FACT CHECK | ವಂದೇ ಭಾರತ್ ರೈಲಿನಲ್ಲಿ ಭಗವಾನ್ ರಾಮನ ಚಿತ್ರದ ಅಸಲೀಯತ್ತೇನು?

ವಂದೇ ಭಾರತ್ ರೈಲಿನಲ್ಲಿ ಭಗವಾನ್ ರಾಮನ ಕಲಾಕೃತಿ ಚಿತ್ರವನ್ನು ಹೊಂದಿರುವ ಫೋಟೊವೊಂದು ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಹಲವು ಬಳಕೆದಾರರು ಈ ಚಿತ್ರವನ್ನು ವಂದೇ ಭಾರತ್ ಎಕ್ಸ್‌ಪ್ರೆಸ್‌ನ ಹೊಸ ವಿನ್ಯಾಸ ಎಂದು ಹೇಳಿಕೊಂಡು ಹಂಚಿಕೊಳ್ಳುತ್ತಿದ್ದಾರೆ. ‘ಭಾರತ ತನ್ನ ಶ್ರೇಷ್ಠ ಪರಂಪರೆಯತ್ತ ಸಾಗುತ್ತಿರುವುದು ಅದ್ಭುತವಾಗಿದೆ ಜೈ ಶ್ರೀ ರಾಮ್’ ಎಂದು ಹೇಳಿಕೊಳ್ಳುತ್ತಿದ್ದಾರೆ.

ಇದೇ ರೀತಿಯ ಪ್ರತಿಪಾದನೆಯೊಂದಿಗೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ವಿಡಿಯೋವನ್ನು ಹಂಚಿಕೊಂಡಿದ್ದು ಈ ರೈಲಿ ಚಿತ್ರವಿರುವುದು ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ : 

ಸಾಮಾಜಿಕ ಮಾಧ್ಯಮಗಳಲ್ಲಿ ಪ್ರಸಾರವಾಗುತ್ತಿರುವ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯಂತೆ ವಂದೇ ಭಾರತ್ ರೈಲಿನಲ್ಲಿ ಶ್ರೀರಾಮನ ಕಲಾಕೃತಿಯ ಚಿತ್ರಕ್ಕೆ ಸಂಬಂಧಿಸಿದಂತೆ ಪರಿಶೀಲಿಸಲು ಸಂಬಂಧಿತ ಕೀವರ್ಡ್‌ಗಳನ್ನು ಬಳಸಿಕೊಂಡು  ಸರ್ಚ್‌ ಮಾಡಿದಾಗ, ಇದನ್ನು ದೃಢೀಕರಿಸುವ ಯಾವುದೇ ಅಧಿಕೃತ ಪ್ರಕಟಣೆಗಳು ಅಥವಾ ವಿಶ್ವಾಸಾರ್ಹ ಮಾಧ್ಯಮ ವರದಿಗಳು ಲಭ್ಯವಾಗಿಲ್ಲ. ನಾವು ರೈಲ್ವೆ ಸಚಿವಾಲಯ ಮತ್ತು ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ಅವರ ಅಧಿಕೃತ ಸಾಮಾಜಿಕ ಮಾಧ್ಯಮ ಹ್ಯಾಂಡಲ್‌ಗಳನ್ನು ಪರಿಶೀಲಿಸಿದ್ದೇವೆ. ಭಗವಾನ್ ರಾಮನನ್ನು ಒಳಗೊಂಡ ಹೊಸ ವಂದೇ ಭಾರತ್ ವಿನ್ಯಾಸದ ಬಗ್ಗೆ ಯಾವುದೇ ಉಲ್ಲೇಖ ಕಂಡುಬಂದಿಲ್ಲ.

 

View this post on Instagram

 

A post shared by Abir Mukherjee (@the_rail_pilot_)

ಬಳಿಕ ನಾವು ವೈರಲ್ ಫೋಟೋವನ್ನು ಸೂಕ್ಷ್ಮವಾಗಿ ಗಮನಿಸಿದ್ದೇವೆ. ಇದರಲ್ಲಿ The Rai Pilot ಎಂಬ ವಾಟರ್ ಮಾರ್ಕ್ ಇರುವುದನ್ನು ಗಮನಿಸಿದ್ದೇವೆ. ಇದನ್ನು ನಾವು ಗೂಗಲ್​ನಲ್ಲಿ ಹುಡುಕಿದಾಗ ಈ ಹೆಸರಿನ ಇನ್​ಸ್ಟಾಗ್ರಾಮ್ ಅಕೌಂಟ್ ಸಿಕ್ಕಿದೆ. ಇದರಲ್ಲಿ ವೈರಲ್ ಫೋಟೋ ಕೂಡ ಇದ್ದು, ಇದಕ್ಕೆ ‘ಈ ಫೋಟೋವನ್ನು ಸಂಪೂರ್ಣವಾಗಿ ಕೃತಕ ಬುದ್ದಿಮತ್ತೆಯಿಂದ ರಚಿಸಲಾಗಿದೆ’ ಎಂಬ ಕ್ಯಾಪ್ಶನ್ ನೀಡಲಾಗಿದೆ.

ಇದೇ ಖಾತೆಯಲ್ಲಿ ಐಪಿಎಲ್ ತಂಡವಾದ ರಾಯಲ್ ಚಾಲೆಂಜರ್ಸ್ ಬೆಂಗಳೂರು ಮತ್ತು ಮುಂಬೈ ಇಂಡಿಯನ್ಸ್ ಆಟಗಾರರ ಕಲಾಕೃತಿಯನ್ನು ರೈಲಿನಲ್ಲಿ ಬಿಡಿಸಿರುವ ಎಐ ಫೋಟೋ ಕೂಡ ಕಂಡುಬಂದಿದ್ದು, ಅದನ್ನು ನೀವು ಇಲ್ಲಿ, ಇಲ್ಲಿ ನೋಡಬಹುದು.

ಇನ್ನಷ್ಟು ಖಚಿತ ಮಾಹಿತಿಗಾಗಿ ನಾವು ಫೋಟೋವನ್ನು ಎಐ ಪತ್ತೆ ಸಾಧನದ ಮೂಲಕ ಪರಿಶೀಲನೆಗೆ ಉದ್ದೇಶಿಸಿದ್ದೇವೆ. ಹೈವ್ ಮಾಡರೇಷನ್ ಮೂಲಕ ಫೋಟೋವನ್ನು ಪರೀಕ್ಷಿಸಿದಾಗ, ಈ ಫೋಟೋ ಎಐ ಆಗಿರುವ ಸಾಧ್ಯತೆಯನ್ನು 97.9% ಆಗಿದೆ ಎಂದು ಹೇಳಿದೆ. ಹಾಗೆಯೆ ಮತ್ತೊಂದು ಎಐ ಪತ್ತೆ ವೆಬ್​ಸೈಟ್ ವಾಸ್‌ ಇಟ್ ಎಐ ಮೂಲಕ ಫೋಟೋ ಪರಿಶೀಲಿಸಿದಾಗ, ಇಲ್ಲೂ ಫೋಟೋ ಎಐನಿಂದ ತಯಾರಿಸಲಾಗಿದೆ ಎಂದು ಹೇಳಿದೆ.

ಒಟ್ಟಾರೆಯಾಗಿ ಹೇಳುವುದಾದರೆ, ವಂದೇ ಭಾರತ್ ರೈಲಿನಲ್ಲಿ ಭಗವಾನ್ ರಾಮನ ಕಲಾಕೃತಿ ಇರುವುದು ನಿಜವಲ್ಲ, ಇದನ್ನು ಎಐನಿಂದ ರಚಿಸಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಆಪರೇಷನ್ ಸಿಂದೂರ್‌ ಹೆಸರಿನಲ್ಲಿ AI ವಿಡಿಯೋ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights