ಅಸ್ಸಾಂ: ಭಾರೀ ಮಳೆಗೆ ತುತ್ತಾದ 22 ಜಿಲ್ಲೆಗಳು; 6.47 ಲಕ್ಷ ಜನರ ಪರಿಸ್ಥಿತಿ ಅತಂತ್ರ!

ಅಸ್ಸಾಂನಲ್ಲಿ ಭಾರೀ ಮಳೆ ಸುರಿಯುತ್ತಿದ್ದು, ರಾಜ್ಯದ 34 ಜಿಲ್ಲೆಗಳಲ್ಲಿ 22 ಜಿಲ್ಲೆಗಳು ಪ್ರವಾಹವನ್ನು ಎದುರಿಸುತ್ತಿವೆ. ಈ ಜಿಲ್ಲೆಗಳಲ್ಲಿ 6.47 ಲಕ್ಷಕ್ಕೂ ಹೆಚ್ಚು ಜನರು ಈಗಾಗಲೇ ತೊಂದರೆಗೀಡಾಗಿದ್ದಾರೆ.

ಮಜುಲಿ ಮತ್ತು ಬಾರ್ಪೇಟಾ ಜಿಲ್ಲೆಗಳಲ್ಲಿ ಹಲವು ಪ್ರದೇಶಗಳು ಜಲಾವೃತಗೊಂಡಿವೆ. ಕಳೆದ ನಾಲ್ಕು ದಿನಗಳಲ್ಲಿ ಐದು ಜನರು ಸಾವನ್ನಪ್ಪಿದ್ದಾರೆ ಎಂದು ಅಸ್ಸಾಂ ರಾಜ್ಯ ವಿಪತ್ತು ನಿರ್ವಹಣಾ ಪ್ರಾಧಿಕಾರದ (ASDMA) ಅಧಿಕಾರಿಗಳು ತಿಳಿಸಿದ್ದಾರೆ.

ರಾಜ್ಯದಲ್ಲಿ ಸುಮಾರು 39,500 ಹೆಕ್ಟೇರ್ ಬೆಳೆ ಪ್ರದೇಶಗಳು ಜಲಾವೃತಗೊಂಡಿವೆ ಮತ್ತು 1,300 ಕ್ಕೂ ಹೆಚ್ಚು ಗ್ರಾಮಗಳು ಹಾನಿಗೊಳಗಾಗಿವೆ ಎಂದು ಅವರು ಹೇಳಿದ್ದಾರೆ.

ಪಶ್ಚಿಮ ಅಸ್ಸಾಂನ ನಲ್ಬಾರಿ ಜಿಲ್ಲೆಯಲ್ಲಿ ಪ್ರವಾಹ ಪರಿಸ್ಥಿತಿ ಗಂಭೀರ ಮಟ್ಟವನ್ನು ತಲುಪಿದೆ. ಲ್ಬಾರಿ ಜಿಲ್ಲೆಯ 1,10,731 ಜನರು, ಧರಾಂಗ್ ಜಿಲ್ಲೆಯ 1,08,271 ಜನರು, ಲಖಿಂಪುರ್ ಜಿಲ್ಲೆಯ 1,03,768 ಜನರು, ಗೋಲಘಾಟ್ ಜಿಲ್ಲೆಯಲ್ಲಿ ಒಂದು ಲಕ್ಷ ಜನರು, ಮೋರಿಗಾಂವ್ ಜಿಲ್ಲೆಯ 59,393 ಜನರು, ಮತ್ತು ಮಜುಲಿ ಜಿಲ್ಲೆಯಲ್ಲಿ 52,461 ಜನರು ತೊಂದರೆ ತುತ್ತಾಗಿದ್ದಾರೆ ಎಂದು ಅವರು ಹೇಳಿದ್ದಾರೆ.

ಅಲ್ಲದೆ, ಗೋಲಾಘಾಟ್, ನಾಗಾಂವ್, ಸೋನಿತ್ ಪುರ್, ಬಿಸ್ವನಾಥ್ ಮತ್ತು ಕರ್ಬಿ ಆಂಗ್ಲಾಂಗ್ ಜಿಲ್ಲೆಗಳನ್ನು ವ್ಯಾಪಿಸಿರುವ ಕಾಜಿರಂಗಾ ರಾಷ್ಟ್ರೀಯ ಉದ್ಯಾನ ಮತ್ತು ಹುಲಿ ಮೀಸಲು ಪ್ರದೇಶಗಳ ಶೇಕಡಾ 70ಕ್ಕೂ ಹೆಚ್ಚು ಪ್ರದೇಶಗಳು ಪ್ರವಾಹಕ್ಕೆ ತುತ್ತಾಗಿವೆ. ಹಲವು ಕಾಡು ಪ್ರಾಣಿಗಳು ಸಾವನ್ನಪ್ಪಿವೆ. ಈ ಪೈಕಿ ಎಂಟು ಹಾಗ್ ಜಿಂಕೆಗಳು, ಎರಡು ಜೌಗು ಜಿಂಕೆಗಳು ಮತ್ತು ಲಂಗೂರ್ ಸಾವನ್ನಪ್ಪಿವೆ ಎಂದು ರಾಷ್ಟ್ರೀಯ ಉದ್ಯಾನದ ಅಧಿಕಾರಿಗಳು ವರದಿ ಮಾಡಿದ್ದಾರೆ.

ಇದನ್ನೂ ಓದಿ: ಬೆಂಗಳೂರು, ಚಂಡೀಘಡದಲ್ಲಿ ರೈಲ್ವೇ ಆರ್ಕೇಡ್‌ ನಿರ್ಮಾಣಕ್ಕೆ ಬಿಡ್‌ ಆಹ್ವಾನ; ಗೋಮಾಂಸ, ಹಂದಿ ಮಾಂಸ ನಿಷೇಧ!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights