ಕೊರೊನಾ ನಿಯಮ ಸಡಿಲಗೊಳಸಿದ ಕೇರಳ ಸರ್ಕಾರದ ವಿರುದ್ಧ ಸುಪ್ರೀಂ ಗರಂ!

ಬಕ್ರೀದ್ ಪ್ರಯುಕ್ತ ಕೋವಿಡ್ ಮಾನದಂಡಗಳನ್ನು ಸಡಿಲಿಸಲು ಅವಕಾಶ ನೀಡಿದ್ದಕ್ಕಾಗಿ ಕೇರಳ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಕ್ಲಾಸ್ ತೆಗೆದುಕೊಂಡಿದೆ.

ಬಕ್ರೀದ್ ಪ್ರಯುಕ್ತ ರಾಜ್ಯದಲ್ಲಿ ಕೋವಿಡ್ -19 ನಿರ್ಬಂಧಗಳನ್ನು ಸಡಿಲಗೊಳಿಸಿದ ಕೇರಳ ಸರ್ಕಾರಕ್ಕೆ ಸುಪ್ರೀಂ ಕೋರ್ಟ್ ಮಂಗಳವಾರ ತರಾಟೆಗೆ ತೆಗೆದುಕೊಂಡಿದೆ. ಲಾಕ್‌ಡೌನ್ ಮಾನದಂಡಗಳನ್ನು ಸಡಿಲಿಸಬೇಕು ಎಂಬ ವ್ಯಾಪಾರಿಗಳ ಬೇಡಿಕೆಗೆ ಅನುಗುಣವಾಗಿ ಕೇರಳ ಸರ್ಕಾರ ಆದೇಶ ನೀಡಿರುವುದು ಆಘಾತಕಾರಿ ಸ್ಥಿತಿಯಾಗಿದೆ ಎಂದು ಎಸ್‌ಸಿ ಮಂಗಳವಾರ ತಿಳಿಸಿದೆ.

ಕೇರಳ ಸರ್ಕಾರದ ಈ ನಿರ್ಣಯ ಕೊರೊನಾ ಸೋಂಕು ಹರಡಲು ಸಹಕಾರಿಯಾಗಿದೆ ಎಂದು ಕೋರ್ಟ್ ಹೇಳಿದೆ. “ಕೇರಳ ಸರ್ಕಾರದ ಅಧಿಸೂಚನೆಯನ್ನು ರದ್ದುಗೊಳಿಸಲು ಸಾಧ್ಯವಿಲ್ಲ.ಆದರೆ  ಬಕ್ರೀದ್ ಗೆ ರಾಜ್ಯವು ನೀಡಿದ ಸಡಿಲಿಕೆಗಳ ವಿರುದ್ದ ಕ್ರಮ ಕೈಗೊಳ್ಳುವುದಾಗಿ” ಕೇರಳ ಸರ್ಕಾರಕ್ಕೆ ಸುಪ್ರಿಂಕೋರ್ಟ್ ಎಚ್ಚರಿಕೆ ನೀಡಿದೆ.

ಈದ್ ದೃಷ್ಟಿಯಿಂದ ರಾಜ್ಯದಲ್ಲಿ ಕೋವಿಡ್ -19 ನಿರ್ಬಂಧಗಳನ್ನು ಸಡಿಲಿಸುವುದರ ವಿರುದ್ಧದ ಅರ್ಜಿಯ ಮೇಲೆ ಕೇರಳ ಸರ್ಕಾರಕ್ಕೆ ಪ್ರತಿಕ್ರಿಯೆ ಸಲ್ಲಿಸುವಂತೆ ಸುಪ್ರೀಂ ಕೋರ್ಟ್ ಸೋಮವಾರ ಕೇಳಿತ್ತು.

ಜುಲೈ 17 ರಂದು ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್ ಪತ್ರಿಕಾಗೋಷ್ಠಿಯಲ್ಲಿ ರಿಯಾಯಿತಿಗಳನ್ನು ಘೋಷಿಸಿದ್ದರು ಮತ್ತು ಜುಲೈ 21 ರಂದು ಬಕ್ರಿಡ್ (ಈದ್-ಉಲ್-ಅಹಾ) ಆಚರಿಸಲಾಗುತ್ತಿರುವ ಹಿನ್ನೆಲೆಯಲ್ಲಿ, ಜವಳಿ, ಪಾದರಕ್ಷೆಗಳ ಅಂಗಡಿಗಳು, ಆಭರಣಗಳು, ಅಲಂಕಾರಿಕ ಅಂಗಡಿಗಳು, ಗೃಹೋಪಯೋಗಿ ವಸ್ತುಗಳನ್ನು ಮಾರಾಟ ಮಾಡುವ ಅಂಗಡಿಗಳು ಮತ್ತು ಎಲೆಕ್ಟ್ರಾನಿಕ್ ವಸ್ತುಗಳು, ಎಲ್ಲಾ ರೀತಿಯ ದುರಸ್ತಿ ಅಂಗಡಿಗಳು ಮತ್ತು ಅಗತ್ಯ ವಸ್ತುಗಳನ್ನು ಮಾರಾಟ ಮಾಡುವ ಅಂಗಡಿಗಳನ್ನು ಜುಲೈ 18-20 ರಂದು ಬೆಳಿಗ್ಗೆ 7 ರಿಂದ ರಾತ್ರಿ 8 ರವರೆಗೆ ಎ, ಬಿ ಮತ್ತು ಸಿ ವಿಭಾಗಗಳಲ್ಲಿ ತೆರೆಯಲು ಅನುಮತಿಸಲಾಗುವುದು.

ಡಿ ವರ್ಗದ ಪ್ರದೇಶಗಳಲ್ಲಿ, ಈ ಅಂಗಡಿಗಳು ಜುಲೈ 19 ರಂದು ಮಾತ್ರ ಕಾರ್ಯನಿರ್ವಹಿಸುತ್ತವೆ ಎಂದು ಅವರು ಹೇಳಿದ್ದರು.

Spread the love

Leave a Reply

Your email address will not be published. Required fields are marked *