6 ಜಿಲ್ಲೆಗಳು ನಕ್ಸಲ್‌ ಮುಕ್ತವಾಗಿವೆ: ಬಿಹಾರ ಗೃಹ ಸಚಿವಾಲಯ

ಬಿಹಾರದ ಗೃಹ ಸಚಿವಾಲಯವು ಮಾವೋವಾದಿಗಳಿದ್ದಾರೆ ಎಂದು ಹೇಳಲಾಗಿದ್ದ ಬಿಹಾರದ 16 ಜಿಲ್ಲೆಗಳಲ್ಲಿ ಆರು ಜಿಲ್ಲೆಗಳನ್ನು ನಕ್ಸಲ್ ಮುಕ್ತವಾಗಿವೆ ಎಂದು ಘೋಷಿಸಿದೆ. ಈಗ ರಾಜ್ಯದಲ್ಲಿ ಕಾನೂನುಬಾಹಿರ ಸಿಪಿಐ (ಮಾವೋವಾದಿ) ಚಟುವಟಿಕೆಗಳು ಕೇವಲ 10 ಜಿಲ್ಲೆಗಳಿಗೆ ಇನ್ನೂ ಇದೆ ಎಂದು ಹೇಳಿದೆ.

ಈ ಹೊಸ ವರ್ಗೀಕರಣದ ಪ್ರಕಾರ, ಮುಜಫರ್ ಪುರ್, ವೈಶಾಲಿ, ಜೆಹಾನಾಬಾದ್, ನಳಂದ, ಅರ್ವಾಲ್ ಮತ್ತು ಪೂರ್ವ ಚಂಪಾರಣ್ ಜಿಲ್ಲೆಗಳು ಮಾವೋವಾದಿಗಳಿಂದ ಮುಕ್ತವಾಗಿವೆ, ಆ ಜಿಲ್ಲೆಗಳನ್ನು ನಕ್ಸಲ್‌ ಚಟುವಟಿಕೆಯ ಜಿಲ್ಲೆಗಳ ಪಟ್ಟಿಯಿಂದ ತೆರವುಗೊಳಿಸಲಾಗಿದೆ. ಈ ಜಿಲ್ಲೆಗಳಲ್ಲಿ ಯಾವುದೇ ನಕ್ಸಲ್ ನೆಲೆಗಳು ಇಲ್ಲ. ಹೀಗಾಗಿ, ಈ ಜಿಲ್ಲೆಗಳಿಗೆ ಇನ್ನು ಮುಂದೆ ನಕ್ಸಲ್ ಚಟುವಟಿಕೆಗಳ ತಡೆಗಟ್ಟುವಿಕೆಗೆ ಹೆಚ್ಚು ಖರ್ಚು ಮಾಡುವುದಿಲ್ಲ ಎಂದು ಗೃಹ ಸಚಿವಾಲಯ ಹೇಳಿದೆ.

ಈ ಜಿಲ್ಲೆಗಳನ್ನು ಹೊರತುಪಡಿಸಿ, ಬಿಹಾರದ ಇತರ 10 ಜಿಲ್ಲೆಗಳಾದ ರೋಹ್ತಾಸ್, ಕೈಮೂರ್, ಗಯಾ, ನವಾಡಾ, ಜಮುಯಿ, ಲಖಿಸರೈ, ಔರಂಗಾಬಾದ್, ಬಂಕಾ, ಮುಂಗರ್ ಮತ್ತು ಪಶ್ಚಿಮ ಚಂಪಾರನ್ ಮಾತ್ರ ಪ್ರಸ್ತುತ ನಕ್ಸಲ್ ಚಟುವಟಿಕೆಗಳಿರುವ ಜಿಲ್ಲೆಗಳಾಗಿವೆ ಎಂದು ಅದು ಹೇಳಿದೆ.

ದೇಶದಲ್ಲಿನ ನಕ್ಸಲ್ ಪ್ರಭಾವಗಳಿಗೆ ಸಂಬಂಧಿಸಿದಂತೆ ಔರಂಗಾಬಾದ್ ಜಿಲ್ಲೆಯನ್ನು ‘ಕಾಳಜಿಯ ಜಿಲ್ಲೆ’ ಎಂದು ಫ್ಲ್ಯಾಗ್ ಮಾಡಲಾಗಿದೆ.

ಈ ಹಿಂದೆ ಗೃಹ ಸಚಿವಾಲಯವು ಪಾಟ್ನಾ, ಸೀತಮಾರ್ಹಿ, ಭೋಜ್‌ಪುರ, ಬಾಗಾಹಾ, ಬೆಗುಸರಾಯ್, ಖಗರಿಯಾ ಮತ್ತು ಶಿಯೋಹಾರ್ ಜಿಲ್ಲೆಗಳನ್ನು ನಕ್ಸಲ್ ಮುಕ್ತ ಎಂದು ಘೋಷಿಸಿತ್ತು.

ಇದನ್ನೂ ಓದಿ: ಭದ್ರತಾ ಪಡೆಗಳ ದಾಳಿ: 13 ಮಾವೋವಾದಿಗಳ ಹತ್ಯೆ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights