ಮದುವೆ ಗಿಫ್ಟ್ ಗೂ ಬಂತು ಈರುಳ್ಳಿ : ಸೋಶಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ ವಿಡಿಯೋ..

ಈರುಳ್ಳಿ ಬೆಲೆ ಏರಿಕೆ ಹಿನ್ನೆಲೆಯಲ್ಲಿ ಸೋಶಿಯಲ್ ಮೀಡಿಯಾದಲ್ಲಿ ಈರುಳ್ಳಿಯದ್ಧೇ ವಿಡಿಯೋ ಸಾಕಷ್ಟು ವೈರಲ್ ಆಗ್ತಿವೆ.

ಉತ್ತರ ಕರ್ನಾಟಕದ ಜಿಲ್ಲೆಯೊಂದರಲ್ಲಿನ ಸ್ನೇಹಿತರು ಮದುವೆಯಲ್ಲಿ ಈರುಳ್ಳಿ ಕೊಡುಗೆ ನೀಡಿದ್ದಾರೆ. ಮದುವೆ ಗಿಫ್ಟಾಗಿ ಈರುಳ್ಳಿಯನ್ನು ವಧು-ವರರಿಗೆ ಕೊಟ್ಟ ಘಟನೆ ಉತ್ತರ ಕರ್ನಾಟಕದ ಜಿಲ್ಲೆಯೊಂದರಲ್ಲಿ ನಡೆದಿದೆ.

ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋ ಸಿಕ್ಕಾಪಟ್ಟೆ ವೈರಲ್ ಆಗ್ತಿದೆ. ವಧುವರರಿಗೆ ಸ್ನೇಹಿತರು ಈರುಳ್ಳಿಯುಳ್ಳ ಬಾಕ್ಸ್ ಗಿಫ್ಟ್ ಕೊಟ್ಟಿದ್ದಾರೆ. ಬಾಕ್ಸ್ ತೆರೆದು ನೋಡಿ ನಸುನಕ್ಕಿದ್ದಾರೆ ವಧುವರರು. ಈ ಮದುವೆಯಲ್ಲಿ ಈರುಳ್ಳಿ ಬಾಕ್ಸ್ ಕೊಟ್ಟ ವಿಡಿಯೋ ಫುಲ್ ವೈರಲ್ ಆಗಿದೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights