ಟೀಂ ಇಂಡಿಯಾ ಕ್ಯಾಪ್ಟನ್ಸಿ ಬದಲಾವಣೆ?; ಬಿಸಿಸಿಐ ಸ್ಪಷ್ಟನೆ!

ಭಾರತೀಯ ಕ್ರಿಕೆಟ್ ತಂಡದ ನಾಯಕ ವಿರಾಟ್ ಕೊಹ್ಲಿ ಅವರು ನಿಗದಿತ ಓವರ್ ಮಾದರಿ ಕ್ರಿಕೆಟ್‌ನ ನಾಯಕತ್ವದಿಂದ ತೆರವಾಗಲಿದ್ದಾರೆ ಎಂಬ ಸುದ್ದಿ ಕೆಲವು ದಿನಗಳಿಂದ ಚರ್ಚೆಯಾಗುತ್ತಿತ್ತು. ಈ ಬಗ್ಗೆ ಸ್ಪಷ್ಟನೆ ನೀಡಿರುವ ಬಿಸಿಸಿಐ ಟೀಂ ಇಂಡಿಯಾ ನಾಯಕತ್ವದಲ್ಲಿ ಯಾವುದೇ ಬದಲಾವಣೆ ಇಲ್ಲ ಎಂದು ಸ್ಪಷ್ಟಪಡಿಸಿದೆ.

ವಿರಾಟ್ ಕೊಹ್ಲಿ ಅವರು ತನ್ನ ಬ್ಯಾಟಿಂಗ್ ಕಡೆಗೆ ಹೆಚ್ಚಿನ ಮಹತ್ವ ನೀಡುವ ಕಾರಣಕ್ಕಾಗಿ ಏಕ ದಿನ ಮತ್ತು ಟಿ-20 ಪಂದ್ಯಗಳಲ್ಲಿ ಟೀಂ ಇಂಡಿಯಾ ನಾಯಕತ್ವವನ್ನು ತೊರೆಯಲಿದ್ದು, ಕೇವಲ ಟೆಸ್ಟ್‌ ತಂಡದ ನಾಯಕರಾಗಿ ಮಾತ್ರ ಮುಂದುವರಿಯಲಿದ್ದಾರೆ. ಏಕದಿನ ಮತ್ತು ಟಿ20 ತಂಡದ ನಾಯಕತ್ವವನ್ನು ರೋಹಿತ್ ಶರ್ಮಾ ವಹಿಸಲಿದ್ದಾರೆ ಎಂದು ವರದಿಯಾಗಿತ್ತು.

ಈ ಸುದ್ದಿಯನ್ನು ತಳ್ಳಿಹಾಕಿರುವ ಬಿಸಿಸಿಐ ಖಜಾಂಚಿ ಅರುಣ್ ಧುಮಾಲ್ ಅವರು, “ಇದು ಸುಳ್ಳು ಸುದ್ದಿ. ಕ್ಯಾಪ್ಟನ್ಸಿ ಬದಲಾವಣೆಯ ಬಗ್ಗೆ ಯಾವುದೇ ಚರ್ಚೆ ನಡೆದಿಲ್ಲ. ಬಹು ನಾಯಕತ್ವದ ಬಗ್ಗೆ ಬಿಸಿಸಿಐ ಯೋಚಿಸಿಲ್ಲ. ವಿರಾಟ್ ಕೊಹ್ಲಿ ಅವರು ಮೂರು ಮಾದರಿಯ ಕ್ರಿಕೆಟ್ ತಂಡದ ನಾಯಕರಾಗಿ ಮುಂದುವರಿಯಲಿದ್ದಾರೆ” ಎಂದು ಸ್ಪಷ್ಟತೆ ನೀಡಿದ್ದಾರೆ.

ಅಕ್ಟೋಬರ್ ನಲ್ಲಿ ಟಿ20 ವಿಶ್ವಕಪ್ ಕ್ರಿಕೆಟ್‌ ಕ್ರೀಡಾಕೂಟ ನಡೆಯಲಿದೆ.

ಇದನ್ನೂ ಓದಿ: ಟಿ-20 ವಿಶ್ವಕಪ್‌ಗೆ ಧೋನಿಯನ್ನು ಆಯ್ಕೆ ಮಾಡಿರುವುದು ಒಳ್ಳೆ ನಿರ್ಧಾರ: ಕಪಿಲ್ ದೇವ್

Spread the love

Leave a Reply

Your email address will not be published. Required fields are marked *