ಲಾಕ್ ಡೌನ್ ಮಾಡಿದ್ರೂ ಒಂದೇ ದಿನಕ್ಕೆ 88 ಸೋಂಕಿತರು ಪತ್ತೆ : ಹೆಚ್ಚಾದ ಆತಂಕ!

ಕೊರೊನಾ ತಡೆಗೆ ದೇಶವ್ಯಾಪಿ 144 ಸೆಕ್ಸನ್ ಜಾರಿ ಮಾಡಿ ಲಾಖ್ ಡೌನ್ ಮಾಡಲಾಗಿದೆ. ಆದರೂ ಕೂಡ ಭಾರತದಲ್ಲಿ ಸೋಂಕಿತರ ಸಂಖ್ಯೆ ಮಾತ್ರ ಕಡಿಮೆಯಾಗುತ್ತಿಲ್ಲ. ದಿನೇ ದಿನೇ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿದ್ದು ಜನರಲ್ಲಿ ಆತಂಕ ಎದುರಾಗಿದೆ  ನೆನ್ನೆ ಒಂದೇ ದಿನದಲ್ಲಿ ದೇಶದಲ್ಲಿ 88 ಜನರಿಗೆ ಸೋಂಕು ತಗುಲಿರುವುದು ಪತ್ತೆಯಾಗಿದೆ. ಇದರಿಂದ ಭಾರತದಲ್ಲಿ ವೈರಸ್ ಸೋಂಕಿತರ ಸಂಖ್ಯೆ 700 ರ ಗಡಿ ದಾಟಿದೆ.

ಇಂದು ರಾಜಸ್ಥಾನದಲ್ಲಿ ಮತ್ತೊಂದು ಸಾವು ಸಂಭವಿಸಿದ್ದು, ಭಿಲ್ವಾರ ಜಿಲ್ಲೆಯ ಮಹತ್ಮಾ ಗಾಂಧಿ ಆಸ್ಪತ್ರೆಯಲ್ಲಿದ್ದ ಕೊರೊನಾ ಸೋಂಕಿನಿಂದಾಗಿ ಓರ್ವ ಸಾವನ್ನಪ್ಪಿದ್ದು, ಇವರಿಗೆ ರಕ್ತದೊತ್ತಡ ಹಾಗೂ ಕಿಡ್ನಿಯ ಸಮಸ್ಯೆ ಇತ್ತು ಎನ್ನಲಾಗುತ್ತಿದೆ.

ಭಾರತದಲ್ಲಿ ದಿನದಿಂದ ದಿನಕ್ಕೆ ಕೊರೋನಾ ವೈರಸ್​​ ಸೋಂಕು ಪ್ರಕರಣಗಳ ಸಂಖ್ಯೆ ಏರಿಯಾಗುತ್ತಲೇ ಇದೆ. ಇಲ್ಲಿಯವರೆಗೆ ಇಡೀ ದೇಶದಲ್ಲೇ ಒಟ್ಟು 694 ಪ್ರಕರಣಗಳು ವರದಿಯಾಗಿದ್ದು ಸಾವಿನ ಸಂಖ್ಯೆ 13ಕ್ಕೇರಿದೆ ಎಂದು ಕೇಂದ್ರ ಆರೋಗ್ಯ ಇಲಾಖೆ ಹೇಳಿದೆ. ಕಳೆದ ಕೇವಲ 24 ಗಂಟೆಯಲ್ಲಿ 43 ಮಂದಿಗೆ ಸೋಂಕು ತಗುಲಿದೆ. ಈ ಪೈಕಿ ಹರಿಯಾಣದಲ್ಲಿ- 18, ಫರೀದಾಬಾದ್‌ನಲ್ಲಿ -2, ಗುರುಗ್ರಾಮ -10 , ಪಲ್ವಾಲ್-1, ಪಾಣಿಪತ್-3, ಪಂಚಕುಲಾ-1 , ಸೋನೆಪಥ್- 1, ತೆಲಂಗಾಣ ಮೂರು ಹೀಗೆ ವಿವಿಧ ರಾಜ್ಯಗಳಲ್ಲಿ ಮತ್ತಲವು ಪ್ರಕರಣಗಳು ವರದಿಯಾಗಿದೆ.  47 ವಿದೇಶಿಯರು ಸೇರಿದ್ದಾರೆ. ಇನ್ನು ಸೋಂಕಿತರ ಪೈಕಿ 42 ಮಂದಿ ಗುಣಮುಖರಾಗಿದ್ದಾರೆ. ಇನ್ನು ಕೇರಳದಲ್ಲಿ ನಿನ್ನೆ 19 ಹೊಸ ಸೋಂಕು ಪ್ರಕರಣಗಳು ದಾಖಲಾಗಿದ್ದು, ಆ ಮೂಲಕ ಕೇರಳದಲ್ಲಿ ಕೊರೋನಾ ವೈರಸ್ ಗೆ ಚಿಕಿತ್ಸೆ ಪಡೆಯುತ್ತಿರುವವರ ಸಂಖ್ಯೆ 126ಕ್ಕೆ ಏರಿಕೆಯಾಗಿದೆ. ಮಹಾರಾಷ್ಟ್ರದಲ್ಲಿ ಮೂರು ಹೊಸ ಪ್ರಕರಣಗಳು ದಾಖಲಾಗಿದ್ದು, 125 ಮಂದಿ ವೈರಸ್ ಗೆ ಚಿಕಿತ್ಸೆ ಪಡೆಯುತ್ತಿದ್ದಾರೆ.

ವಿಶ್ವದಾದ್ಯಂತ ಕೊರೋನಾ ವೈರಸ್ ಅಟ್ಟಹಾಸಕ್ಕೆ ಇಲ್ಲಿಯವರೆಗೂ 23 ಸಾವಿರ ಮಂದಿ ಬಲಿಯಾಗಿದ್ದಾರೆ. ಜತ್ತಿನ ಒಟ್ಟು 182 ದೇಶಗಳಲ್ಲಿ 5 ಲಕ್ಷಕ್ಕೂ ಹೆಚ್ಚು ಮಂದಿಗೆ ಸೋಂಕು ಪತ್ತೆಯಾಗಿದೆ ಎಂದು ವರದಿಗಳು ತಿಳಿಸಿವೆ.

ಇನ್ನು, ರಾಜ್ಯದಲ್ಲಿ ಇಲ್ಲಿವರೆಗೂ 55 ಪ್ರಕರಣಗಳು ಪತ್ತೆಯಾಗಿವೆ. ಗುರುವಾರ ಮಾತ್ರ ನಾಲ್ಕು ಹೊಸ ಪ್ರಕರಣಗಳು ಪತ್ತೆಯಾದರ ಬಗ್ಗೆ ವರದಿಯಾಗಿವೆ. ಜತೆಗೆ ಈವರೆಗೂ ಇಬ್ಬರು ಸೋಂಕಿನಿಂದ ಮೃತಪಟ್ಟಿದ್ದಾರೆ.

https://twitter.com/ANI/status/1243290597193994240

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights