ಪ್ರೀತಿಸಿದವನೊಂದಿಗೆ ವಿವಾಹಕ್ಕೆ ಒತ್ತಾಯಿಸಿ ಹೋರ್ಡಿಂಗ್‌ ಮೇಲೇರಿದ ಅಪ್ರಾಪ್ತ ಬಾಲಕಿ!

ಪ್ರೀತಿಸಿದ ಯುವಕನೊಂದಿಗೆ ಮದುವೆ ಮಾಡಿಕೊಡಬೇಕೆಂದು ಒತ್ತಾಯಿಸಿ, ಅಪ್ರಾಪ್ತ ಬಾಲಕಿಯೊಬ್ಬಳು ಮೇಲ್ಸೇತುವೆಯಲ್ಲಿದ್ದ ಹೋರ್ಡಿಂಗ್‌ ಮೇಲೇರಿ ಹಠ ಹಿಡಿದು ಕುಳಿತಿದ್ದ ಘಟನೆ ಮಧ್ಯಪ್ರದೇಶದ ಇಂಧೋರ್‌ನಲ್ಲಿ ನಡೆದಿದೆ.

ಇಂಧೋರ್‌ನ ಪರ್ದೇಸಿಪುರ್‌ದ ಭಂಢಾರಿ ಸೇತುವೆ ಬಳಿ ಈ ಘಟನೆ ನಡೆದಿದ್ದು, ತಾನು ಪ್ರೀತಿಸುವ ಹುಡುಗನೊಂದಿಗೆ ಮದುವೆಗೆ ಪೋಷಕರು ಸಿದ್ಧರಿಲ್ಲದ ಕಾರಣ ಮೇಲ್ಸೇತುವೆಯ ಹೋರ್ಡಿಂಗ್‌ ಏರಿ ಪ್ರತಿಭಟನೆ ನಡೆಸಿದ್ದಾಳೆ.

ಹೋರ್ಡಿಂಗ್ ಮೇಲೆ ಕುಳಿತು ತನ್ನ ಪ್ರಿಯಕರನ ಹೆಸರು ಹೇಳುತ್ತಾ ಜೋರಾಗಿ ಕೂಗುತ್ತಿದ್ದ ಅಪ್ರಾಪ್ತ ಬಾಲಕಿಯನ್ನು ಜನರು ಸಮಾಧಾನಪಡಿಸಲು ಯತ್ನಿಸಿದ್ದಾರೆ.

ಬಳಿಕ ವಿಷಯ ತಿಳಿದ ಪೊಲೀಸರು ಸ್ಥಳಕ್ಕೆ ಆಗಮಿಸಿ ಕೆಳಗೆ ಇಳಿಯುವಂತೆ ಮನವಿ ಮಾಡಿದರೂ ಬಾಲಕಿ ಒಪ್ಪಿಲ್ಲ. ಪೋಷಕರ ಮನವಿಗೂ ಬಾಲಕಿ ಕಿಡಿಗೊಡದಾದಾಗ ಕೊನೆಗೆ ಆಕೆಯ ಪ್ರಿಯಕರನನ್ನು ಕರೆಸಲಾಯಿತು.

ಕೊನೆಯಲ್ಲಿ ಪ್ರಿಯಕರನ ನಿರಂತರ ಮನವಿಗೆ ಓಗೊಟ್ಟ ಅಪ್ರಾಪ್ತ ಬಾಲಕಿ, ಹೋರ್ಡಿಂಗ್‌ನಿಂದ ಸುರಕ್ಷಿತವಾಗಿ ಕೆಳಗಿಳಿದು ಬಂದಿದ್ದಾಳೆ. ಬಾಲಕಿ ಸುರಕ್ಷಿತವಾಗಿ ಕೆಳಗಿಳಿದ ಬಳಿಕವೇ ನೆರೆದವರು ನೆಮ್ಮದಿಯ ನಿಟ್ಟುಸಿರು ಬಿಟ್ಟಿದ್ದಾರೆ.

ಈ ಕುರಿತು ಮಾಹಿತಿ ನೀಡಿರುವ ಪರ್ದೇಸಿಪುರ್‌ದ ಪೊಲೀಸ್ ಅಧಿಕಾರಿ ಅಶೋಕ್ ಪಾಟಿದಾರ್, ಬಾಲಕಿ ಪ್ರೀತಿಸುತ್ತಿದ್ದ ಹುಡುಗನೊಂದಿಗೆ ಮದುವೆ ಮಾಡಿಸಲು ಆಕೆಯ ತಾಯಿಯ ವಿರೋಧವಿತ್ತು. ಇದೇ ಕಾರಣಕ್ಕೆ ಆಕೆ ಹೋರ್ಡಿಂಗ್ ಏರಿ ರಂಪಾಟ ಮಾಡಿದ್ದಾಳೆ ಎಂದು ಸ್ಪಷ್ಟಪಡಿಸಿದ್ದಾರೆ.


ಇದನ್ನೂ ಓದಿ: ಕಾಂಗ್ರೆಸ್‌ ಭದ್ರಕೋಟೆ ಭೇದಿಸುತ್ತಿದೆ ಬಿಜೆಪಿ: ಸಿದ್ದರಾಮಯ್ಯ ತವರಲ್ಲಿ ಅರಳುತ್ತಿದೆ ಕಮಲ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights