ರೈತರಲ್ಲದವರು ರೈತರನ್ನು ಬೆಂಬಲಿಸುವ ಕಾಲ ಬಂದಿದೆ: ಪಿ ಸಾಯಿನಾಥ್‌

ಕೇಂದ್ರ ಸರ್ಕಾರದ ರೈತ ವಿರೋಧಿ ಕಾಯ್ದೆಗಳ ವಿರುದ್ಧ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಸಮಾಜದ ನಾಗರಿಕರು ರೈತರನ್ನು ಬೆಂಬಲಿಸಬೇಕು. ಕೃಷಿಯೇತರರು ರೈತರನ್ನು ಬೆಂಬಲಿಸುವ ಕಾಲ ಈಗ ಬಂದಿದೆ ಎಂದು ಖ್ಯಾತ ಗ್ರಾಮೀಣ ಪತ್ರಕರ್ತ ಪಿ ಸಾಯಿನಾಥ್‌ ಹೇಳಿದ್ದಾರೆ.

ಕೇಂದ್ರ ಸರ್ಕಾರದ ಮೂರು ಹೊಸ ಕೃಷಿ ನೀತಿಗಳು ಹೊಸ ಕಾಯ್ದೆಗಳು ಕನಿಷ್ಠ ಬೆಂಬಲ ಬೆಲೆ ನೀತಿಯನ್ನು ತೆಗೆದು ಹಾಕಲು ದಾರಿ ಮಾಡಿಕೊಡುತ್ತವೆ. ಈ ಮೂಲಕ ರೈತರನ್ನು ಕಾರ್ಪೊರೇಟ್ ಕಂಪನಿಗಳ ಅಡಿಯಾಳಾಗಿಸಲು ದಾರಿ ಮಾಡಿ ಕೊಡುತ್ತವೆ’ ಎಂದು ಸಾಯಿನಾಥ್‌ ಆತಂಕ ವ್ಯಕ್ತಪಡಿಸುತ್ತಿದ್ದಾರೆ.

ಕೊರೊನಾ ಸಾಂಕ್ರಮಿಕದಿಂದಾಗಿ ಜನರನ್ನು ಗುಂಪು ಸೇರದಂತೆ ನಿರ್ಬಂಧಿಸಿ ಕೃಷಿ ನೀತಿಗಳನ್ನು ಕೇಂದ್ರ ಸರ್ಕಾರ ಜಾರಿಗೆ ತಂದಿದೆ. ಲಾಕ್‌ಡೌನ್ ಸಂದರ್ಭದಲ್ಲಿ ಕಾಯ್ದೆಗಳನ್ನು ಜಾರಿಗೊಳಿಸಿದರೆ ಯಾರೂ ವಿರೋಧಿಸಲು ಸಾಧ್ಯವಿಲ್ಲ. ಯಾರೂ ಪ್ರತಿಭಟನೆ ನಡೆಸಲು ಸಾಧ್ಯವಿಲ್ಲ ಎಂದು ಲೆಕ್ಕಾಚಾರ ಹಾಕಿ ಕಾಯ್ದೆಗಳನ್ನು ಜಾರಿಗೆ ಎಂದು ಸಾಯಿನಾಥ್‌ ಆರೋಪಿಸಿದ್ದಾರೆ.

ಇದನ್ನೂ ಓದಿ: ಏಕತಾ ಪ್ರತಿಮೆ ವೀಕ್ಷಣೆಯ ಟಿಕೆಟ್‌ ಮಾರಾಟದ 5.24 ರೂ ನಾಪತ್ತೆ: ಎಫ್‌ಐಆರ್‌ ದಾಖಲು

ಒಂದು ವಾರದಿಂದ ಚಳಿಗೂ ಎದರದೇ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ಈಗಾಗಲೇ ಲಕ್ಷಾಂತರ ಕಾರ್ಮಿಕರು ಮತ್ತು ಅವರ ಕಾರ್ಮಿಕ ಸಂಘಟನೆಗಳು ರೈತರಿಗೆ ಬೆಂಬಲ ನೀಡಿವೆ. ರೈತರಿಗೆ ಬೆಂಬಲ ನೀಡುವುದು ನಾಗರಿಕ ಸಮಾಜದ ಕರ್ತವ್ಯ. ಕೃಷಿಯೇತರರೂ ಕೂಡ ರೈತರಿಗೆ ಬೆಂಬಲ ನೀಡಬೇಕು ಎಂದು ಅವರು ಕರೆಕೊಟ್ಟಿದ್ದಾರೆ.

ನ. 26ರಿಂದ ದೇಶದ ವಿವಿಧ ರಾಜ್ಯಗಳ ರೈತರು ದೆಹಲಿಗೆ ಪ್ರತಿಭಟನಾ ರ್ಯಾಲಿ ಹೊರಟಿದ್ದು, ಕಳೆದ ಐದು ದಿನಗಳಿಂದ ದೆಹಲಿಯ ಗಡಿ ಭಾಗದಲ್ಲಿ ಪೊಲೀಸರು ರೈತರನ್ನು ತಡೆದಿದ್ದಾರೆ. ದೆಹಲಿಯ ಗಡಿಯಲ್ಲೇ ರೈತರು ಪ್ರತಿಭಟನೆ ನಡೆಸುತ್ತಿದ್ದಾರೆ. ರೈತರಿಗೆ ವೈದ್ಯರು, ವಿದ್ಯಾರ್ಥಿಗಳು, ವಕೀಲರು, ಕಾರ್ಮಿಕರು ಬೆಂಬಲ ನೀಡಿದ್ದಾರೆ.

ಈಗಾಗಲೇ ಸರ್ಕಾರದ ಜೊತೆ ಮೂರು ಸುತ್ತಿನ ಸಭೆ ನಡೆದಿದ್ದು, ಮೂರೂ ಸಭೆಗಳು ಮುರಿದು ಬಿದ್ದಿವೆ. ಕೃಷಿ ನೀತಿಗಳನ್ನು ಹಿಂಪದುಕೊಳ್ಳಲೇಬೇಕು. ಅಲ್ಲಿಯವರೆಗೂ ಪ್ರತಿಭಟನೆ ನಿಲ್ಲಿಸುವುದಿಲ್ಲ. ವಿಶೇಷ ಅಧಿವೇಶನ ಕರೆದು ಕೃಷಿ ಕಾಯ್ದೆಗಳನ್ನು ಹಿಂಪಡೆದುಕೊಳ್ಳಬೇಕು ಎಂದು ರೈತರು ಆಗ್ರಹಿಸಿದ್ದಾರೆ.

ಇಂದು ರೈತರು ಮತ್ತು ಸರ್ಕಾರದ ನಡುವೆ ನಾಲ್ಕನೇ ಸುತ್ತಿನ ಸಭೆ ನಡೆಯಲಿದೆ.


ಇದನ್ನೂ ಓದಿ: ದೆಹಲಿ ಚಲೋ: ವಿಶೇಷ ಅಧಿವೇಶನ ಕರೆದು ಕಾಯ್ದೆಗಳನ್ನು ಹಿಂಪಯುವಂತೆ ರೈತರ ಒತ್ತಾಯ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights