ತೆಲಗು ಚಿತ್ರರಂಗದ ಹೊಸ ನೀತಿ ವಿರುದ್ಧ ದಚ್ಚು ಗರಂ : ಫಿಲ್ಮ ಚೇಂಬರ್ನೊಂದಿಗೆ ಚರ್ಚೆ!

ತೆಲಗು ಚಿತ್ರರಂಗದ ಹೊಸ ನೀತಿ ವಿರುದ್ಧ ದಚ್ಚು ಗರಂ ಆಗಿದ್ದು ಕೂಡಲೇ ಕನ್ನಡ ಸಿನಿಮಾಗಳು ಟಾಲಿವುಡ್ ನಲ್ಲಿ ರಿಲೀಸ್ ಆಗಬೇಕು ಎಂದು ನಟ ದರ್ಶನ್ ಫಿಲ್ಮ್ ಚೇಂಬರ್ ಬಳಿ ಮನವಿ ಮಾಡಿಕೊಂಡಿದ್ದಾರೆ.

ಚಾಲೆಂಜಿಂಗ್ ಸ್ಟಾರ್ ದರ್ಶನ್ ಅಭಿನಯದ ‘ರಾಬರ್ಟ್’ ಸಿನಿಮಾ ರಿಲೀಸ್ ಗೆ ಟಾಲಿವುಡ್ ನಲ್ಲಿ ಥಿಯೇಟರ್ ಕೊಡಲು ನಿರಾಕರಿಸಿದ್ದೇ ಈ ಚರ್ಚೆಗೆ ಕಾರಣ. ತೆಲಗು, ತಮಿಳು, ಇಂಗ್ಲೀಷ್ ಭಾಷೆಯ ಸಿನಿಮಾಗಳು ಕರ್ನಾಟಕದಲ್ಲಿ ರಾಜೋರೋಷವಾಗಿ ರಿಲೀಸ್ ಆಗುತ್ತವೆ. ಮಾತ್ರವಲ್ಲದೇ ರಾಜ್ಯದಲ್ಲಿ ತಮ್ಮ ಸ್ಥಾನವನ್ನು ಭದ್ರಪಡಿಸಿಕೊಳ್ಳುತ್ತವೆ. ಆದರೆ ಕನ್ನಡ ಭಾಷೆಯಲ್ಲಿ ರಿಲೀಸ್ ಆಗುವ ಸಿನಿಮಾಗಳಿಗೆ ಟಾಲಿವುಡ್ ಅವಕಾಶ ನೀಡುತ್ತಿಲ್ಲ. ಹೀಗಾಗಿ ತೆಲಗುವಿನಲ್ಲಿ ಡಬ್ ಆಗಿ ಬಿಡುಗಡೆಯಾಗುವಂತಹ ಸಿನಿಮಾಗಳಿಗೆ ಭಾರೀ ಹೊಡೆತ ಬೀಳಲಿದೆ ಎನ್ನುವುದು ನಟ ದರ್ಶನ ವಾದ.

ಪೊಗರು ಸಿನಿಮಾದಿಂದ ಸಾಲು ಸಾಲು ಕೋಟಿ ಕೋಟಿ ಬಜೆಟ್ ಕನ್ನಡ ಸಿನಿಮಾಗಳು ರಿಲೀಸ್ ಆಗುತ್ತಿವೆ. ಆದರೆ ಟಾಲಿವುಡ್ ತೆಲುಗು ಡಬ್ಬಿಂಗ್ ಸಿನಿಮಾಗಳಿಗೆ ಥೇಟರ್ ಕೊಡಲು ಹಿಂದೇಟು ಹಾಕುತ್ತಿದೆ. ಹೀಗಾಗಿ ರಾಬರ್ಟ್ ಸಿನಿಮಾ ರಿಲೀಸ್ಗೆ ಟಾಲಿವುಡ್ ಅಡ್ಡಿಯಾಗುತ್ತಿದೆ ಎಂದು ದಚ್ಚು ಸಿಡಿಮಿಡಿಗೊಂಡಿದ್ದಾರೆ.

ಈ ಟಾಲಿವುಡ್ ವರ್ತನೆ ನಾಳೆ ಕನ್ನಡ ಚಿತ್ರ ರಂಗಕ್ಕೆ ಭಾರಿ ದೊಡ್ಡ ಹೊಡೆತ ಬೀಳಲಿದೆ. ಕೂಡಲೇ ಸಮಸ್ಯೆಯನ್ನು ಬಗೆಹರಿಸಿ, ಕನ್ನಡ ಚಲನಚಿತ್ರ ವಾಣಿಜ್ಯ ಮಂಡಳಿ ತೆಲಗು ಚಲನಚಿತ್ರ ಮಂಡಳಿಗೆ ತಿಳಿಸಬೇಕು ಎಂದು ಫಿಲ್ಮ ಚೇಂಬರ್ ಮುಂದೆ ದಚ್ಚು ಮನವಿ ಮಾಡಿಕೊಂಡಿದ್ದಾರೆ. ಸದ್ಯ ಫಿಲ್ಮ್ ಚೇಬಂರ್ ನೊಂದಿಗೆ ದಚ್ಚು ಸಭೆ ನಡೆಸುತ್ತಿದ್ದು, ಸಭೆಯಲ್ಲಿ ಫಿಲ್ಮ್ ಚೇಂಬರ್ ಅಧ್ಯಕ್ಷ ಡಿ.ಆರ್​. ಜೈರಾಜ್, ರಾಬರ್ಟ್ ಚಿತ್ರ ತಂಡ ಹಾಗೂ ಇನ್ನು ಕೆಲ ಸಿನಿಮಾ ನಿರ್ದೇಶಕರು ಭಾಗಿಯಾಗಿದ್ದಾರೆ. ಚರ್ಚೆ ಬಳಿ ಫಿಲ್ಮ ಚೇಂಬರ್ ಯಾವ ನಿರ್ಧಾರ ಕೈಗೊಳ್ಳಲಿದೆ ಎಂದು ಕಾದು ನೋಡಬೇಕಿದೆ.

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights