ಗಡಿ ವಿವಾದ: ಬೆಳಗಾವಿ ಮಹಾರಾಷ್ಟ್ರಕ್ಕೆ ಸೇರಬೇಕೆಂಬ ಒತ್ತಾಯ; ಹಳೇ ದಾಖಲೆಗಳನ್ನು ಬಿಡುಗಡೆ ಮಾಡಿದ ಠಾಕ್ರೆ ಸರ್ಕಾರ!
ಮರಾಠಿ ಭಾಷೆ ಮಾತನಾಡುವ ಕರ್ನಾಟಕದ ಪ್ರದೇಶಗಳನ್ನು ಕೇಂದ್ರಾಡಳಿತ ಪ್ರದೇಶವನ್ನಾಗಿ ಘೋಷಿಸಬೇಕು ಎಂದು ಮಹಾರಾಷ್ಟ್ರ ಸಿಎಂ ಉದ್ದವ್ ಠಾಕ್ರೆ ಹೇಳಿಕೆ ನೀಡದ್ದಾರೆ. ಈ ಬೆನ್ನಲ್ಲೇ, ಈ ಪ್ರದೇಶಗಳ ಮೇಲೆ ಮಹಾರಾಷ್ಟ್ರಕ್ಕೆ ಹಕ್ಕು ಇದೆ ಎಂದು ಪುಷ್ಟೀಕರಿಸುವ ಹಲವು ಹಳೇ ದಾಖಲೆಗಳನ್ನು ಮಹಾರಾಷ್ಟ್ರ ಸರ್ಕಾರ ಬಿಡುಗಡೆ ಮಾಡಿದೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್ಪ್ರೆಸ್ ವರದಿ ಮಾಡಿದೆ.
ಅವುಗಳಲ್ಲಿ, ಕಾರವಾರದಲ್ಲಿ 60 ವರ್ಷಗಳ ಹಿಂದೆ ಮರಾಠಿ ಭಾಷೆಯು ಇಂಗ್ಲಿಷ್ ಮತ್ತು ಕೊಂಕಣಿ ಭಾಷೆಗಳಷ್ಟೇ ಪ್ರಾಮುಖ್ಯತೆ ಪಡೆದಿತ್ತು. ‘ವಿಚಾರಿ’ ಎಂಬ ಮರಾಠಿ ಭಾಷೆಯ ಮೊದಲ ಪತ್ರಿಕೆ 1912ರಲ್ಲಿ ಇಲ್ಲಯೇ ಪ್ರಕಟವಾಗಿತ್ತು. ಇಲ್ಲಿನ ಹಲವಾರು ಸೂಚನಾ ಫಲಕಗಳು ಮರಾಠಿ ಭಾಷೆಯಲ್ಲಿದ್ದವು. ಅಲ್ಲದೆ, ಸಹಕಾರಿ ನಿಗಮಗಳು ಮತ್ತು ಸರ್ಕಾರದ ದಾಖಲೆಗಳು ಮರಾಠಿಯಲ್ಲಿಯೇ ಇದ್ದವು. ಹಾಗಾಗಿ 100-125 ವರ್ಷಗಳಿಗೆ ಹಿಂದಿನ ದಾಖಲೆಗಳು ಈ ಪ್ರದೇಶಗಳು ಮಹಾರಾಷ್ಟ್ರಕ್ಕೆ ಸೇರಿದ್ದು ಎಂದು ಹೇಳುತ್ತವೆ ಎಂದು ಮಹಾರಾಷ್ಟ್ರ ಮುಖ್ಯಮಂತ್ರಿ ಕಚೇರಿ ದಾಖಲೆಗಳನ್ನು ಬಿಡುಗಡೆ ಮಾಡಿದೆ.
ಈ ಸಂಬಂಧ ಹಲವಾರು ಪೂರಕವಾದ ದಾಖಲೆಗಳು, ಫೋಟೋಗಳು, ಆಡಿಯೊ ದೃಶ್ಯಗಳು, ಮರಾಠಿ ಭಾಷೆಯ ಫಲಕಗಳು ಹಾಗೂ ವಿವಾದಿತ ಗಡಿ ಪ್ರದೇಶದಲ್ಲಿ ಸಾಂಸ್ಕೃತಿಕ ಹಿನ್ನೆಲೆಗಳನ್ನು ದಾಖಲೆಗಳಲ್ಲಿ ಒಳಗೊಂಡಿದೆ ಎಂದು ಹೇಳಲಾಗಿದೆ.
ಇದನ್ನೂ ಓದಿ: ಕರ್ನಾಟಕ ಆಕ್ರಮಿತ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸುತ್ತೇವೆ: ಉದ್ಧವ್ ಠಾಕ್ರೆ
ಸುಪ್ರೀಂ ಕೋರ್ಟ್ನಲ್ಲಿ ಮಹಾರಾಷ್ಟ್ರ ಸರ್ಕಾರದ ಅಫಿಡವಿಟ್ನ ಪ್ರಕಾರ, 865 ಹಳ್ಳಿಗಳು ಮತ್ತು ಬೆಳಗಾವಿ, ಕಾರವಾರ, ನಿಪ್ಪಾಣಿ ಮತ್ತು ಅಲಿಯಾಲ್ನಂತಹ ಆರು ನಗರಗಳು ಸಂಯುಕ್ತ ಮಹಾರಾಷ್ಟ್ರದ ಭಾಗಗಳಾಗಿವೆ. ಆದರೆ, ನ್ಯಾಯಮೂರ್ತಿ ಮೆಹರ್ ಚಂದ್ ಮಹಾಜನ್ ಅವರು ‘ಪಕ್ಷಪಾತದ ವರದಿಯನ್ನು ನೀಡಿದ್ದರು ಎಂದು ಮಹಾರಾಷ್ಟ್ರ ಸರ್ಕಾರದ ವಿಶೇಷ ಕರ್ತವ್ಯದ ಅಧಿಕಾರಿ ದೀಪಕ್ ಪವಾರ್ ತಮ್ಮ ಪುಸ್ತಕದಲ್ಲಿ ಹೇಳಿದ್ದಾರೆ ಎಂದು ಮಹಾರಾಷ್ಟ್ರ ಸರ್ಕಾರ ಹೇಳಿದೆ.
ಜಾನಪದ ಹಾಡುಗಳು, ನೃತ್ಯಗಳು, ಹಳೆಯ ಪುಸ್ತಕಗಳು, ಪತ್ರಿಕೆಗಳು, ದೇವಾಲಯಗಳು ಮತ್ತು ಸರ್ಕಾರಿ ದಾಖಲೆಗಳು ಮರಾಠಿ ಪ್ರಾಬಲ್ಯದ ಮುದ್ರೆ ಬಹಿರಂಗಪಡಿಸುತ್ತವೆ. ಆದರೆ, ಕರ್ನಾಟಕ ಸರ್ಕಾರವು ನಗರಗಳ ಹೆಸರನ್ನು ಬದಲಾಯಿಸಿದೆ. ಹಳೆಯ ದಾಖಲೆಗಳನ್ನು ಸುಟ್ಟು ಹಾಕಿದೆ. ಮರಾಠಿ ಶಾಲೆಗಳು ಮತ್ತು ಚಿತ್ರಮಂದಿರಗಳನ್ನು ಮುಚ್ಚಿದೆ. ಈ ಮೂಲಕ ಆ ಪ್ರದೇಶಗಳಲ್ಲಿ ಮರಾಠಿ ಭಾಷೆ ಅಸ್ವಿತ್ವದಲ್ಲಿತ್ತು ಎಂಬುದನ್ನು ಬಲವಂತವಾಗಿ ಅಳಿಸಿಹಾಕಲು ಯುತ್ನಿಸಿತ್ತು ಎಂದು ಬೆಳಗಾವಿ ಮತ್ತು ಮಹಾರಾಷ್ಟ್ರ ಏಕೀಕರಣ ಸಮಿತಿಯ ನಿವಾಸಿ ಮಲೋಜಿ ಅಶ್ಟೆಕರ್ ಆರೋಪಿಸಿದ್ದಾರೆ ಎಂದು ಹೇಳಲಾಗಿದೆ.
ನ್ಯಾಯಕ್ಕಾಗಿ ಹೋರಾಟ ಎಂಬ ಶೀರ್ಷಿಕೆ ಇರುವ 35 ನಿಮಿಷಗಳ ಕಪ್ಪು-ಬಿಳುಪು ವಿಡಿಯೋ ದಾಖಲೆಯನ್ನು ಮಹಾರಾಷ್ಟ್ರ ಸರ್ಕಾರ 50 ವರ್ಷಗಳ ಹಿಂದೆಯೇ ಮಂಡಿಸಿದ್ದು ಅದನ್ನು ಈಗ ಡಿಜಿಟಲ್ ಮಾದರಿಯಲ್ಲಿ ಮರು ಬಿಡುಗಡೆಗೊಳಿಸಲಾಗಿದೆ. ಅದರಲ್ಲಿ ಬೆಳಗಾವಿ ಮತ್ತು ಇತರ ಪ್ರದೇಶಗಳನ್ನು ಮಹಾರಾಷ್ಟ್ರಕ್ಕೆ ಸೇರಿಸಬೇಕೆಂದು ಒತ್ತಾಯಿಸಲಾಗಿದೆ.
ಇದನ್ನೂ ಓದಿ: ಮತ್ತೆ ವಿವಾದಾತ್ಮಕ ಹೇಳಿಕೆ ನೀಡಿದ ‘ಮಹಾ’ ಸಿಎಂ : ಕೆರಳಿದ ಕನ್ನಡಿಗರು!

