FACT CHECK | ಬಿಯರ್ ಬಾಟಲಿ ಮೇಲೆ ಡಿ.ಕೆ. ಸುರೇಶ್ ಚಿತ್ರ! ವೈರಲ್ ಫೋಟೊದ ಅಸಲೀಯ್ತೇನು?

ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಸಂಸದ ಡಿ.ಕೆ.ಸುರೇಶ್‌ ರವರ ಜನರಿಗೆ ಮದ್ಯ ಹಂಚುತ್ತಿದ್ದಾರೆ ಎಂದು ಪ್ರತಿಪಾದಿಸಿ  ಬಿಯರ್ ಬಾಟಲಿಗಳಲ್ಲಿಸಂಸದ ಡಿ.ಕೆ.ಸುರೇಶ್‌ ರವರ  ಚಿತ್ರವಿರುವ ಫೋಟೋವನ್ನು ಸಾಮಾಜಿಕ ಮಾಧ್ಯಮದಲ್ಲಿ ಹಂಚಿಕೊಳ್ಳಲಾಗುತ್ತಿದೆ.

ಲೋಕಸಭೆ ಚುನಾವಣೆ ಹಿನ್ನೆಲೆಯಲ್ಲಿ ಮತದಾರರಿಗೆ ಆಮಿಷ ಒಡ್ಡಲಾಗುತ್ತಿದೆ ಎಂಬ ಆರೋಪಗಳು ಕೇಳುಬರುವ ಹೊತ್ತಲ್ಲೇ, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಸಂಸದ ಡಿ.ಕೆ.ಸುರೇಶ್‌ ಜನರಿಗೆ ಆಮಿಶ ಒಡ್ಡಲು ತಮ್ಮದೇ ಚಿತ್ರವನ್ನು ಬಿಯರ್ ಬಾಟಲಿಗಳ ಮೇಲೆ ಅಂಟಿಸಿ ಹೆಂಡ ಹಂಚುತ್ತಿದ್ದಾರೆ ಎಂದು ಪೋಸ್ಟ್‌ಅನ್ನು ಹಂಚಿಕೊಳ್ಳಲಾಗುತ್ತಿದೆ. ಹಾಗಿದ್ದರೆ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್‌ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು ಗೂಗಲ್ ರಿವರ್ಸ್ ಇಮೇಜಸ್‌ನಲ್ಲಿ ಸರ್ಚ್ ಮಾಡಿದಾಗ, 11 ನವೆಂಬರ್ , 2023ರಂದು mnt news ಇನ್‌ಸ್ಟಾಗ್ರಾಂನಲ್ಲಿ ಹಂಚಿಕೊಂಡ ಪೋಸ್‌ನಲ್ಲಿ ಇಂತಹದ್ದೇ ಫೋಟೊವೊಂದು ಲಭ್ಯವಾಗಿದೆ.

Fact Check: ಬಿಯರ್ ಬಾಟಲಿ ಮೇಲೆ ಡಿ.ಕೆ. ಸುರೇಶ್ ಫೋಟೋ ಹಾಕಿ ಹಂಚಲಾಗುತ್ತಿದೆಯೇ?

ಲಭ್ಯವಾದ ಫೋಟೊದಲ್ಲಿ ಎರಡು ಬಿಯರ್ ಬಾಟಲಿಗಳ ಚಿತ್ರ ಇರುವುದನ್ನು ಕಾಣಬಹುದು. ಈ ಪೋಸ್ಟ್ ನ ಕ್ಯಾಪ್ಷನ್‌ ನಲ್ಲಿ “ನಕಿರೇಕಲ್ ಕಾಂಗ್ರೆಸ್ ಅಭ್ಯರ್ಥಿ ವೇಮುಲ ವೀರೇಶಂ ಬಿಯರ್ ಬಾಟಲ್ ಗಳ ಮೇಲೆ ಸ್ಟಿಕ್ಕರ್ ಹಾಕುವ ಮೂಲಕ ವಿಚಿತ್ರ ಪ್ರಚಾರ ನಡೆಸಿದರು” ಎಂದಿದೆ.

12 ನವೆಂಬರ್ 2023ರಂದು ನ್ಯೂಸ್‌ ಲೈನ್ ತೆಲುಗು , ಪ್ರಕಟಿಸಿದ ವರದಿಯೊಂದು ಲಭ್ಯವಾಗಿದೆ. ನಕಿರೇಕಲ್ ಕ್ಷೇತ್ರದಲ್ಲಿ ಹಲವು ರೀತಿಯ ಪ್ರಚಾರ ನಡೆಯುತ್ತಿದೆ. ಎಲ್ಲಾ ಪ್ರಮುಖ ಪಕ್ಷಗಳು ಚುನಾವಣಾ ಪ್ರಚಾರದಲ್ಲಿ ತೊಡಗಿವೆ. ಆದರೆ, ಕಾಂಗ್ರೆಸ್ ಅಭ್ಯರ್ಥಿ ವೇಮುಲ ವೀರೇಶ ನಾನಾ ರೀತಿಯ ಪ್ರಚಾರ ಆರಂಭಿಸಿದಂತಿದೆ. ಅದೇ ಬಿಯರ್ ಮೇಲೆ ಸ್ಟಿಕ್ಕರ್ ಗಳನ್ನು ಹಾಕಿ ಪ್ರಚಾರ ಮಾಡಲಾಗುತ್ತಿದೆ ಎಂದಿದೆ. (ಅನುವಾದಿಸಲಾಗಿದೆ)

Fact Check: ಬಿಯರ್ ಬಾಟಲಿ ಮೇಲೆ ಡಿ.ಕೆ. ಸುರೇಶ್ ಫೋಟೋ ಹಾಕಿ ಹಂಚಲಾಗುತ್ತಿದೆಯೇ?

ನವೆಂಬರ್ 12, 2023ರ ತೆಲುಗು ಪೋಸ್ಟ್ ಪ್ರಕಾರ, ತೆಲಂಗಾಣ ಚುನಾವಣೆ: ಬಿಯರ್ ಬಾಟಲ್ ಮೇಲೆ ಅಭ್ಯರ್ಥಿಗಳ ಚಿತ್ರ ಅಂಟಿಸಿ ಪ್ರಚಾರ? ಇದರಲ್ಲಿ ಸತ್ಯ ಏನು? ಎಂದಿದೆ. ಈ ಸುದ್ದಿಯಡಿಯಲ್ಲಿ, ನಕಿರೇಕಲ್ ಕ್ಷೇತ್ರದಲ್ಲಿ ಕಾಂಗ್ರೆಸ್ ಅಭ್ಯರ್ಥಿ ವೇಮುಲ ವೀರೇಶ ಅವರ ಚಿತ್ರವನ್ನು ಬಿಯರ್ ಬಾಟಲಿಗಳ ಮೇಲೆ ಅಂಟಿಸಿ ಹಂಚಿಲಾಗಿದೆ ಎಂದು ಕಾಂಗ್ರೆಸ್ ಅಭ್ಯರ್ಥಿ ವೇಮುಲ ವೀರೇಶ ಆರೋಪಿಸಿದ್ದಾರೆ.

ವೇಮುಲ ವೀರೇಶಂ ಬಿಯರ್ ಬಾಟಲಿಗಳ ಮೇಲೆ ಸ್ಟಿಕ್ಕರ್‌ಗಳನ್ನು ಅಂಟಿಸಿ ಸಾಮಾಜಿಕ ಜಾಲತಾಣಗಳಲ್ಲಿ ಪೋಸ್ಟ್ ಮಾಡಿದ್ದಾರೆ. ಇದನ್ನು ಉದ್ದೇಶಪೂರ್ವಕವಾಗಿ ಮಾಡಲಾಗಿದೆ ಎಂದು ಪಕ್ಷದ ಮುಖಂಡರು ಹೇಳುತ್ತಾರೆ. ಯಾವುದೇ ರಾಜಕೀಯ ಪಕ್ಷದ ಅಭ್ಯರ್ಥಿಗಳು ಸ್ಟಿಕ್ಕರ್‌ಗಳನ್ನು ಹಾಕಿ ಸಾರ್ವಜನಿಕರಿಗೆ ಬಿಯರ್ ಬಾಟಲಿಗಳನ್ನು ವಿತರಿಸುವುದಿಲ್ಲ. ನಕಿರೇಕಲ್ ಕಾಂಗ್ರೆಸ್ ಮುಖಂಡರ ಪ್ರಕಾರ, ಚುನಾವಣೆ ಸಂದರ್ಭದಲ್ಲಿ ಕೆಲವು ಕಿಡಿಗೇಡಿಗಳು ವೇಮುಲ ವೀರೇಶಂರವರ ಹೆಸರಿಗೆ ಕಳಂಕ ತರಲು ಅವರ ಚಿತ್ರವಿರುವ ಸ್ಟಿಕ್ಕರ್ ಗಳನ್ನು ಬಿಯರ್ ಬಾಟಲಿಗಳಿಗೆ ಅಂಟಿಸಿ ಪೊಲೀಸರಿಗೆ ದೂರು ನೀಡುತ್ತಿದ್ದಾರೆ ಎಂದು ವರದಿಯಲ್ಲಿ ಉಲ್ಲೇಖಿಸಲಾಗಿದೆ. (ತೆಲುಗಿನಿಂದ ಕನ್ನಡಕ್ಕೆ ಭಾಷಾಂತರಿಸಲಾಗಿದೆ.)

Fact Check: ಬಿಯರ್ ಬಾಟಲಿ ಮೇಲೆ ಡಿ.ಕೆ. ಸುರೇಶ್ ಫೋಟೋ ಹಾಕಿ ಹಂಚಲಾಗುತ್ತಿದೆಯೇ?

ಈ ವರದಿಗಳಲ್ಲಿ ಪ್ರಕಟಿಸಿರುವ ಚಿತ್ರ ಮತ್ತು ವೈರಲ್‌ ಆಗಿರುವ ಚಿತ್ರಕ್ಕೆ ಸಾಮ್ಯತೆ ಕಂಡುಬಂದಿದೆ. ಇದರಲ್ಲಿ ಡಿ.ಕೆ.ಸುರೇಶ್‌ ಅವರ ಚಿತ್ರವನ್ನು ಬಿಯರ್ ಬಾಟಲಿ ಮೇಲೆ ಹಾಕಿರುವುದನ್ನು ಗಮನಿಸಿದ್ದೇವೆ.

 

 

 

 

 

 

 

 

ಒಟ್ಟಾರೆಯಾಗಿ ಹೇಳುವುದಾದರೆ, ಬೆಂಗಳೂರು ಗ್ರಾಮಾಂತರ ಲೋಕಸಭಾ ಕ್ಷೇತ್ರದಲ್ಲಿ ಸಂಸದ ಡಿ.ಕೆ.ಸುರೇಶ್‌ ರವರು ಜನರಿಗೆ ಮದ್ಯ ಹಂಚುತ್ತಿದ್ದಾರೆ ಎಂದು ಸುಳ್ಳು ಪ್ರತಿಪಾದನೆಯೊಂದಿಗೆ ಹಂಚಿಕೊಳ್ಳಲಾಗುತ್ತಿದೆ. ವಾಸ್ತವಾವಗಿ ಈ ಫೋಟೊ ಎಡಿಟ್ ಮಾಡಿ ಹಂಚಿಕೊಳ್ಳಲಾಗುತ್ತಿದೆ. ಇದರ ಮೂಲ ಫೋಟೊ ನವೆಂಬರ್‌ನಲ್ಲಿ ತೆಲಂಗಾಣದಲ್ಲಿ ನಡೆದ ವಿಧಾನಸಭಾ ಚುನಾವಣೆ ಸಂದರ್ಭದ್ದಾಗಿದೆ. ಹಾಗಾಗಿ ಈ ಚಿತ್ರಕ್ಕೂ ಸಂಸದ ಡಿ.ಕೆ. ಸುರೇಶ್‌ರವರಿಗೂ ಯಾವುದೇ ಸಂಬಂಧವಿಲ್ಲ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಪ್ರಿಯಾಂಕಾ ಗಾಂಧಿಯವರ ಹಳೆಯ ವಿಡಿಯೋವನ್ನು ಬೆಂಗಳೂರಿನದ್ದು ಎಂದು ತಪ್ಪಾಗಿ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights