ಸಿಂಘು ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ : ರೈತರ ಟೆಂಟ್ ಮೇಲೆ ಕಲ್ಲು ತೂರಾಟ!

ದೆಹಲಿಯ ಸಿಂಘು ಗಡಿಯಲ್ಲಿ ಉದ್ವಿಗ್ನ ಪರಿಸ್ಥಿತಿ ಉಂಟಾಗಿದ್ದು ಸ್ಥಳೀಯರು ರೈತರ ಟೆಂಟ್ ಮೇಲೆ ಕಲ್ಲು ತೂರಾಟ ಮಾಡಿದ್ದಾರೆ. ಕಳೆದ ಎರಡು ತಿಂಗಳಿಗೂ ಹೆಚ್ಚು ಕಾಲ ಶಾಂತಿಯುತವಾಗಿ ಪ್ರತಿಭಟನೆ ಮುಂದುವರೆಸಿದ ರೈತರನ್ನು ದಿಕ್ಕು ತಪ್ಪಿಸುವಂತಹ ಪ್ರಯತ್ನಗಳು ನಡೆಯುತ್ತಿವೆ.

ಸ್ಥಳೀಯರಿಂದ ರೈತರ ಟೆಂಟ್ ಗಳ ಮೇಲೆ ಕಲ್ಲು ತೂರಾಟ ಮಾಡಿದ ಪರಿಣಾಮ ರೈತರು ಹಾಗೂ ಸ್ಥಳಿಯರ ನಡುವೆ ಸಂಘರ್ಷ ನಡೆದಿದ್ದು ಪೊಲೀಸರು ಗಲಭೆಯನ್ನು ಚದುರಿಸಲು ಹರಸಾಹಸವೇ ಪಡುತ್ತಿದ್ದಾರೆ. ಕಳೆದ ರಾತ್ರಿಯಿಂದ ರೈತರು ಪ್ರತಿಭಟನಾ ಸ್ಥಳದಿಂದ ಓಡಿಸುವ ಪ್ರಯತ್ನಗಳು ನಡೆಯುತ್ತಿದ್ದು ಕಲ್ಲು ತೂರಲಾಗುತ್ತಿದೆ.

ಹೀಗಾಗಿ ಗಲಭೆ ಹಿಂಸಾಚಾರಕ್ಕೆ ತಿರುಗದಂತೆ ಪೊಲೀಸರು ಅಶ್ರುವಾಯು ಪ್ರಯೋಗ ಮಾಡಿದ್ದಾರೆ. ಘಟನೆಯಲ್ಲಿ ಓರ್ವ ವ್ಯಕ್ತಿ ಹಾಗೂ ಓರ್ವ ಪೊಲೀಸ್ ಗೆ ಗಾಯಗಳಾಗಿವೆ.

ಘರ್ಷಣೆ ಹಿಸಾಂಚಾರಕ್ಕೆ ತಿರಗದೇ ಇರಲು ಪೊಲೀಸರು ಸ್ಥಳೀಯರನ್ನು ಚದುರಿಸುವ ಪ್ರಯತ್ನ ಮಾಡುತ್ತಿದ್ದಾರೆ.

Spread the love

Leave a Reply

Your email address will not be published. Required fields are marked *