ಬೆಂಗಳೂರಿನ ಅರ್ಕ ಆಸ್ಪತ್ರೆಗೆ ಸಕಾಲಕ್ಕೆ ಆಕ್ಸಿಜನ್ ಪೂರೈಸಿದ ರಿಯಲ್ ಹೀರೋ ಸೋನು ಸೂದ್…!

ಕೊರೊನಾ ಮಹಾಮಾರಿ ದೇಶದಕ್ಕೆ ಎಂಟ್ರಿ ಕೊಟ್ಟಾಗಿನಿಂದಲೂ ದೇಶದ ಜನರ ನೆರವಿಗಾಗಿ ತಮ್ಮನ್ನು ತಾವು ತೊಡಗಿಸಿಕೊಂಡ ಬಾಲಿವುಡ್ ನಟ ಸೋನು ಸೂದ್ ಸದ್ಯ ಮತ್ತೊಂದು ಮಹತ್ಕಾರ್ಯ ಮಾಡುವುದರ ಮೂಲಕ ರೋಗಿಗಳ ಪ್ರಾಣ ಉಳಿಸಿದ್ದಾರೆ.

ಹೌದು… ಈಗಾಗಲೇ ದೇಶದಲ್ಲಿ ಆಕ್ಸಿಜನ್ ಪೂರೈಕೆಯಲ್ಲಿ ಕೊರತೆ ಉಂಟಾಗಿದ್ದು ರೋಗಿಗಳು ಸಾವು ಬದುಕಿನ ಮಧ್ಯೆ ಹೋರಾಡುತ್ತಿದ್ದಾರೆ. ಈ ಸಮಸ್ಯೆಯಿಂದ ಕರುನಾಡು ಹೊರತಾಗಿಲ್ಲ. ಇಂಥಹ ಸಮಸ್ಯೆಯನ್ನು ಯಲಹಂಕ ಬಳಿಯ ಎರಡು ಆಸ್ಪತ್ರೆಗಳು ಎದುರಿಸುತ್ತಿವೆ. ಯಲಹಂಕ ನ್ಯೂಟೌನ್​ನಲ್ಲಿರುವ ಅರ್ಕ ಆಸ್ಪತ್ರೆಯಲ್ಲಿ ಆಕ್ಸಿಜನ್ ಖಾಲಿಯಾಗಿ ಹಲವು ರೋಗಿಗಳು ಸಾವಿನ ದವಡೆಯಲ್ಲಿದ್ದರು. ಆಗ ಬಾಲಿವುಡ್ ನಟ ಸೋನು ಸೂದ್ ನೆರವಿನ ಹಸ್ತ ಚಾಚಿ ಸಕಾಲಕ್ಕೆ ಆಕ್ಸಿಜನ್ ಪೂರೈಸಿದರು.

ಈಗಾಗಲೇ ರಾಜ್ಯದಲ್ಲಿ ಚಾಮರಾಜನಗರದಲ್ಲಿ ಆಕ್ಸಿಜನ್ ಕೊರತೆಯಿಂದಾಗಿ 24 ರೋಗಿಗಳು ಸಾವನ್ನಪ್ಪಿದ ಘಟನೆ ದೇಶವ್ಯಾಪಿ ಸುದ್ದಿಯಾಗಿದೆ. ಕಲಬುರಗಿಯಲ್ಲೂ ಆಕ್ಸಿಜನ್ ಕೊರತೆಯಿಂದ ನಾಲ್ಕು ಜನ ರೋಗಿಗಳು ಪ್ರಾಣ ಬಿಟ್ಟಿದ್ದಾರೆ.

ಮತ್ತೊಂದು ಕಡೆ ಎಷ್ಟೇ ಪ್ರಯುತ್ನ ಪಟ್ಟರೂ ಕೊರೊನಾ ನಿಯಂತ್ರಣಕ್ಕೆ ಬರುತ್ತಿಲ್ಲ. ದಿನದಿಂದ ದಿನಕ್ಕೆ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಲೇ ಇದ್ದು ಸಾವಿನ್ ಸಂಖ್ಯೆಗಳೂ ಉಲ್ಬಣಗೊಳ್ಳುತ್ತಿರುವುದು ಆತಂಕಕ್ಕೆ ಕಾರಣವಾಗಿದೆ.

Spread the love

Leave a Reply

Your email address will not be published. Required fields are marked *