ಡ್ಯಾನ್ಸರ್ ಜೊತೆ ಬಿಜೆಪಿ ನಾಯಕನ ನಂಗಾನಾಚ್ : ವೀಡಿಯೋ ವೈರಲ್…!

ಡ್ಯಾನ್ಸರ್ ಜೊತೆ ಬಿಜೆಪಿ ನಾಯಕರೊಬ್ಬರು ಅಶ್ಲೀಲವಾಗಿ ನೃತ್ಯ ಮಾಡಿದ ವೀಡಿಯೋವೊಂದು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದೆ.

ಹೌದು… ರಾಜಸ್ಥಾನದ ಚಿತ್ತೋಢಗಢ ಜಿಲ್ಲೆಯ ಮಾಂಗರೋಲ್ ನಲ್ಲಿ ಈ ಘಟನೆ ನಡೆದಿದೆ. ಬಿಜೆಪಿ ನಾಯಕರೊಬ್ಬರು ಡ್ಯಾನ್ಸರ್ ಜೊತೆ ಅಶ್ಲೀಲವಾಗಿ ನರ್ತಿಸಿದ್ದು ಇಡೀ ಸಮಾಜವೇ ತಲೆತಗ್ಗಿಸುವಂತ ದೃಶ್ಯ ವೈರಲ್ ಆಗಿದೆ. ಸಮಾಜಿಕ್ಕೆ ಮಾದರಿಯಾಗಿರಬೇಕಾದ ನಾಯಕರು ಜನರ ಮಧ್ಯೆ ನರ್ತಿಕೆಯ ಜೊತೆ ಈ ರೀತಿ ವರ್ತಿಸಿದ್ದು ನಾಚಿಗೇಡಿನ ಸಂಗತಿ.

ವೀಡಿಯೋದಲ್ಲಿ ಕಾಣಿಸಿಕೊಂಡಿರುವ ನಾಯಕನ ಹೆಸರು ಕೈಲಾಶ್ ಗುರ್ಜರ್. ಮದುವೆ ಕಾರ್ಯಕ್ರಮದಲ್ಲಿ ಡ್ಯಾನ್ಸರ್ ಜೊತೆ ಅಶ್ಲೀಲವಾಗಿ ನಡೆದುಕೊಂಡಿದ್ದಾರೆ ಎಂಬ ಆರೋಪಗಳು ಕೇಳಿ ಬಂದಿವೆ. ಜನವರಿ 23ರಂದು ಈ ಘಟನೆ ನಡೆದಿದೆ ಎನ್ನಲಾಗಿದ್ದು, ದೇಶದ್ಯಂತ ವೈರತ ಆಗಿದೆ.

ಈ ಕುರಿತು ಪ್ರತಿಕ್ರಿಯಿಸಿರುವ ಕೈಲಾಶ್ ಗುರ್ಜರ್, ಕುಟುಂಬಸ್ಥರ ಮದುವೆಯಲ್ಲಿ ಭಾಗಿಯಾಗಿದ್ದ ವೇಳೆ ಕೆಲವರು ವೀಡಿಯೋ ಸೆರೆಹಿಡಿದಿದ್ದಾರೆ. ರಾಜಕೀಯ ದ್ವೇಷಕ್ಕಾಗಿ ತಪ್ಪು ಬರಹಗಳೊಂದಿಗೆ ವೀಡಿಯೋ ವೈರಲ್ ಮಾಡಲಾಗ್ತಿದೆ ಎಂದು ಆರೋಪಿಸಿದ್ದಾರೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights