ಬಾಳೆಹಣ್ಣು ಚಿಪ್ಸ್ ಮಾಡುವಲ್ಲಿ ಭಾರೀ ಫೇಮಸ್ ಆದ ಕುರುಡ ವ್ಯಾಪಾರಿ!
ಕಠಿಣ ಪರಿಶ್ರಮ ಎಂದಿಗೂ ವ್ಯರ್ಥವಾಗುವುದಿಲ್ಲ. ಇದು ಎಲ್ಲರೂ ಒಪ್ಪುವಂತ ಸತ್ಯ. ಸಾಮಾಜಿಕ ಜಾಲತಾಣಗಳಲ್ಲಿ ಕುರುಡನೊಬ್ಬನ ವಿಡಿಯೋ ವೈರಲ್ ಆಗಿದ್ದು, ವೀಡಿಯೋ ಜೀವನದಲ್ಲಿ ದುಡಿಮೆಯ ಪಾಠವನ್ನು ನೋಡುಗರಿಗೆ ಕಳಿಸುತ್ತದೆ. ಈತನಿಗೆ ದೃಷ್ಟಿ ಇಲ್ಲದೇ ಇದ್ದರೂ ಪ್ರತಿದಿನ ಕೆಲಸ ಮಾಡುತ್ತಿದ್ದಾನೆ. ಎಣ್ಣೆಯಲ್ಲಿ ಬಾಳೆಹಣ್ಣು ಚಿಪ್ಸ್ ತಯಾರಿಸುತ್ತಾನೆ. ಇದು ನೋಡುಗರನ್ನ ಬೆಚ್ಚಿ ಬೀಳಿಸಿದೆ. ಈತನ ಪರಿಶ್ರಮಕ್ಕೆ ಮೆಚ್ಚಿ ಜನ ಸಹಾಯಕ್ಕೆ ಮುಂದಾಗಿದ್ದಾರೆ.
ನಾಸಿಕ್‌ನ ಮಖ್ಮಲಾಬಾದ್ ರಸ್ತೆಯಲ್ಲಿ ಬಾಳೆಹಣ್ಣಿನ ಚಿಪ್‌ಗಳನ್ನು ಮಾಡುವ ಈ ಮಾರಾಟಗಾರನಿಗೆ ಕಣ್ಣುಗಳಿಲ್ಲ. ರಸ್ತೆಬದಿಯ ಸ್ಟಾಲ್ ಹೊಂದಿರುವ ಈತ ಪ್ರತಿನಿತ್ಯ ಬಾಳೆಹಣ್ಣಿನ ಚಿಪ್ಸ್ ಅನ್ನು ಸಕ್ರಿಯವಾಗಿ ಕತ್ತರಿಸುತ್ತಾನೆ. ಅವುಗಳನ್ನು ಹುರಿಯಲು ಬಿಸಿ ಎಣ್ಣೆಯಲ್ಲಿ ಮುಳುಗಿಸುತ್ತಾನೆ. ಹುರಿಯುವ ಪ್ರಕ್ರಿಯೆಯ ನಂತರಬಿಸಿ ಚಿಪ್‌ಗಳನ್ನು ದೊಡ್ಡ ಪಾತ್ರೆಯಲ್ಲಿ ವರ್ಗಾಯಿಸುತ್ತಾನೆ. ನಂತರ ಒಬ್ಬ ಸಹಾಯಕ ಚಿಪ್ಸ್ ಅನ್ನು ಮಸಾಲೆಗಳೊಂದಿಗೆ ಮಿಕ್ಸ್ ಮಾಡಿ ಪ್ಲಾಸ್ಟಿಕ್ ಚೀಲದಲ್ಲಿ ಸುತ್ತಿಡುತ್ತಾನೆ. ದೃಷ್ಟಿಯಿಲ್ಲದೆ ಇಂತಹ ಕಷ್ಟದ ಕೆಲಸ ಮಾಡುವ ಈ ವ್ಯಕ್ತಿಯನ್ನು ಕಂಡು ನೆಟ್ಟಿಗರ ಮನ ಕರಗಿದೆ.
ವಿಡಿಯೋ ಹಂಚಿಕೊಳ್ಳುವ ಮೂಲಕ ನೆಟ್ಟಿಗರು ಮುದುಕನಿಗೆ ಸಹಾಯ ಮಾಡಲು ಕೋರಿದ್ದಾರೆ. ನಾಸಿಕ್ ನಲ್ಲಿ ಯಾರಾದ್ರು ಪರಿಚಯವಿದ್ದರೆ ಚಿಪ್ಸ್ ಗಳನ್ನು ಖರೀದಿ ಮಾಡಲು ಹೇಳುವಂತೆ ಮನವಿ ಮಾಡಿದ್ದಾರೆ. ಇದರಿಂದ ಮುದುಕನ ಕಣ್ಣುಗಳ ಚಿಕಿತ್ಸೆಗೆ ಸಹಕಾರಿಯಾಗುವುದು ಎಂದು ಬರೆಯಲಾಗಿದೆ.
“ನಾಸಿಕ್ ನಲ್ಲಿ ನಿಮಗೆ ಯಾರಾದರೂ ತಿಳಿದಿದ್ದರೆ, ಈ ಮುದುಕನಿಂದ ಬಾಳೆಹಣ್ಣಿನ ಚಿಪ್ಸ್ ಖರೀದಿಸಲು ಹೇಳಿ. ಅವನ ದೃಷ್ಟಿ ಮರಳಿ ಪಡೆಯಲು ನಾವೆಲ್ಲರೂ ಒಟ್ಟಾಗಿ ಆತನಿಗೆ ಸಹಾಯ ಮಾಡಬಹುದು “ಎಂದು ಪೋಸ್ಟ್‌ನ ಶೀರ್ಷಿಕೆಯಲ್ಲಿ ಬರೆಯಲಾಗಿದೆ.
ಈ ವಿಡಿಯೋ ಸಾಮಾಜಿಕ ಜಾಲತಾಣಗಳಲ್ಲಿ ಕಾಡ್ಗಿಚ್ಚಿನಂತೆ ಹರಡಿದೆ ಮತ್ತು ಅಪ್‌ಲೋಡ್ ಮಾಡಿದ ನಂತರ ಈಗಾಗಲೇ 12 ಮಿಲಿಯನ್ ಬಾರಿ ವೀಕ್ಷಿಸಲಾಗಿದೆ. ಮುದುಕನ ಸ್ಥಿತಿಯಿಂದ ನೆಟಿಜನ್‌ಗಳು ಕಂಬನಿ ಮಿಡಿದಿದ್ದಾರೆ ಮತ್ತು ಅವರ ಶ್ರಮವನ್ನು ಶ್ಲಾಘಿಸಿದ್ದಾರೆ.