ದೇಶದ ಆರ್ಥಿಕತೆ ಚೇತರಿಕೆಯಲ್ಲಿದೆ; ರೈತರಿಗೆ 25,000 ಕೋಟಿ ಬಿಡುಗಡೆ ಮಾಡಿದ್ದೇವೆ: ನಿರ್ಮಲಾ ಸೀತಾರಾಮನ್

ಕೊರೊನಾ ವೈರಸ್‌ನಿಂದ ತತ್ತರಿಸಿರುವ ಭಾರತದ ಆರ್ಥಿಕತೆ ನಿಧಾನವಾಗಿ ಚೇತರಿಸಿಕೊಳ್ಳುತ್ತಿದೆ. ಜಿಡಿಪಿಯಲ್ಲಿ ಏರಿಕೆಯಾಗುತ್ತಿದೆ ಎಂದು ವಿತ್ತ ಸಚಿವೆ ನಿರ್ಮಲಾ ಸೀತಾರಾಮನ್‌ ಹೇಳಿದ್ದಾರೆ.

ದೇಶದ ಆರ್ಥಿಕ ಸ್ಥಿತಿಗತಿ ಏರಿಕೆಯಾಗುತ್ತಿದೆ ಎಂಬುದನ್ನು ಜಿಡಿಪಿ ಸೂಚಿಸುತ್ತಿದೆ. ವಿದ್ಯುತ್ ಬಳಕೆ ಶೇಕಡ 12%‌ರಷ್ಟು ಜಾಸ್ತಿಯಾಗಿದೆ. ಬ್ಯಾಂಕುಗಳ ಸಾಲ ನೀಡುವಿಕೆಯಲ್ಲೂ ಶೇ. 5.1ರಷ್ಟು ಸುಧಾರಿಸಿದೆ. ಒಂದು ದೇಶ ಒಂದು ಪಡಿತರ ಚೀಟಿ ಯೋಜನೆ ಯಶಸ್ವಿಯಾಗಿದೆ. ಸ್ವನಿಧಿ ಯೋಜನೆಯಡಿ 26.26 ಕೋಟಿ ರೂ. ಸಾಲ ನೀಡಲಾಗಿದೆ,” ಎಂದಿರುವ ನಿರ್ಮಲಾ ಸೀತಾರಾಮನ್ ದೇಶ ಅಭಿವೃದ್ಧಿಯತ್ತ ಸಾಗಿದೆ ಎಂದು ಹೇಳಿದ್ದಾರೆ.

“ಬೀದಿ ಬದಿ ವ್ಯಾಪಾರಿಗಳಿಗೆ ಆತ್ಮ ನಿರ್ಭರ ನಿಧಿ ಯೋಜನೆ ಸಾಲ ನೀಡಲಾಗಿದೆ. 26.62 ಲಕ್ಷ ಅರ್ಜಿಗಳು ಬಂದಿದ್ದವು. ಇವರಿಗೆ ಒಟ್ಟು 1373 ಕೋಟಿ ರೂಪಾಯಿ ಸಾಲ‌ ನೀಡಲಾಗಿದೆ. ವಲಸೆ ಕಾರ್ಮಿಕರ ವಿಚಾರದಲ್ಲಿ ಪೋರ್ಟಲ್ ತಯಾರು ಮಾಡುತ್ತಿದ್ದು, ಇದಕ್ಕೆ ರಾಜ್ಯ ಸರ್ಕಾರಗಳ ಸಹಾಯ ಪಡೆಯುತ್ತಿದ್ದೇವೆ” ಎಂದು ನಿರ್ಮಲಾ ಸೀತಾರಾಮನ್ ತಿಳಿಸಿದ್ದಾರೆ​.

“NABARD ಮೂಲಕ ಹೆಚ್ಚುವರಿ ತುರ್ತು ಕೆಲಸಕ್ಕೆ ಬಂಡವಾಳ ನಿಧಿಯಿಂದ ರೈತರಿಗೆ 25,000 ಕೋಟಿ ರೂ. ಬಿಡುಗಡೆ ಮಾಡಿದ್ದೇವೆ. ಕೆಳ ಹಂತದಲ್ಲಿ ರೈತರಿಗೆ ಹಣ ಸಿಗುವಂತೆ ಮಾಡಿದೆ. ಕಿಸಾನ್ ಕ್ರೆಡಿಟ್ ಕಾರ್ಡ್‌ಗಳ ಮೂಲಕ 2.5 ಕೋಟಿ ರೈತರಿಗೆ ರೈತರಿಗೆ 1.4 ಲಕ್ಷ ಕೋಟಿ ರೂ. ವಿತರಿಸಲಾಗಿದೆ” ಎಂದಿದ್ದಾರೆ.

ಆತ್ಮನಿರ್ಭರ್ ಭಾರತ್ ರೋಜಗಾರ್ ಯೋಜನೆಯನ್ನು ಕೇಂದ್ರ ಸರ್ಕಾರ ಘೋಷಣೆ ಮಾಡಿತು. ಹೊಸ ಉದ್ಯೋಗ ಸೃಷ್ಡಿಗೆ ಈ ಯೋಜನೆ ಸಹಕಾರಿ ಆಗಲಿದೆ. ಹೊಸ ಯೋಜನೆಯಲ್ಲಿ ನೌಕರರಿಗೆ ಇಪಿಎಫ್ ಸೌಲಭ್ಯ ಸಿಗಲಿದೆ. ಮಾರ್ಚ್ ನಿಂದ ಸೆಪ್ಟೆಂಬರ್ ಒಳಗೆ ಕೆಲಸ ಕಳೆದುಕೊಂಡವರಿಗೂ ಇಪಿಎಫ್ ಸೌಲಭ್ಯ ಸಿಗಲಿದೆ ಎಂದು ತಿಳಿಸಿದ್ದಾರೆ.


ಇದನ್ನೂ ಓದಿ: ನಿತೀಶ್‌ ಬಿಜೆಪಿ ಜೊತೆಗಿನ ಮೈತ್ರಿ ಬಿಡಬೇಕು; ತೇಜಸ್ವಿ ಯಾದವ್‌ರನ್ನು ಮುಖ್ಯಮಂತ್ರಿ ಮಾಡಬೇಕು: ದಿಗ್ವಿಜಯ್ ಸಿಂಗ್‌

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights