ಚಾಮರಾಜನಗರ ಆಯ್ತು, ಕಲಬುರಗಿಯಲ್ಲೂ ಆಕ್ಸಿಜನ್ ಸಿಗದೆ 4 ಜನ ಸಾವು!
ಚಾಮರಾಜನಗರದಲ್ಲಿ ಆಕ್ಸಿಜನ್ ಸಿಗದೆ 24 ಜನ ಮೃತ ಪಟ್ಟ ದಾರಣು ಘಟನೆ ಮಾಸುವ ಮುನ್ನವೇ ಕಲಬುರಗಿಯಲ್ಲೂ ಆಕ್ಸಿಜನ್ ಸಿಗದೆ 4 ಜನ ಸಾವನ್ನಪ್ಪಿದ್ದಾರೆ.
ಬೆಳಗಿನ ಜಾವ 4 ಗಂಟೆಗೆ ಆಕ್ಸಿಜನ್ ಖಾಲಿಯಾಗಿದ್ದು ಸತತ 7 ಗಂಟೆಯಿಂದಲೂ ಆಕ್ಸಿಜನ್ ಸಿಗದೇ 4 ಜನ ರೋಗಿಗಳು ಸಾವನ್ನಪ್ಪಿದ್ದಾರೆ. ಅಫಜಲ್ ಪುರ ತಾಲೂಕು ಆಸ್ಪತ್ರೆಯಲ್ಲಿ ಈ ದುರ್ಘಟನೆ ನಡೆದಿದ್ದು, ಕ್ಷಣ ಕ್ಷಣಕ್ಕೂ ರೋಗಿಗಳ ಸ್ಥಿತಿ ಗಂಭೀರವಾಗುತ್ತಿದೆ. ಸ್ಥಳಕ್ಕೆ ಜಿಲ್ಲಾಡಳಿತ ಅಧಿಕಾರಿಗಳು ಭೇಟಿ ನೀಡಿದ್ದು, ತಮ್ಮನ್ನ ಸಮರ್ಥಿಸಿಕೊಂಡಿದ್ದಾರೆ.
ಸ್ಥಳೀಯ ಶಾಸಕರು ಪ್ರಿಯಾಂಕ್ ಖರ್ಗೆ ಈ ಬಗ್ಗೆ ಮಾತನಾಡಿದ, “ಆಕ್ಸಿಜನ್ ಕೊರತೆ ಇದೆ ಎಂದು ಜಿಲ್ಲಾಧಿಕಾರಿಗಳಿಗೆ ಗೊತ್ತಿದ್ದರೂ ಅವರು ಗಮನ ಹರಿಸಿಲ್ಲ. ಸರ್ಕಾರಿ ಆಸ್ಪತ್ರೆಗಳಿಂದ ಆಕ್ಸಿಜನ್ ಸಿಗದೇ ಬ್ಲಾಕ್ ನಲ್ಲಿ ಆಕ್ಸಿಜನ್ ಮಾರಾಟ ಮಾಡಲಾಗುತ್ತಿದೆ. ಮೂರು ಪಟ್ಟು ದುಡ್ಡಿಗೆ ಆಕ್ಸಿಜನ್ ಸಿಲಿಂಡರ್ ಮಾರಾಟ ಮಾಡಲಾಗುತ್ತಿದೆ” ಎಂದು ದೂರಿದ್ದಾರೆ.
“ಜಿಲ್ಲಾಮಟ್ಟದಲ್ಲಿ ಸಭೆ ಕೂಡ ಕರೆದಿಲ್ಲ ನಾನು 2 ಬಾರಿ ಪತ್ರ ಬರೆದಿದ್ದೇನೆ. ಆದರೂ ಕೂಡ ಸರ್ಕಾರ ಎಚ್ಚೆತ್ತುಕೊಂಡಿಲ್ಲ. ಹೆಚ್ಚಾಗಿ ಪ್ರಶ್ನೆ ಕೇಳಿದ ರಾಕಜೀಯ ಮಾಡಬೇಡಿ ಎಂದು ಜಾರಿಕೊಳ್ಳುತ್ತಾರೆ. ಇದು ಆಕ್ಸಿಜನ್ ಕೊರತೆಯಿಂದಾದ ಸಾವಲ್ಲ, ಸರ್ಕಾರ ಮಾಡುತ್ತಿರುವ ಕೊಲೆ ” ಎಂದು ಕಿಡಿ ಕಾರಿದ್ದಾರೆ.