ಬಿಹಾರದಲ್ಲಿ BJP-JDU ನಡುವೆ ಬಿರುಕು? ಕೇಸರಿ ನಾಯಕರನ್ನು ಭೇಟಿಯಾಗಲು ನಿರಾಕರಿಸಿದ ನಿತೀಶ್!

ಬಿಹಾರ ರಾಜ್ಯ ಬಿಜೆಪಿಯ ಉಸ್ತುವಾರಿ ಭೂಪೇಂದ್ರ ಯಾದವ್ ಅವರು ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರನ್ನು ಭೇಟಿ ಮಾಡದೆ, ದೆಹಲಿಗೆ ಹಿಂದಿರುಗಿದ್ದಾರೆ. ಇದು ಬಿಹಾರದಲ್ಲಿ ಕ್ಯಾಬಿನೆಟ್ ವಿಸ್ತರಣೆಗೆ ಸಂಬಂಧಿಸಿದಂತೆ ಆಡಳಿತಾರೂಢ ಜೆಡಿಯು ಮತ್ತು ಬಿಜೆಪಿ ನಡುವಿನ ಬಿರುಕನ್ನು ವಿಸ್ತಾರಗೊಳಿಸಿದೆ ಎಂದು ಹೇಳಲಾಗುತ್ತಿದೆ.

ಭೂಪೇಂದ್ರ ಯಾದವ್‌ ಅವರು ಸಿಎಂ ನಿತೀಶ್‌ ಅವರನ್ನು ಭೇಟಿ ಮಾಡಲು ಬಯಸಿದ್ದರು. ಆದರೆ, ಭೇಟಿ ಸಾಧ್ಯವಾಗಿಲ್ಲ. ಹಣಕಾಸು, ಗೃಹ ವ್ಯವಹಾರಗಳು ಮತ್ತು ಶಿಕ್ಷಣ ಸೇರಿದಂತೆ ರಾಜ್ಯ ಸರ್ಕಾರದಲ್ಲಿ ಕೆಲವು ಪ್ರಮುಖ ಖಾತೆಗಳಿಗೆ ಬಿಜೆಪಿಯು ಬೇಡಿಕೆ ಇಟ್ಟಿದೆ. ಇದಕ್ಕೆ ಜೆಡಿಯು ಆಕ್ಷೇಪ ವ್ಯಕ್ತಪಡಿಸಿದೆ. ಆ ಕಾರಣಕ್ಕಾಗಿ ನಿತೀಶ್‌ ಭೇಟಿ ಮಾಡಲು ನಿರಾಕರಿಸಿದ್ದಾರೆ ಎಂದು ಮೂಲಗಳು ತಿಳಿಸಿವೆ.

ಎಂಎಲ್‌ಸಿ ಮತ್ತು ಬಿಜೆಪಿಯ ಹಿರಿಯ ಮುಖಂಡ ಶಹನ್ವಾಜ್ ಹುಸಿಯನ್ ಅವರಿಗೆ ಹಣಕಾಸು ಅಥವಾ ಗೃಹ ಇಲಾಖೆಯನ್ನು ನೀಡಬೇಕು ಎಂದು ಬಿಜೆಪಿ ಒತ್ತಾಯಿಸುತ್ತಿದೆ. ಪ್ರಸ್ತುತ, ಶಿಕ್ಷಣ ಇಲಾಖೆಯನ್ನು ಜೆಡಿಯು ನಾಯಕ ಅಶೋಕ್ ಕೆ ಚೌಧರಿ  ಅವರಿಗೆ ನೀಡಲಾಗಿದೆ. ಆದರೆ, ಪಠ್ಯಕ್ರಮದಲ್ಲಿ ಹಲವಾರು ಬದಲಾವಣೆಗಳನ್ನು ಮಾಡುವ ಉದ್ದೇಶದಿಂದ ಶಿಕ್ಷಣ ಇಲಾಖೆ ತಮಗೆ ಬೇಕು ಎಂದು ಬಿಜೆಪಿ ಬಯಸುತ್ತಿದೆ ಎಂದು ಮೂಲಗಳು ಹೇಳುತ್ತಿವೆ.

ಇದನ್ನೂ ಓದಿ: RSS-BJP ಸಂಪರ್ಕ ಹೊಂದಿರುವವರನ್ನು ಆಡಳಿತದಿಂದ ಹೊರಗಿಟ್ಟ ಬೈಡೆನ್!

ಕ್ಯಾಬಿನೆಟ್‌ ವಿಸ್ತರಣೆಯನ್ನು ಮಾಡಲು ಬಿಜೆಪಿ ವಿಳಂಬ ಮಾಡಲು ಆರಂಭಿಸಿದ ನಂತರ ಎನ್‌ಡಿಎ ಮೈತ್ರಿಕೂಟದ ಎರಡೂ ಮಿತ್ರ ಪಕ್ಷಗಳ ನಡುವೆ ಬಿರುಕು ಉದ್ಭವಿಸಿದೆ ಎಂದು ಹೇಳಲಾಗಿದೆ.

ಇತ್ತೀಚೆಗೆ ಕ್ಯಾಬಿನೆಟ್ ವಿಸ್ತರಣೆಯಲ್ಲಿನ ವಿಳಂಬದ ಬಗ್ಗೆ ಸಿಎಂ ನಿತೀಶ್ ಕುಮಾರ್ ಅವರು ಕಿರಿಕಿರಿಯನ್ನು ವ್ಯಕ್ತಪಡಿಸಿದ್ದರು. ಇದೇ ಮೊದಲ ಬಾರಿಗೆ ಎನ್‌ಡಿಎಯಲ್ಲಿ ಕ್ಯಾಬಿನೆಟ್ ವಿಸ್ತರಣೆ ಮಾಡಲು ವಿಳಂಬ ಮಾಡಲಾಗುತ್ತಿದೆ ಎಂದು ಅವರು ಹೇಳಿದ್ದಾರೆ.

ಅಲ್ಲದೆ, ಇತ್ತೀಚಿಗೆ ಅರುಣಾಚಲ ಪ್ರದೇಶದಲ್ಲಿ ಜೆಡಿಯುನ ಆರು ಶಾಸಕರನ್ನು ಬಿಜೆಪಿಗೆ ಪಕ್ಷಾಂತರಗೊಳಿಸಿದ ನಂತರ ಜೆಡಿಯು ನಾಯಕರು ಬಿಜೆಪಿ ಬಗ್ಗೆ ಅಸಮಾಧಾನಗೊಂಡಿದೆ.

ಹೀಗಾಗಿ, ನಿರ್ದಿಷ್ಟ ಕಾರಣಗಳನ್ನು ಹೇಳದಿದ್ದರೂ, ಸಿಎಂ ನಿತೀಶ್‌ ಕುಮಾರ್‌ ಅವರು ಭೂಪೇಂದ್ರ ಯಾದವ್‌ ಅವರನ್ನು ಭೇಟಿ ಮಾಡಿಲ್ಲ.

ಕಾಂಗ್ರೆಸ್‌, ಆರ್‌ಜೆಡಿ ಮತ್ತು ಇತರ ಪಕ್ಷಗಳ ಮಾಜಿ ಸಂಸದರು, ಶಾಸಕರು, ಮುಖಂಡರನ್ನು ಬಿಜೆಪಿ ಸೇರಿಸಿದ ನಂತರ ಯಾದವ್‌ ಅವರು ದೆಹಲಿಗೆ ಮರಳಿದ್ದಾರೆ.

ಇದನ್ನೂ ಓದಿ: ಈ ಹಳ್ಳಿಯಲ್ಲಿ BJPಗೆ ಇಲ್ಲ ಪ್ರವೇಶ: ಕೇಸರಿ ಪಡೆಗೆ ಬಾಯ್ಕಾಟ್‌ ಹೇಳಿದ್ದಾರೆ ಗ್ರಾಮಸ್ಥರು!

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights