FACT CHECK | ಗಂಗಾ ನದಿಯಲ್ಲಿ ಚಿನ್ನ ಮತ್ತು ಬೆಳ್ಳಿ ಆಭರಣಗಳು ಸಿಕ್ಕಿವೆ ಎಂದು ಸ್ಕ್ರಿಪ್ಟೆಡ್ ವಿಡಿಯೋ ಹಂಚಿಕೆ
ಸಾಮಾನ್ಯವಾಗಿ, ಗಂಗಾ ನದಿಯಲ್ಲಿ ಪವಿತ್ರ ಸ್ನಾನ ಮಾಡಿದವರು ಅಲ್ಲಿನ ನೀರಿಗೆ ನಾಣ್ಯಗಳನ್ನು ಎಸೆಯುತ್ತಾರೆ. ನದಿಯಲ್ಲಿನ ನೀರು ಬತ್ತಿದ ನಂತರ, ಅವು ಮರಳಿನಲ್ಲಿ ಕಂಡುಬರುತ್ತವೆ. ಆದರೆ, ಗಂಗಾ ನದಿಯ ಮರಳಿನಲ್ಲಿ ನಾಣ್ಯ ಹುಡುಕುತ್ತಿದ್ದ ವ್ಯಕ್ತಿಯೊಬ್ಬನಿಗೆ ಚಿನ್ನ ಮತ್ತು ಬೆಳ್ಳಿಯ ಆಭರಣಗಳು (ಚೈನು), ಬಳೆಗಳು ಮತ್ತು ಉಂಗುರಗಳು ಸೇರಿದಂತೆ ಹಲವು ವಸ್ತುಗಳು ಸಿಕ್ಕಿವೆ ಎಂದು ಹೇಳುತ್ತಿರುವ ವಿಡಿಯೋ ಈಗ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗುತ್ತಿದೆ. ಗಂಗಾ ನದಿಯಲ್ಲಿ ಬೆಳ್ಳಿ ಮತ್ತು ಚಿನ್ನದ ಆಭರಣಗಳಿವೆ ಮತ್ತು ಲೋಹ ಶೋಧಕದ ಸಹಾಯದಿಂದ ಅವುಗಳನ್ನು ಗುರುತಿಸುತ್ತಿದ್ದೇನೆ ಎಂದು ವ್ಯಕ್ತಿಯೊಬ್ಬ ಹೇಳುತ್ತಿರುವುದನ್ನು ವೀಡಿಯೊ ನೋಡಬಹುದು.
ಗಂಗಾ ನದಿಯಲ್ಲಿ ಬೆಳ್ಳಿ, ಚಿನ್ನ ಮತ್ತು ಇತರ ನಾಣ್ಯಗಳು ಸೇರಿದಂತೆ ಹಲವು ವಸ್ತುಗಳು ಇದ್ದು, ಅವುಗಳನ್ನು ಲೋಹ ಶೋಧಕ ಯಂತ್ರದ ಮೂಲಕ ಹುಡುಕಲಾಗುತ್ತಿದೆ ಎಂದು ತೋರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ಹರಿದಾಡುತ್ತಿದೆ. ಈ ವೀಡಿಯೊವನ್ನು ಅರ್ವಿ ಸಿಟಿ ಟೈಮ್ಸ್ ಎಂಬ ಫೇಸ್ಬುಕ್ ಪುಟದಲ್ಲಿ ಹಂಚಿಕೊಳ್ಳಲಾಗಿದೆ. “ಗಂಗಾ ನದಿಯ ದಡದಲ್ಲಿ ನೀರು ಬತ್ತಿಹೋದಾಗ ಚಿನ್ನ, ಬೆಳ್ಳಿ ಮತ್ತು ನಾಣ್ಯಗಳನ್ನು ಹೇಗೆ ಹೊರತೆಗೆಯಲಾಗುತ್ತದೆ ಎಂಬುದನ್ನು ನೋಡಲು ವೀಡಿಯೊವನ್ನು ನೋಡಿ” ಎಂದು ಅವರು ಶೀರ್ಷಿಕೆ ನೀಡಿದ್ದಾರೆ.
ಇದೇ ರೀತಿಯ ಹೇಳಿಗಳೊಂದಿಗೆ ಇತರೆ ಸಾಮಾಜಿಕ ಮಾಧ್ಯಮಗಳ ಬಳಕೆದಾರರು ವಿಡಿಯೋವನ್ನು ಹಂಚಿಕೊಂಡಿದ್ದು, ಅವುಗಳು ನಿಜವೇ ಎಂದು ಪರಿಶೀಲಿಸೋಣ.
ಫ್ಯಾಕ್ಟ್ಚೆಕ್ :
ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾದ ಪೋಸ್ಟ್ನಲ್ಲಿ ಮಾಡಿದ ಪ್ರತಿಪಾದನೆಯನ್ನು ಪರಿಶೀಲಿಸಲು, ವೈರಲ್ ವಿಡಿಯೋದ ಕೀ ಫ್ರೇಮ್ಗಳ ಸ್ಕ್ರೀನ್ಶಾಟ್ ತೆಗೆದುಕೊಂಡು ಗೂಗಲ್ ಲೆನ್ಸ್ ಮೂಲಕ ಸರ್ಚ್ ಮಾಡಿದಾಗ, ಕಳೆದ ವರ್ಷ ನವೆಂಬರ್ 14 ರಂದು ಫೇಸ್ಬುಕ್ನಲ್ಲಿ ಅಪ್ಲೋಡ್ ಮಾಡಲಾದ ವಿಡಿಯೋವೊಂದು ಲಭ್ಯವಾಗಿದೆ. ವೈರಲ್ ವೀಡಿಯೊದಲ್ಲಿ ತೋರಿಸಿರುವಂತೆ ಗಂಗಾ ನದಿಯಲ್ಲಿ ನಿಜವಾಗಿಯೂ ಚಿನ್ನ ಮತ್ತು ಬೆಳ್ಳಿ ಆಭರಣಗಳು ಪತ್ತೆಯಾಗುತ್ತಿವೆಯೇ ಎಂದು ನೋಡಲು ಪರಿಶೀಲಿಸಿದಾಗ, ಆ ವಿಡಿಯೋವನ್ನು ಕೇವಲ ತಮಾಷೆಗಾಗಿ ಮಾಡಲಾಗಿದೆ ಎಂದು ತಿಳಿದುಬಂದಿದೆ.
ಈ ವಿಡಿಯೋವನ್ನು ಸೋಶಿಯಲ್ ಜಂಕ್ಷನ್ ಎಂಬ ಫೇಸ್ಬುಕ್ ಪೇಜ್ನಲ್ಲಿ ಪೋಸ್ಟ್ ಮಾಡಿದದ ವಿಡಿಯೋ ಲಭ್ಯವಾಗಿದೆ. ಸೋಶಿಯಲ್ ಜಂಕ್ಷನ್ ಫೇಸ್ಬುಕ್ ಪೇಜ್ಅನ್ನು ಪರಿಶೀಲಿಸಿದಾಗ, ಅಲ್ಲಿ ಅಪ್ಲೋಡ್ ಮಾಡಲಾದ ಎಲ್ಲಾ ವೀಡಿಯೊಗಳು ನಿಜವಾದವುಗಳಲ್ಲ ಎಂದು ತಿಳಿದುಬಂದಿದೆ. ವಿಡಿಯೋಗಳನ್ನು ಸ್ಕ್ರಿಪ್ಟ್ ಮಾಡಲಾಗಿದೆ ಎಂದು ಅದು ಸ್ಪಷ್ಟವಾಗಿ ಹೇಳುತ್ತದೆ. ಆ ಖಾತೆಯನ್ನು ನೋಡಿದಾಗ, ಆ ಪುಟದಲ್ಲಿ ಸ್ಕ್ರಿಪ್ಟ್ ಮಾಡಿದ ವೀಡಿಯೊಗಳನ್ನು ಮಾತ್ರ ಪೋಸ್ಟ್ ಮಾಡಲಾಗಿದೆ ಎಂಬುದು ಸ್ಪಷ್ಟವಾಗುತ್ತದೆ.

ಒಟ್ಟಾರೆಯಾಗಿ ಹೇಳವುದಾದರೆ, ಗಂಗಾ ನದಿಯಿಂದ ಚಿನ್ನ ಮತ್ತು ಬೆಳ್ಳಿಯ ವಸ್ತುಗಳನ್ನು ಹೊರತೆಗೆದಿರುವುದನ್ನು ತೋರಿಸುವ ಸಾಮಾಜಿಕ ಮಾಧ್ಯಮಗಳಲ್ಲಿ ವೈರಲ್ ಆಗಿರುವ ವೀಡಿಯೊ ನಿಜವಲ್ಲ ಮತ್ತು ಅದು ಕೇವಲ ಸ್ಕ್ರಿಪ್ಟ್ಗಾಗಿ ಮಾಡಲ್ಪಟ್ಟಿದೆ ಎಂಬುದು ಸ್ಪಷ್ಟವಾಗಿದೆ. ಒಂದು ವೇಳೆ ಗಂಗಾ ನದಿಯಲ್ಲಿ ಚಿನ್ನದ ಸರ ಅಥವಾ ಬೆಳ್ಳಿ ಪದಾರ್ಥಗಳು ಸಿಕ್ಕಿರಲುಬಹುದು. ಆದರೆ ಈ ವಿಡಿಯೋ ಪಕ್ಕಾ ಸ್ಕ್ರಿಪ್ಟ್ ಮಾಡಲಾಗಿದೆ. ಹಾಗಾಗಿ ಇಂತಹ ವಿಡಿಯೋಗಳನ್ನು ಇತರರಿಗೆ ಹಂಚಿಕೊಳ್ಳುವ ಮುನ್ನ ಪರಿಶೀಲಿಸಿ.
ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಮಾಧ್ಯಮಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್ ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ
ಇದನ್ನು ಓದಿರಿ : FACT CHECK | ಆಸ್ಟ್ರೇಲಿಯಾ ಸರ್ಕಾರ ಭಾರತದ ವಿದ್ಯಾರ್ಥಿಗಳ ಪ್ರವೇಶ ನಿಷೇಧಿಸಿದೆಯೇ?

