ಕಾಂಗ್ರೆಸ್‌ಗೆ ಬಿಗ್‌ ಶಾಕ್‌: ಚುನಾವಣಾ ವಸ್ತಿಲಿನಲ್ಲಿ ಮಣಿಪುರ ಕಾಂಗ್ರೆಸ್‌ ರಾಜ್ಯಾಧ್ಯಕ್ಷ, 08 ಶಾಸಕರು ಬಿಜೆಪಿಗೆ ಸೇರ್ಪಡೆ!

ಮುಂದಿನ ವರ್ಷದ ಆರಂಭ (2022)ರಲ್ಲಿ ಮಣಿಪುರದಲ್ಲಿ ವಿಧಾನಸಭಾ ಚುನಾವಣೆ ನಡೆಯಲಿದೆ. ಚುನಾವಣೆಗೆ ಕೆಲವೇ ತಿಂಗಳುಗಳು ಬಾಕಿ ಇರುವ ಹೊತ್ತಿನಲ್ಲಿ ಮಣಿಪುರ ಕಾಂಗ್ರೆಸ್‌ನ ರಾಜ್ಯಾಧ್ಯಕ್ಷ ಗೋವಿಂದದಾಸ್‌ ಕೊಂಥೌಜಮ್ ಮತ್ತು ಎಂಟು ಮಂದಿ ಕಾಂಗ್ರೆಸ್‌ ಶಾಸಕರು ಬಿಜೆಪಿಗೆ ಸೇರಲಿದ್ದಾರೆ. ಇದು ಅಲ್ಲಿನ ಕಾಂಗ್ರೆಸ್‌ಗೆ ದೊಡ್ಡ ಶಾಕ್‌ ಕೊಟ್ಟಿದೆ.

ಕೊಂಥೌಜಮ್ ಅವರು ತಮ್ಮ ಅಧ್ಯಕ್ಷ ಸ್ಥಾನಕ್ಕೆ ರಾಜೀನಾಮೆ ನೀಡಿದ್ದು, ಪಕ್ಷ ತೊರೆದಿದ್ದರು. ಈ ಬೆನ್ನಲ್ಲೇ ಎಂಟು ಮಂದಿ ಕಾಂಗ್ರೆಸ್‌ ಶಾಸಕರು ರಾಜೀನಾಮೆ ನೀಡಲಿದ್ದಾರೆ. ಅವರೆಲ್ಲರೂ ಮಂಗಳವಾರ ಬಿಜೆಪಿ ಸೇರಲಿದ್ದಾರೆ ಎಂದು ವರದಿಯಾಗಿದೆ.

ಬಿಷ್ಣುಪುರದಿಂದ ಸತತ ಆರು ಬಾರಿ ಕಾಂಗ್ರೆಸ್ ಶಾಸಕರಾಗಿ ಆಯ್ಕೆಯಾದ ಕೊಂಥೌಜಮ್ ಅವರನ್ನು ಕಳೆದ ವರ್ಷ ಡಿಸೆಂಬರ್‌ನಲ್ಲಿ ಮಣಿಪುರ ಕಾಂಗ್ರೆಸ್ ಅಧ್ಯಕ್ಷರಾಗಿ ಸೋನಿಯಾ ಗಾಂಧಿ ಅವರು ನೇಮಕ ಮಾಡಿದ್ದರು.

ಇದನ್ನೂ ಓದಿ: ಮಾಜಿ ಬಿಜೆಪಿ ಶಾಸಕ ಎಚ್. ಡಿ.ಬಸವರಾಜು ಆಮ್ ಆದ್ಮಿ ಪಕ್ಷಕ್ಕೆ ಸೇರ್ಪಡೆ!

2017 ರಲ್ಲಿ ಬಿಜೆಪಿ ಮೊದಲ ಬಾರಿಗೆ ರಾಜ್ಯದಲ್ಲಿ ಸರ್ಕಾರ ರಚಿಸಿತ್ತು. 2017 ರ ಚುನಾವಣೆಯಲ್ಲಿ ಕಾಂಗ್ರೆಸ್ ಬಿಜೆಪಿಗಿಂತ ಹೆಚ್ಚಿನ ಸ್ಥಾನಗಳನ್ನು ಗಳಿಸುವಲ್ಲಿ ಯಶಸ್ವಿಯಾಗಿದ್ದರೂ, ಪಕ್ಷವು ಕನಿಷ್ಟ ಬಹುಮತದ ಸಂಖ್ಯೆ 31 (60ರಲ್ಲಿ)ಸ್ಥಾನವನ್ನು ಗೆಲ್ಲುವಲ್ಲಿ ವಿಫಲವಾಗಿತ್ತು. ಕಾಂಗ್ರೆಸ್ 28 ಸ್ಥಾನಗಳನ್ನು ಗೆದ್ದರೆ, ಬಿಜೆಪಿ 21 ಸ್ಥಾನಗಳನ್ನು ಗಳಿಸಿತ್ತು. ಎನ್‌ಪಿಎಫ್ ಮತ್ತು ಎನ್‌ಪಿಪಿ ತಲಾ 4 ಸ್ಥಾನಗಳನ್ನು ಗೆದ್ದಿದ್ದವು.

ಪ್ರಸ್ತುವ ಮಣಿಪುರ ವಿಧಾನಸಭೆಯಲ್ಲಿ 56 ಸದಸ್ಯರಿದ್ದು, ಬಿಜೆಪಿ 25 ಸದಸ್ಯರು ಮತ್ತು ಕಾಂಗ್ರೆಸ್ 17 ಸದಸ್ಯರನ್ನು ಹೊಂದಿದೆ. ಎನ್‌ಪಿಪಿ ಮತ್ತು ಎನ್‌ಪಿಎಫ್ ತಲಾ 4 ಸದಸ್ಯರನ್ನು ಹೊಂದಿವೆ. ತೃಣಮೂಲ ಕಾಂಗ್ರೆಸ್ ಒಬ್ಬ ಶಾಸಕ ಮತ್ತು 3 ಸ್ವತಂತ್ರ ಶಾಸಕರು ಇದ್ದಾರೆ. ಸದನದಲ್ಲಿ ನಾಲ್ಕು ಸ್ಥಾನಗಳು ಖಾಲಿ ಇವೆ.

ಎನ್‌ಪಿಪಿ, ಎನ್‌ಪಿಎಫ್ ಮತ್ತು 3 ಸ್ವತಂತ್ರರ ಬೆಂಬಲದೊಂದಿಗೆ ಬಿಜೆಪಿ ಸಮ್ಮಿಶ್ರ ಸರ್ಕಾರವನ್ನು ನಡೆಸುತ್ತಿದೆ. ಈ ಮೈತ್ರಿಯಲ್ಲಿ ಒಟ್ಟು 36 ಶಾಸಕರು ಇದ್ದಾರೆ. ಇದೀಗ ಕಾಂಗ್ರೆಸ್‌ನ 8 ಶಾಸಕರು ರಾಜೀನಾಮೆ ಬಿಜೆಪಿಗೆ ಸೇರಲಿದ್ದಾರೆ.

ಕಾಂಗ್ರೆಸ್​ನ ಕೆಲವೊಂದು ನೀತಿಯಿಂದ ಬೇಸತ್ತು ಇವರೆಲ್ಲರೂ ಬಿಜೆಪಿ ಸೇರುತ್ತಿರುವುದಾಗಿ ಹೇಳಿದ್ದಾರೆ.

ಇದನ್ನೂ ಓದಿ: ಬಿಎಸ್‌ಪಿ ಉಚ್ಚಾಟಿತ ಕೊಳ್ಳೆಗಾಲ ಶಾಸಕ ಎನ್‌.ಮಹೇಶ್‌ ಬಿಜೆಪಿಗೆ ಸೇರ್ಪಡೆ?

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights