್ಟಾಗ್ರಾಮ್‌ ಮತ್ತು ಫೇಸ್‌ಬುಕ್ ವೀಕ್ಷಿಸುತ್ತಾ ಬೀದಿಯಲ್ಲಿ ತಿರುಗು ಯುವಕರ ಖಾತೆಗಳಿಗೆ ನಾವು ಪ್ರತಿ ವರ್ಷ ಒಂದು ಲಕ್ಷ ರೂ ಅಥವಾ ಪ್ರತಿ ತಿಂಗಳೂ 8500 ರೂಪಾಯಿ ಹಾಕುತ್ತೇವೆ. ಎಲ್ಲರೂ ಕೆಲಸ ಬಿಟ್ಟು ಮನೆಯಲ್ಲಿ ಕೂರಲು ಸಿದ್ದರಾಗಿ ಎಂದು “ರಾಹುಲ್ ಗಾಂಧಿ” ಹೇಳಿದ್ದಾರೆ ಎಂಬ ವ್ಯಂಗ್ಯ ಬರಹದೊಂದಿಗೆ ಪೋಸ್ಟ್‌ಅನ್ನು ಹಂಚಿಕೊಂಡಿದೆ.

1 ವ್ಯಕ್ತಿ ಮತ್ತು ಪಠ್ಯ 'ಇದು ಯುವಜನತೆಯ ಸಬಲೀಕರಣವೋ ಅಥವ ಸರ್ವನಾಶವೋ? "24X7 ಇನ್‌ಸ್ಟಾಗ್ರಾಮ್ ಮತ್ತು ಫೇಸ್‌‍ಬುಕ್ ವೀಕ್ಷಿಸುತ್ತಾ ಬೀದಿಗಳಲ್ಲಿ ತಿರುಗಾಡುವ ಸಾಮಾನ್ಯ ಯುವಕರ ಖಾತೆಗಳಿಗೆ ನಾವು ಪ್ರತಿ ವರ್ಷ ಒಂದು ಲಕ್ಷ ರೂಪಾಯಿ ಅಥವಾ ಪ್ರತಿ ತಿಂಗಳು 8500 ರೂಪಾಯಿ ಹಾಕುತ್ತೇವೆ" -ರಾಹುಲ್ ಗಾಂಧಿ POST CARD ಎಲ್ಲರೂ ಕೆಲಸ బಿಟ್ಟು ಮನೆಯಲ್ಲಿ ಕೂರಲು ಸಿದ್ದರಾಗಿ f Postcard Kannada @PostcardKannada G Postcardkannada Postcard_kannada' ಹೇಳುತ್ತಿದೆ ನ ಚಿತ್ರವಾಗಿರಬಹುದು

ಹಾಗಿದ್ದರೆ ಕಾಂಗ್ರೆಸ್‌ ಬಿಡುಗಡೆಗೊಳಿಸಿರುವ 2024ರ ಲೋಕಸಭಾ ಪ್ರಣಾಳಿಕೆಯಲ್ಲಿ ಕೆಲಸವಿಲ್ಲದೆ ಟೈಂ ಪಾಸ್‌ ಮಾಡಿಕೊಂಡು ಬೀದಿಯಲ್ಲಿ ತಿರುಗುವ ಯುವಕರಿಗೆ ಒಂದು ಲಕ್ಷ ರೂಪಾಯಿಯನ್ನು ಅವರ ಖಾತೆಗೆ ಹಾಕುತ್ತೇವೆ ಎಂದು ಹೇಳಿದೆಯೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಜಾಲತಾಣದಲ್ಲಿ ವೈರಲ್‌ ಆಗುತ್ತಿರುವ ವಿಡಿಯೋ ಕುರಿತು ಏನ್‌ಸುದ್ದಿ.ಕಾಂ ಪರಿಶೀಲನೆಯನ್ನು ನಡೆಸಿದ್ದು, ಈ ಕುರಿತು ವೈರಲ್‌ ವಿಡಿಯೋದ ವಿವಿಧ ಕೀಫ್ರೇಮ್‌ಗಳನ್ನು ಬಳಸಿ ರಿವರ್ಸ್‌ ಇಮೇಜ್‌ನಲ್ಲಿ ಹುಡುಕಾಟವನ್ನು ನಡೆಸಿತು. ಈ ವೇಳೆ ಈ ವಿಡಿಯೋ ರಾಹುಲ್‌ ಗಾಂಧಿ ಅವರ ಅಧಿಕೃತ ಯುಟ್ಯೂಬ್‌ ಚಾನಲ್‌ನಲ್ಲಿ ದಿನಾಂಕ 20 ಏಪ್ರಿಲ್‌ 2024ರಂದು ಅಪ್‌ಲೋಡ್‌ ಮಾಡಿರುವುದು ಕಂಡು ಬಂದಿದೆ.

ಈ ವಿಡಿಯೋದ ಪೂರ್ಣ ಆವೃತ್ತಿಯಲ್ಲಿ ರಾಹುಲ್‌ ಗಾಂಧಿ ಅವರು ” ನರೇಂದ್ರ ಮೋದಿ ಅವರು ದೇಶವನ್ನು ನಿರುದ್ಯೋಗದ ಕೇಂದ್ರವನ್ನಾಗಿ ಮಾರ್ಪಡಿಸಿದ್ದಾರೆ. ನೀವು ಯುವಜನರಲ್ಲಿ ಕೇಳಿ ನೀವು ಏನು ಮಾಡುತ್ತಿದ್ದೀರಾ ಎಂದು ಅದಕ್ಕೆ ಅವರ ಉತ್ತರ ಏನೂ ಇಲ್ಲ ಎಂದು ಇರುತ್ತದೆ. ಇಂದು ಭಾರತದಲ್ಲಿ ಯುವಕರು ಇನ್‌ಸ್ಟಾಗ್ರಾಮ್‌, ಫೇಸ್‌ಬುಕ್‌ ನೋಡಿಕೊಂಡು ಬೀದಿಗಳಲ್ಲಿ ತಿರುಗುತ್ತಿದ್ದಾರೆ. ಏಕೆಂದರೆ ಅವರಿಗೆ ಉದ್ಯೋಗವಿಲ್ಲ ಎಂದು ಹೇಳಿದ್ದಾರೆ.

ಇದಾದ ಬಳಿಕ ತಮ್ಮ ಸರ್ಕಾರ ಅಧಿಕಾರಕ್ಕೆ ಬಂದರೆ ಸರ್ಕಾರಿ ಮತ್ತು ಖಾಸಗಿ ಸಂಸ್ಥೆಗಳನ್ನು ಕೆಲ ತಿಂಗಳು ವೇತನ ಸಹಿತ ತರಬೇತಿಯನ್ನು ನಾವು ಕೊಡುತ್ತೇವೆ ಎಂದು ರಾಹುಲ್‌ ಗಾಂಧಿ ಹೇಳಿಕೆ ನೀಡಿದ್ದಾರೆ. ಒಂದು ವೇಳೆ ಉದ್ಯೋಗದ ಕೊರತೆ ಎದುರಾದರೆ, ಅವರಿಗೆ ಹಣದ ನೆರವನ್ನು ನೀಡುವ ಮೂಲಕ ಸ್ವಉದ್ಯೋಗಕ್ಕೆ ಪ್ರೇರಣೆ ನೀಡುತ್ತೇವೆ ಎಂದು ತಿಳಿಸಿದ್ದಾರೆ.

ಮತ್ತೆ ಮಾತು ಮುಂದುವರೆಸಿದ ಅವರು ಪ್ರಧಾನಿ ಮೋದಿಯಿಂದಾಗಿ ಇವತ್ತು ಯಾರೆಲ್ಲ ನಿರುದ್ಯೋಗದಿಂದ ಬೀದಿಯಲ್ಲಿ ಇನ್ಸ್‌ಸ್ಟಾಗ್ರಾಮ್‌, ಫೇಸ್‌ಬುಕ್‌ ನೋಡುತ್ತಾ ಕುಳಿತಿರುತ್ತಾರೋ ಅವರ ಖಾತೆಗೆ ನಾವು ವರ್ಷಕ್ಕೆ 1 ಲಕ್ಷ ರೂ. ತಿಂಗಳಿಗೆ 8500 ರೂ. ಹಾಕುತ್ತೇವೆ ಎಂದು ಹೇಳಿಕೆ ನೀಡಿದ್ದಾರೆ. ಇದೀಗ ಇದೇ ವಿಡಿಯೋವನ್ನು ಎಡಿಟ್‌ ಮಾಡಿ ಸುಳ್ಳು ಮಾಹಿತಿಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ.

 

Nyay Patra

ಕಾಂಗ್ರೆಸ್ ಪ್ರಣಾಳಿಕೆಯಲ್ಲಿ ಪಕ್ಷವು ಪಂಚ ನ್ಯಾಯ ಮತ್ತು 25 ಭರವಸೆಗಳನ್ನು ಭರವಸೆ ನೀಡಿದೆ. ‘ಯುವ ನ್ಯಾಯ’, ‘ನಾರಿ ನ್ಯಾಯ’, ‘ಕಿಸಾನ್ ನ್ಯಾಯ’, ‘ಶ್ರಮಿಕ್ ನ್ಯಾಯ’ ಮತ್ತು ‘ಹಿಸ್ಸೆದಾರಿ ನ್ಯಾಯ’ ಹಾಗೂ ಖಾತರಿಗಳು ಸೇರಿದಂತೆ ಪಂಚ ನ್ಯಾಯವನ್ನ ಒತ್ತಿ ಹೇಳಿದೆ.

ಕರ್ನಾಟಕದಲ್ಲಿ ಕಳೆದ ವರ್ಷ ನಡೆದ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್‌ ನೀಡಿದ್ದ 5 ಗ್ಯಾರೆಂಟಿ ಯೋಜನೆಗಳನ್ನು ಹೀಗೆಯೇ ವ್ಯಂಗ್ಯವಾಗಿ ಟೀಕಿಸಿ ಜನಸಾಮಾನ್ಯರಲ್ಲಿ ಗೊಂದಲ ಮೂಡಿಸಲಾಗಿತ್ತು. ಆದರೆ ಗ್ಯಾರೆಂಟಿ ಯೋಜನೆಗಳಿಂದಾಗಿ ಬಡ ಕುಟುಂಬಗಳ ಜೀವನ ನಿರ್ವಹಣೆಗೆ ಸಹಾಯವಾಗಿದೆ ಎನ್ನುತ್ತವೆ ಹಲವು ಸಮೀಕ್ಷೆಗಳು.

ಈಗ ವಿಷಯಕ್ಕೆ ಬರೋಣ, 2024ರ ಲೋಕಸಭಾ ಚುನಾವಣೆಯ ಕಾಂಗ್ರೆಸ್‌ ಪ್ರಣಾಳಿಕೆ ನ್ಯಾಯ ಪತ್ರದಲ್ಲಿ ಯುವಕರ ಖಾತೆಗೆ ಪ್ರತಿ ವರ್ಷ ಒಂದು ಲಕ್ಷ ರೂ ಅಥವಾ ಪ್ರತಿ ತಿಂಗಳೂ 8500 ರೂಪಾಯಿ ಹಾಕುತ್ತೇವೆ ಎಂದು ಎಲ್ಲಿಯೂ ಹೇಳಿಲ್ಲ.

ಕಾಂಗ್ರೆಸ್ ಪ್ರಣಾಳಿಕೆಯ ಪ್ರಕಾರ 25 ವರ್ಷಕ್ಕಿಂತ ಕಡಿಮೆ ವಯಸ್ಸಿನ ಕಾಲೇಜು ಪದವೀಧರರು ಅಥವಾ ಡಿಪ್ಲೊಮಾ ಹೊಂದಿರುವವರಿಗೆ ಸಾರ್ವಜನಿಕ ವಲಯದ ಅಥವಾ  ಖಾಸಗಿ ಕಂಪನಿಗಳಲ್ಲಿ ಒಂದು ವರ್ಷದ ಶಿಷ್ಯವೃತ್ತಿ (ಅಪ್ರೆಂಟಿಸ್‌ಶಿಪ್‌ಗೆ) ನೀಡುವುದು ಈ ಸಂದರ್ಭದಲ್ಲಿ ಒಂದು ಲಕ್ಷ ಶಿಷ್ಯ ವೇತನ ನೀಡುವ ಗುರಿಯನ್ನು ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ತಿಳಿಸಿದೆ.

ಪದವೀಧರರಿಗೆ ಸರ್ಕಾರಿ ಕಚೇರಿಗಳಲ್ಲಿ ಒಂದು ವರ್ಷದ ವೃತ್ತಿ ತರಬೇತಿ (ಅಪ್ರೆಂಟಿಶಿಪ್‌) ನೀಡಲಾಗುವುದು. ಈ ಅವಧಿಯಲ್ಲಿ ಅವರಿಗೆ
₹1 ಲಕ್ಷ ಅಪ್ರೆಂಟಿಸ್‌ಶಿಪ್‌ ವೇತನ ನೀಡಲಾಗುವುದು ಎಂದು ಹೇಳಿದಿಯೇ ವಿನಃ  24*7 ಇನ್‌ಸ್ಟಾಗ್ರಾಮ್‌ ಮತ್ತು ಫೇಸ್‌ಬುಕ್ ವೀಕ್ಷಿಸುತ್ತಾ ಬೀದಿಯಲ್ಲಿ ತಿರುಗು ಯುವಕರ ಖಾತೆಗಳಿಗೆ ನಾವು ಪ್ರತಿ ವರ್ಷ ಒಂದು ಲಕ್ಷ ರೂ ಅಥವಾ ಪ್ರತಿ ತಿಂಗಳೂ 8500 ರೂಪಾಯಿ ಹಾಕುತ್ತೇವೆ. ಎಲ್ಲರೂ ಕೆಲಸ ಬಿಟ್ಟು ಮನೆಯಲ್ಲಿ ಕೂರವವರಿಗೆ ನೀಡುತ್ತೇ ಎಂದು ಹೇಳಿಲ್ಲ.

ತಿಂಗಳಿಗೆ 8500 ಅಥವಾ ವಾರ್ಷಿಕ ಒಂದು ಲಕ್ಷ ನೀಡುವ ಯೋಜನೆಯನ್ನು ಮಹಿಳೆಯರಿಗಾಗಿ ನೀಡಲು ಉದ್ದೇಶಿಸಿದೆ. ಅದಕ್ಕೆ ಮಹಾಲಕ್ಷ್ಮಿ ಎಂದು ಹೆಸರಿಡಲಾಗಿದೆ. ಕರ್ನಾಟಕದಲ್ಲಿ ಮನೆಯ ಯಜಮಾನಿತಿಗೆ ತಿಂಗಳಿಗೆ ರೂ. 2000 ಕೊಡುವ ರಾಜ್ಯ ಸರ್ಕಾರದ ‘ಗೃಹಲಕ್ಷ್ಮಿ’ ಯೋಜನೆಯಂತೆಯೇ, ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ವರ್ಷಕ್ಕೆ 1 ಲಕ್ಷ ರೂ. ಕೊಡುವ ‘ಮಹಾಲಕ್ಷ್ಮೀ’ ಗ್ಯಾರಂಟಿಯನ್ನು ಕಾಂಗ್ರೆಸ್‌ ಘೋಷಿಸಿದೆ.

 

‘ನಾರಿ ನ್ಯಾಯ’ದ ಅಡಿಯಲ್ಲಿ ಕಾಂಗ್ರೆಸ್‌ ಐದು ಗ್ಯಾರಂಟಿಗಳನ್ನು ಘೋಷಿಸಿದ್ದು, ಅದರಲ್ಲಿ ‘ಮಹಾಲಕ್ಷ್ಮಿ‘ ಗ್ಯಾರಂಟಿ ಯೋಜನೆ ಪ್ರಮುಖವಾದುದು. ಈ ಯೋಜನೆಯಡಿ ದೇಶದ ಪ್ರತಿ ಬಡ ಕುಟುಂಬದ ಒಬ್ಬ ಮಹಿಳೆಗೆ ವಾರ್ಷಿಕವಾಗಿ 1ಲಕ್ಷ ರೂ. ವರ್ಗಾವಣೆ ಮಾಡುವ ಸ್ಕೀಮ್ ಇದಾಗಿದೆ.

ಅಂದರೆ ಈ ಪೋಸ್ಟ್‌ ಕಾರ್ಡ್ ನ್ನಡ ಅಥವಾ ಟಿವಿ ವಿಕ್ರಮದವರಿಗೆ ಪದವೀಧರರು ಎಂದರೆ  ಟೈಂ ಪಾಸ್‌ಮಾಡಿಕೊಂಡು ಬೀದಿಯಲ್ಲಿ ತಿರುಗುವವರು ಎಂದು ತಿಳಿದಿರುವಂತಿದೆ. ಈ ದೇಶದ ಯುವಕರನ್ನು ಈ ಪರಿ ಅವಮಾನ ಮಾಡುವುದು ಬಲಪಂಥೀಯ ಸಿದ್ದಾಂತದ ಭಾಗವೇ ಎಂದು ಪ್ರಶ್ನಿಸಬೇಕಿದೆ.

ಕಾಂಗ್ರೆಸ್ ಕೇಂದ್ರದಲ್ಲಿ ಅಧಿಕಾರಕ್ಕೆ ಬಂದರೆ ಪದವೀಧರರಿಗೆ ಸರ್ಕಾರಿ ಕಚೇರಿಗಳಲ್ಲಿ ಒಂದು ವರ್ಷದ ವೃತ್ತಿ ತರಬೇತಿ (ಅಪ್ರೆಂಟಿಶಿಪ್‌) ನೀಡಲಾಗುವುದು. ಈ ಅವಧಿಯಲ್ಲಿ ಅವರಿಗೆ ₹1 ಲಕ್ಷ ಅಪ್ರೆಂಟಿಸ್‌ಶಿಪ್‌ ವೇತನ ನೀಡಲಾಗುವುದು ಎಂದು ಹೇಳಿರುವುದನ್ನು, 24*7 ಇನ್‌ಸ್ಟಾಗ್ರಾಮ್‌ ಮತ್ತು ಫೇಸ್‌ಬುಕ್ ವೀಕ್ಷಿಸುತ್ತಾ ಬೀದಿಯಲ್ಲಿ ತಿರುಗು ಯುವಕರ ಖಾತೆಗಳಿಗೆ ನಾವು ಪ್ರತಿ ವರ್ಷ ಒಂದು ಲಕ್ಷ ರೂ ಅಥವಾ ಪ್ರತಿ ತಿಂಗಳೂ 8500 ರೂಪಾಯಿ ಹಾಕುತ್ತೇವೆ. ಎಲ್ಲರೂ ಕೆಲಸ ಬಿಟ್ಟು ಮನೆಯಲ್ಲಿ ಕೂರಲು ಸಿದ್ದರಾಗಿ ಎಂದು “ರಾಹುಲ್ ಗಾಂಧಿ” ಹೇಳಿದ್ದಾರೆ  ಎಂದು ಸುಳ್ಳು ಮತ್ತು ತಪ್ಪಾಗಿ ಹಂಚಿಕೊಳ್ಳಲಾಗಿದೆ.

ಕಳೆದ 10 ವರ್ಷಗಳಲ್ಲಿ ಕೇಂದ್ರ ಸರ್ಕಾರ ವೈಫಲ್ಯಗಳನ್ನು ಪ್ರಶ್ನಿಸದ ಈ ಟಿವಿ ವಿಕ್ರಮ ಮತ್ತು ಪೋಸ್ಟ್‌ ಕಾರ್ಡ್ ಎಂಬ ಬಲಪಂಥೀಯ ಮಾಧ್ಯಮ ಬಡವರಿಗೆ ಸಹಾಯಾಗುವ ಯೋಜನೆಗಳ ಬಗ್ಗೆ ವ್ಯಂಗ್ಯ ಮಾಡಿ ಪೋಸ್ಟ್‌ಅನ್ನು ಹಂಚಿಕೊಂಡಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಕಾಂಗ್ರೆಸ್‌ ಸರ್ಕಾರ ದಲಿತರ ಮೀಸಲಾತಿ ಕಿತ್ತು, ಮುಸ್ಲಿಮರಿಗೆ ನೀಡಿತ್ತು ಎಂದು ಸುಳ್ಳು ಹೇಳಿದ ಪ್ರಧಾನಿ ಮೋದಿ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights