FACT CHECK | ಪ್ರಿಯಾಂಕಾ ಗಾಂಧಿಯವರ ಹಳೆಯ ವಿಡಿಯೋವನ್ನು ಬೆಂಗಳೂರಿನದ್ದು ಎಂದು ತಪ್ಪಾಗಿ ಹಂಚಿಕೆ

ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ ಏಪ್ರಿಲ್ 23 ಮಂಗಳವಾರ ಬೆಂಗಳೂರಿಗೆ ಭೇಟಿ ನೀಡಿ 2024ರ ಲೋಕಸಭಾ ಚುನಾವಣಾ ಪ್ರಚಾರದಲ್ಲಿ ಭಾಗಿಯಾಗಿದ್ದರು. ಈ ವೇಳೆ ಪ್ರಿಯಾಂಕಾ ಗಾಂಧಿ ಅವರನ್ನು ಆಹ್ವಾನಿಸಿ ಹಾಕಲಾಗಿದ್ದ ಬ್ಯಾನರ್‌ಗಳಲ್ಲಿ ಭಾರತದ ತ್ರಿವರ್ಣ ಧ್ವಜವನ್ನು ತಲೆ ಕೆಳಗಾಗಿ ಮುದ್ರಿಸಲಾಗಿದೆ ಎಂದು ಪ್ರತಿಪಾದಿಸಿ ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ.

ಪ್ರಿಯಾಂಕ ವಡ್ರಾಳ ಕಾಲ ಕೆಳಗೆ, ತಲೆಕೆಳಗಾದ ಭಾರತದ ಧ್ವಜವಿರುವ ಬ್ಯಾನರ್ ಗಳು ಬೆಂಗಳೂರಿನಲ್ಲಿ ರಾರಾಜಿಸತ್ತಿವೆ. ಭಾರತದ ಗರ್ವ ನಮ್ಮ ತ್ರಿವರ್ಣಧ್ವಜವನ್ನ ಗೌರವಿಸಲು ಬಾರದವರಿಗೆ ದೇಶ ಆಳುವ ಹಂಬಲ.. ಎಂಬ ಹೇಳಿಕೆಯೊಂದಿಗೆ ಎಕ್ಸ್‌ನಲ್ಲಿ ಪೋಸ್ಟ್‌ಅನ್ನು ಹಂಚಿಕೊಂಡಿದ್ದಾರೆ. ಇದೇ ಪ್ರತಿಪಾದನೆಯೊಂದಿಗೆ ಹಲವು ಎಕ್ಸ್ ಮತ್ತು ಫೇಸ್ಬುಕ್ ಬಳಕೆದಾರರು ವೀಡಿಯೋವನ್ನು ಹಂಚಿಕೊಂಡಿದ್ದಾರೆ. ಅವುಗಳನ್ನು  ಇಲ್ಲಿಇಲ್ಲಿಇಲ್ಲಿಇಲ್ಲಿಇಲ್ಲಿ ಮತ್ತು ಇಲ್ಲಿ ನೋಡಬಹುದು.

ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ : 

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಿರುವ ನ್ಯೂಸ್ ಚೆಕರ್ ಸಂಸ್ಥೆ ವೈರಲ್ ಪೋಸ್ಟ್‌ನ ಸತ್ಯಾಸತ್ಯತೆಯನ್ನು ಫ್ಯಾಕ್ಟ್‌ಚೆಕ್ ಮೂಲಕ ಪ್ರಕಟಿಸಿದೆ. ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿರುವ ಸಂಸ್ಥೆ ಈ ವೈರಲ್ ಪೋಸ್ಟ್‌ರ್‌ ಬೆಂಗಲೂರಿಗೆ ಸಂಬಧಿಸಿದಲ್ಲ ಎಂದು ತಿಳಿಸಿದೆ.

Fact Check: ಪ್ರಿಯಾಂಕಾ ವಾದ್ರಾ ಕಾಲ ಕೆಳಗೆ ಭಾರತದ ಧ್ವಜವಿರುವ ಬ್ಯಾನರ್ ಗಳನ್ನು ಬೆಂಗಳೂರಲ್ಲಿ ಅಳವಡಿಸಲಾಗಿದೆ ಎನ್ನುವುದು ನಿಜವೇ?

22 ಆಗಸ್ಟ್‌ 2023 ರಂದು ಪ್ರಕಟವಾಗಿದ್ದ ಫಸ್ಟ್‌ ಪೋಸ್ಟ್‌ನ ವರದಿ ಸಿಕ್ಕಿತು. ಇದೀಗ ವೈರಲ್ ಆಗಿರುವ ವಿಡಿಯೋದ ಸ್ಕ್ರೀನ್ ಶಾಟ್ ಹೊಂದಿರುವ ಈ ವರದಿಯಲ್ಲಿ ಈ ರೀತಿ ವಿವರಿಸಲಾಗಿತ್ತು: ‘ಮಧ್ಯ ಪ್ರದೇಶದಲ್ಲಿ ಮತದಾರರನ್ನು ಸೆಳೆಯಲು ಕಾಂಗ್ರೆಸ್ ಪಕ್ಷ ಎಲ್ಲ ಪ್ರಯತ್ನಗಳನ್ನೂ ಮಾಡುತ್ತಿದೆ. ಆದರೆ, ಕಾಂಗ್ರೆಸ್‌ನಲ್ಲಿ ಎಲ್ಲವೂ ಸರಿ ಇಲ್ಲ. ಏಕೆಂದರೆ, ಬಿಜೆಪಿ ಹಂಚಿಕೊಂಡಿರುವ ವಿಡಿಯೋ ಪ್ರಕಾರ ಪ್ರಿಯಾಂಕಾ ಗಾಂಧಿ ವಾದ್ರಾ ಅವರ ಪೊಸ್ಟರ್‌ಗಳಲ್ಲಿ ತ್ರಿವರ್ಣ ಧ್ವಜವನ್ನು ತಲೆ ಕೆಳಗಾಗಿ ಮಾಡಿ ಅವರ ಪಾದಗಳ ಬಳಿ ಇರಿಸಲಾಗಿದೆ’ ಎಂದು ವಿರಿಸಿತ್ತು.

Fact Check: ಪ್ರಿಯಾಂಕಾ ವಾದ್ರಾ ಕಾಲ ಕೆಳಗೆ ಭಾರತದ ಧ್ವಜವಿರುವ ಬ್ಯಾನರ್ ಗಳನ್ನು ಬೆಂಗಳೂರಲ್ಲಿ ಅಳವಡಿಸಲಾಗಿದೆ ಎನ್ನುವುದು ನಿಜವೇ?

22 ಆಗಸ್ಟ್‌ 2023ರಂದು ‘ಮಧ್ಯ ಪ್ರದೇಶದಲ್ಲಿ ಕಾಂಗ್ರೆಸ್ ಪಕ್ಷ ಉದ್ದೇಶಪೂರ್ವಕವಾಗಿ ತ್ರಿವರ್ಣ ಧ್ವಜವನ್ನು ತಲೆಕೆಳಗಾಗಿ ಹಾಕಿದೆ’ ಎಂದು @sureshNakhua ಎಂಬ ಎಕ್ಸ್‌ ಬಳಕೆದಾರರು ಈ ವೈರಲ್ ವಿಡಿಯೋವನ್ನು ಪೋಸ್ಟ್‌ ಮಾಡಿದ್ದರು.

Fact Check: ಪ್ರಿಯಾಂಕಾ ವಾದ್ರಾ ಕಾಲ ಕೆಳಗೆ ಭಾರತದ ಧ್ವಜವಿರುವ ಬ್ಯಾನರ್ ಗಳನ್ನು ಬೆಂಗಳೂರಲ್ಲಿ ಅಳವಡಿಸಲಾಗಿದೆ ಎನ್ನುವುದು ನಿಜವೇ?

 

ವೈರಲ್ ವಿಡಿಯೋದಲ್ಲಿ ಮಾತನಾಡುವ ವ್ಯಕ್ತಿಗಳು ಹಿಂದಿಯಲ್ಲಿ ಮಾತನಾಡಿರುವುದನ್ನು ಕೇಳಬಹುದು. ಹಿನ್ನೆಲೆಯಲ್ಲಿ ಬರುವ ಈ ಸಂಭಾಷಣೆಯ ಸಾರಾಂಶ ಇಂತಿದೆ. ‘ಪ್ರಿಯಾಂಕಾ ಗಾಂಧಿ ಅವರ ಪಾದದ ಬಳಿ ತ್ರಿವರ್ಣ ಧ್ವಜ ಇದೆ. ಇದು ಗ್ವಾರಿ ಘಾಟ್ ರಸ್ತೆ. ಕಾಂಗ್ರೆಸ್‌ನವರಿಗೆ ತ್ರಿವರ್ಣ ಧ್ವಜ ಅರ್ಥ ಆಗಲ್ಲ. ಅವರು ದೇಶವನ್ನ ಹೇಗೆ ಅರ್ಥ ಮಾಡಿಕೊಳ್ತಾರೆ’ ಎಂದು ಹಿಂದಿಯಲ್ಲಿ ಈ ಸಂಭಾಷಣೆ ಮಾಡಲಾಗಿದೆ.

ಅಂದರೆ ವೀಡಿಯೋದಲ್ಲಿ ಹಿಂದಿ ಆಡಿಯೋ ಬದಲಾಗಿ ಕನ್ನಡ ಆಡಿಯೋವನ್ನು ಸೇರಿಸಲಾಗಿದ್ದು, ಬೆಂಗಳೂರಿನದ್ದು ಎಂಬ ಭಾವನೆಯನ್ನು ಮೂಡಿಸಲಾಗಿದೆ.  ನಂತರ ನಾವು ಗೂಗಲ್ನಲ್ಲಿ “ಗ್ವಾರಿಘಾಟ್ ಮತ್ತು ಮಧ್ಯಪ್ರದೇಶ” ಎಂದು ಹುಡುಕಿದ್ದೇವೆ ಮತ್ತು ಸ್ಥಳವು ಜಬಲ್ಪುರ ಸನಿಹದ್ದು ಎಂದು ಕಂಡುಕೊಂಡೆವು. ಇದರೊಂದಿಗೆ ಗೂಗಲ್ ಸ್ಟ್ರೀಟ್ ವ್ಯೂನಲ್ಲಿ ವೀಡಿಯೋದಲ್ಲಿ ಕಂಡುಬರುವ ನಿಖರವಾದ ಸ್ಥಳವನ್ನು ಗುರುತಿಸಲು ನಮಗೆ ಸಾಧ್ಯವಾಯಿತು.

Fact Check: ಪ್ರಿಯಾಂಕಾ ವಾದ್ರಾ ಕಾಲ ಕೆಳಗೆ ಭಾರತದ ಧ್ವಜವಿರುವ ಬ್ಯಾನರ್ ಗಳನ್ನು ಬೆಂಗಳೂರಲ್ಲಿ ಅಳವಡಿಸಲಾಗಿದೆ ಎನ್ನುವುದು ನಿಜವೇ?

ಕಾಂಗ್ರೆಸ್ ನಾಯಕಿ ಪ್ರಿಯಾಂಕಾ ಗಾಂಧಿ 2023 ರ ಜೂನ್ 12 ರಂದು ಮಧ್ಯಪ್ರದೇಶ ವಿಧಾನಸಭಾ ಚುನಾವಣೆಯ ಪ್ರಚಾರದ ಸಮಯದಲ್ಲಿ
ಜಬಲ್ಪುರದಲ್ಲಿ ರಾಲಿಯನ್ನುದ್ದೇಶಿಸಿ ಮಾತನಾಡಿದ್ದರು. ಅದಕ್ಕೂ ಮುಂಚಿತವಾಗಿ ಈ ಬ್ಯಾನರ್ ಗಳನ್ನು ಹಾಕಲಾಗಿತ್ತು.

Fact Check: ಪ್ರಿಯಾಂಕಾ ವಾದ್ರಾ ಕಾಲ ಕೆಳಗೆ ಭಾರತದ ಧ್ವಜವಿರುವ ಬ್ಯಾನರ್ ಗಳನ್ನು ಬೆಂಗಳೂರಲ್ಲಿ ಅಳವಡಿಸಲಾಗಿದೆ ಎನ್ನುವುದು ನಿಜವೇ?

ಒಟ್ಟಾರೆಯಗಿ ಹೇಳುವುದಾದರೆ, 22 ಆಗಸ್ಟ್‌ 2023 ರಂದು  ಮಧ್ಯ ಪ್ರದೇಶದ ಜಬಲ್ಪುರದಲ್ಲಿ ನಡೆದ ಕಾರ್ಯಕ್ರಮದ ಬ್ಯಾನರ್‌ನಲ್ಲಿ  ಪ್ರಿಯಾಂಕಾ ಗಾಂಧಿಯವರ ಕಾಲ ಕೆಳಗೆ ತಲೆ ಕೆಳಗಾಗಿ ಹಾಕಲಾಗಿದ್ದ ತ್ರಿವರ್ಣ ಧ್ವಜದ ಹಳೆಯ ವಿಡಿಯೋವನ್ನು ಬೆಂಗಳೂರಿನದ್ದು ಎಂದು ತಪ್ಪಾಗಿ ಹಂಚಿಕೊಳ್ಳಲಾಗಿದೆ. ಹಾಗಾಗಿ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ತಪ್ಪಾಗಿದೆ.

ಇತ್ತೀಚೆಗೆ ಪ್ರಧಾನಿ ಮೋದಿ ಚುನವಣಾ ಭಾಷಣ ಮಾಡುತ್ತಾ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ ಮಂಗಳಸೂತ್ರವೇ ಕಿತ್ತುಕೊಳ್ಳುತ್ತದೆ ಎಂದು ಹೇಳಿಕೆ ನೀಡಿದ್ದ ಬೆನ್ನಲ್ಲೆ, ನನ್ನ ತಾಯಿಯ ಮಂಗಳ ಸೂತ್ರ ದೇಶಕ್ಕಾಗಿ ಬಲಿದಾನವಾಗಿದೆ. ಮಹಿಳೆಯರ ಮನಸ್ಸಲ್ಲಿ ಇರುವ ಸೇವೆಯ ಭಾವನೆ ಬಿಜೆಪಿಗೆ ಅರ್ಥವಾಗುವುದಿಲ್ಲ ಎಂದು ಕಾಂಗ್ರೆಸ್​ ನಾಯಕಿ ಪ್ರಿಯಾಂಕಾ ಗಾಂಧಿ ಮೋದಿ ಮಾತಿಗೆ ತಿರುಗೇಟು ನೀಡಿದ್ದರು. ಹಾಗಾಗಿ ಪ್ರಿಯಾಂಕಾ ಗಾಂಧಿಯ ವ್ಯಕ್ತಿತ್ವವನ್ನು ಕಡಿಮೆ ಮಾಡಲು ಇಂತಹ ಕೀಳು ರಾಜಕಾರಣಕ್ಕೆ ಬಿಜೆಪಿ ಇಳಿದಿದೆ ಎಂದು ಕೆಲವರು ಪ್ರತಿಕ್ರಿಯಿಸಿದ್ದಾರೆ.

 

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಮುಸ್ಲಿಂ ದ್ವೇಷದ ಜೊತೆಗೆ ಸುಳ್ಳನ್ನು ಹೇಳಿದ ಮೋದಿ! ಏನದು ಸುಳ್ಳು?


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights