ಕಾಬೂಲ್ ವಿಮಾನ ನಿಲ್ದಾಣದಲ್ಲಿ ಗುಂಡಿನ ದಾಳಿ : ಸ್ಥಳದಲ್ಲಿ ಉದ್ವಿಗ್ನ ವಾತಾವರಣ!

ಕಾಬೂಲ್ ವಿಮಾನ ನಿಲ್ದಾಣದ ಬಳಿ ತಾಲೀಬಾನ್​​ ಉಗ್ರರು ಗುಂಡು ಹಾರಿಸಿದ್ದು ಸ್ಥಳದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದೆ.

ಇಸ್ಲಾಮಿಕ್​ ರಿಪಬ್ಲಿಕ್​ ಆಫ್​ ಅಫ್ಘಾನಿಸ್ತಾನ ಮರುಸ್ಥಾಪಿಸಲು ತುದಿಗಾಲಲ್ಲಿ ನಿಂತ ತಾಲೀಬಾನ್​​ ಉಗ್ರರು ಅಫ್ಘಾನಿಸ್ತಾನದಲ್ಲಿ ಗೊಂದಲವನ್ನೇ ಸೃಷ್ಟಿ ಮಾಡಿದ್ದಾರೆ. ನಿಂತನಿಲುವಿನಲ್ಲೇ ಆಫ್ಘನ್‌ನಲ್ಲಿ ನೆಲೆಸಿರುವ ವಿದೇಶಿ ಜನ ಸೇರಿದಂತೆ ಎಲ್ಲರ ಮೇಲೂ ಗುಂಡಿನ ದಾಳಿ ಮಾಡುತ್ತಿದ್ದಾರೆ. ಸ್ವದೇಶೀಯರ ಮೇಲೆ ಪೈಶಾಚಿಕತೆ ಮೆರೆಯುತ್ತಿದ್ದ ಉಗ್ರರಿಂದ ಜೀವ ಕಾಪಾಡಿಕೊಳ್ಳಲು ನೂರಾರು ಅಫ್ಘನ್ನರು ತಮ್ಮ ತಾಯ್ನಾಡನ್ನು ತೊರೆದು ಸುರಕ್ಷಿತ ಸ್ಥಳಗಳಿಗೆ ತೆರಳಲು ಗಡಿ ಭಾಗಗಳತ್ತ ನೂರಾರು ಸಂಖ್ಯೆಯಲ್ಲಿ ಆಗಮಿಸುತ್ತಿದ್ದಾರೆ. ಇಷ್ಟು ದಿನ ಆಫ್ಘನ್ ನಲ್ಲಿ ನೆಲೆಸಿದ್ದ ವಿದೇಶಿಯರು ವಿಮಾನಗಳ ಮೂಲಕ ತಮ್ಮ ದೇಶಗಳಿಗೆ ವಿಮಾನಗಳ ಮೂಲಕ ಹೊರಡಲು ಹರಸಾಹಸಪಡುತ್ತಿದ್ದಾರೆ.

ಇದರಿಂದಾಗಿ ಸುಮಾರು 4 ಕೋಟಿ ಜನಸಂಖ್ಯೆಯನ್ನು ಹೊಂದಿರುವ ಅಫ್ಘಾನಿಸ್ತಾನದಲ್ಲಿ ಸದ್ಯದ ಪರಿಸ್ಥಿತಿ ಹೀನಾಯವಾಗಿದೆ.

ಅಫ್ಘಾನಿಸ್ತಾನದ ಕಾಬೂಲ್ ಏರ್‌ಪೋರ್ಟ್‌ ಬಳಿ ತಾಲೀಬಾನಿಗಳು ಫೈರಿಂಗ್ ನಡೆಸಿದ್ದು ಸದ್ಯ ಆಫ್ಘನ್‌ನಿಂದ ಎಲ್ಲ ವಾಣಿಜ್ಯ ವಿಮಾನಗಳ ಹಾರಾಟ ನಿಲ್ಲಿಸಲಾಗಿದೆ. ಆಫ್ಘನ್ ರಾಜಧಾನಿ ಕಾಬೂಲ್ ತಾಲಿಬಾನ್ ವಶವಾಗಿರುವ ಹಿನ್ನೆಲೆಯಲ್ಲಿ ಅಫ್ಘಾನಿಸ್ತಾನದಿಂದ ತೆರಳಲು ಬಯಸುವವರಿಗೆ ಅವಕಾಶ ಮಾಡಿಕೊಡಬೇಕು ಎಂದು ತಾಲಿಬಾನ್‌ ಸಂಘಟನೆಗೆ 60 ದೇಶಗಳಿಂದ ಮನವಿ ಮಾಡಿಕೊಳ್ಳಲಾಗಿದೆ. ಭಾರತ ಸರ್ಕಾರವು ಏರ್​ ಇಂಡಿಯಾ ವಿಮಾನಗಳನ್ನು ಸನ್ನದ್ಧ ಸ್ಥಿತಿಯಲ್ಲಿರಿಸಿದೆ. ಕಾಬೂಲ್​​ನಿಂದ ಹೊಸ ದಿಲ್ಲಿಗೆ ವಿಮಾನಗಳಲ್ಲಿ ಭಾರತೀಯರನ್ನು ಕರೆತರಲು ಎರಡು ವಿಮಾನಗಳು ಸಿದ್ಧವಾಗಿವೆ.

ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಸೋಮವಾರ ಅಫ್ಘಾನಿಸ್ತಾನದ ಪರಿಸ್ಥಿತಿ ಕುರಿತು ಸಭೆ ನಡೆಸಲಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights