FACT CHECK | ನಟ ಸಲ್ಮಾನ್ ಖಾನ್ ಐಸಿಯುನಲ್ಲಿ ದಾಖಲಾಗಿದ್ದಾರೆಯೇ?

ಬಾಲಿವುಡ್ ನಟ ಸಲ್ಮಾನ್ ಖಾನ್  ಆಸ್ಪತ್ರೆಯ ಹಾಸಿಗೆಯ ಮೇಲೆ ಇರುವ ಕೆಲವು ಚಿತ್ರಗಳು ಸಾಮಾಜಿಕ ಮಾಧ್ಯಮಗಳಲ್ಲಿ ಹರಿದಾಡುತ್ತಿವೆ. ಇದರಲ್ಲಿ ಸಲ್ಮಾನ್ ಖಾನ್ ಆಸ್ಪತ್ರೆಯ ಹಾಸಿಗೆಯ ಮೇಲೆ ಮಲಗಿಕೊಂಡಿರುವುದನ್ನು ಕಾಣಬಹುದು. ಕೆಲವು ಬಳಕೆದಾರರು ಈ ಚಿತ್ರಗಳನ್ನು ಹಂಚಿಕೊಳ್ಳುತ್ತಾ, ಸಲ್ಮಾನ್ ಖಾನ್ ಅವರನ್ನು ಐಸಿಯುಗೆ ದಾಖಲಿಸಲಾಗಿದೆ ಮತ್ತು ಅವರ ಸ್ಥಿತಿ ಗಂಭೀರವಾಗಿದೆ ಎಂದು ಹೇಳುತ್ತಿದ್ದಾರೆ.

ಇನ್‌ಸ್ಟಾಗ್ರಾಮ್ ಬಳಕೆದಾರರೊಬ್ಬರು ಈ ಫೋಟೋವನ್ನು ಹಂಚಿಕೊಂಡು, “ಸಲ್ಮಾನ್ ಖಾನ್ ಐಸಿಯುನಲ್ಲಿದ್ದಾರೆ. ಸಲ್ಮಾನ್ ಖಾನ್ ಬದುಕುಳಿಯುವ ಭರವಸೆ ಬಹಳ ಕಡಿಮೆ” ಎಂದು ಬರೆದುಕೊಂಡಿದ್ದಾರೆ.

ಇದೇ ರೀತಿಯ ಪ್ರತಿಪಾದನೆಯೊಂದಿಗೆ ಹಲವು ಸಾಮಾಜಿಕ ಮಾಧ್ಯಮಗಳ ಬಳಕೆದಾರರು ಪೋಸ್ಟ್ಅನ್ನು ಹಂಚಿಕೊಂಡಿದ್ದು, ಈ ಸುದ್ದಿ ನಿಜವೇ ಎಂದು ಪರಿಶೀಲಿಸೋಣ.

ಫ್ಯಾಕ್ಟ್‌ಚೆಕ್ :

ಸಾಮಾಜಿಕ ಮಾಧ್ಯಮಗಳಲ್ಲಿ ಹಂಚಿಕೊಳ್ಳಲಾಗುತ್ತಿರುವ ಪೋಸ್ಟ್‌ನಲ್ಲಿ ಎರಡು ಕೊಲಾಜ್‌ ಮಾಡಲಾದ ಫೋಟೊಗಳನ್ನು  ಪರಿಶೀಲಿಸಿದಾಗ ಫೊಟೋ ಎಡಿಟ್ ಮಾಡಲ್ಪಟ್ಟಿವೆ. ಜನರು ಈ ಫೋಟೋಗಳನ್ನು ಸುಳ್ಳು ಹೇಳಿಕೆಗಳೊಂದಿಗೆ ಹಂಚಿಕೊಳ್ಳುತ್ತಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

ನಾವು ಮೊದಲು ಯಾಂಡೆಕ್ಸ್ ಉಪಕರಣದ ಮೂಲಕ ಕೊಲಾಜ್‌ನಲ್ಲಿರುವ ಮೊದಲ ಫೋಟೋವನ್ನು ಸರ್ಚ್ ಮಾಡಿದ ಸಂದರ್ಭದಲ್ಲಿ cafef.vn ವೆಬ್‌ಸೈಟ್‌ನಲ್ಲಿ ಫೋಟೋಗೆ ಸಂಬಂಧಿಸಿದ ಸುದ್ದಿ ಲಭ್ಯವಾಗಿದೆ. ಜನವರಿ 3, 2024 ರಂದು ಪ್ರಕಟವಾದ ಸುದ್ದಿಯಲ್ಲಿ, ಇದೇ ವೈರಲ್ ಫೋಟೋ ಇದ್ದು ಆದರೆ ಇದರಲ್ಲಿರುವವರು ಬೇರೊಬ್ಬರಾಗಿದ್ದಾರೆ.

ತನಿಖೆಯನ್ನು ಮುಂದುವರಿಸುತ್ತಾ, ನಾವು ಎರಡನೇ ಫೋಟೋವನ್ನು ಗೂಗಲ್ ಲೆನ್ಸ್ ಮೂಲಕ ಸರ್ಚ್ ಮಾಡಿದಾಗ, ಪಂಜಾಬಿ ಜಾಗರಣ್ ವೆಬ್‌ಸೈಟ್‌ನಲ್ಲಿ ವೈರಲ್ ಚಿತ್ರಕ್ಕೆ ಸಂಬಂಧಿಸಿದ ಸುದ್ದಿಲಭ್ಯವಾಗಿದೆ. ಈ ಸುದ್ದಿಯನ್ನು ಅಕ್ಟೋಬರ್ 2, 2022 ರಂದು ಪ್ರಕಟಿಸಲಾಗಿದೆ. ನೀಡಿರುವ ಮಾಹಿತಿಯ ಪ್ರಕಾರ, ಪಂಜಾಬಿ ಗಾಯಕ ಅಲ್ಫಾಜ್ ಕಾರಿನಲ್ಲಿ ಪೆಟ್ರೋಲ್ ತುಂಬಲು ನಿಂತಾಗ, ಆ ಸಮಯದಲ್ಲಿ ಅಪರಿಚಿತ ಟೆಂಪೋ ಚಾಲಕನೊಬ್ಬ ಅವರಿಗೆ ಡಿಕ್ಕಿ ಹೊಡೆದಿದ್ದಾನೆ. ಈ ಚಿತ್ರವು ಅವರನ್ನು ಆಸ್ಪತ್ರೆಗೆ ದಾಖಲಿಸಿದ ಸಮಯದ್ದಾಗಿದೆ.

 

View this post on Instagram

 

A post shared by HT City (@htcity)

htcity ಯ ಅಧಿಕೃತ ಇನ್​ಸ್ಟಾಗ್ರಾಮ್ ಹ್ಯಾಂಡಲ್‌ನಲ್ಲಿ ಫೋಟೋಗೆ ಸಂಬಂಧಿಸಿದ ಪೋಸ್ಟ್ ಅನ್ನು ನಾವು ಕಂಡುಕೊಂಡಿದ್ದೇವೆ. ಅಕ್ಟೋಬರ್ 2, 2022 ರಂದು ಮಾಡಿದ ಪೋಸ್ಟ್‌ನಲ್ಲಿ, ಫೋಟೋ ಪಂಜಾಬಿ ಗಾಯಕ ಅಲ್ಫಾಜ್ ಅವರದು ಎಂದು ಹೇಳಲಾಗಿದೆ.

Salman khan

ಇತ್ತೀಚೆಗೆ, ಜೂನ್ 19 ರಂದು, ಮುಂಬೈನಲ್ಲಿ ನಡೆದ ಆಮಿರ್ ಖಾನ್ ಅವರ ಸಿತಾರೆ ಜಮೀನ್ ಪರ್ ಚಿತ್ರದ ಪ್ರೀಮಿಯರ್ ಶೋ ದಲ್ಲಿ ಭಾಗವಹಿಸಿದ್ದರು. ಈ ಸಂದರ್ಭದಲ್ಲಿ ನಟ ಸಲ್ಮಾನ್ ಖಾನ್ ಹರ್ಷಚಿತ್ತರಾಗಿರುವುದನ್ನು ಕಾಣಬಹುದು.

ಒಟ್ಟಾರೆಯಾಗಿ ಹೇಳುವುದಾದರೆ, ಬಾಲಿವುಡ್‌ ನಟ ಸಲ್ಮಾನ್ ಖಾನ್ ಅನಾರೋಗ್ಯದಿಂದ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಅವರ ಪರಿಸ್ಥಿತಿ ಚಿಂತಾಜನಕ ಎಂದು ಸುಳ್ಳು ಪ್ರತಿಪಾದನೆಯೊಂದಿಗೆ ಸಾಮಾಜಿಕ ಮಾಧ್ಯಮಗಳಲ್ಲಿ ಪೋಸ್ಟ್ಅನ್ನು ಹಂಚಿಕೊಳ್ಳಲಾಗುತ್ತಿದೆ.

ನಿಮ್ಮ ಸುತ್ತಮುತ್ತ ಮತ್ತು ಸಾಮಾಜಿಕ ಜಾಲತಾಣಗಳಲ್ಲಿ ಯಾವುದೇ ಸುದ್ದಿಯು ಸುಳ್ಳು ಎಂದು ನಿಮಗೆ ಸಂದೇಹ ಬಂದಿದ್ದರೆ ಅದನ್ನು Ensuddi.com ವಾಟ್ಸಾಪ್  ನಂ 9108969301 ಗೆ ತಲುಪಿಸಿ. ನಾವು ಫ್ಯಾಕ್ಟ್‌ಚೆಕ್ ಮಾಡಿ ಸತ್ಯ ನಿಮ್ಮೆದುರು ಇಡುತ್ತೇವೆ


ಇದನ್ನು ಓದಿರಿ : FACT CHECK | ಮುಸ್ಲಿಂ ದಂಪತಿಗಳ ನಡುವಿನ ಜಗಳವನ್ನು ‘ಲವ್ ಜಿಹಾದ್’ ಎಂಬ ಕೋಮು ಹಿನ್ನಲೆಯಲ್ಲಿ ತಪ್ಪಾಗಿ ಹಂಚಿಕೆ


 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights