ಮಹಿಳಾ ಉದ್ಯೋಗಿಗಳಿಗೆ ಸಚಿವಾಲಯ ಪ್ರವೇಶಿಸುವುದಕ್ಕೆ ನಿಷೇಧ ಹೇರಿದ ತಾಲಿಬಾನ್!

ಆಫ್ಘಾನಿಸ್ತಾನದಲ್ಲಿ ತಮ್ಮದೇ ಆದ ಸರ್ಕಾರ ನಿರ್ಮಾಣ ಮಾಡಿಕೊಂಡ ತಾಲಿಬಾನಿಗಳು ಮಹಿಳಾ ಹಕ್ಕುಗಳನ್ನು ಒಂದೊಂದಾಗಿ ಕಿತ್ತಿಕೊಳ್ಳುತ್ತಿದೆ. ಸದ್ಯ ಮಹಿಳೆಯರ ಮತ್ತೊಂದು ಹಕ್ಕನ್ನು ತಾಲಿಬಾನಿಗಳು ಕಿತ್ತುಕೊಂಡಿದ್ದಾರೆ. ಹೌದು… ಆಫ್ಘಾನಿಸ್ತಾನದ ಮಹಿಳೆಯರು ಸಚಿವಾಲಯ ಪ್ರವೇಶಿಸುವುದಕ್ಕೆ ತಾಲಿಬಾನ್ ಸರ್ಕಾರ ನಿಷೇಧ ಹೇರಿದೆ.

ತಾಲಿಬಾನ್ ಮಹಿಳಾ ಉದ್ಯೋಗಿಗಳನ್ನು ಕಾಬೂಲ್‌ನಲ್ಲಿ ಸಚಿವಾಲಯಕ್ಕೆ ಪ್ರವೇಶಿಸುವುದನ್ನು ನಿಷೇಧಿಸಿದೆ. ಈಗಾಗಲೇ ಆಫ್ಘಾನಿಸ್ತಾನದಲ್ಲಿ ಮಹಿಳೆಯರು ತಮ್ಮ ಹಕ್ಕುಗಳಿಗಾಗಿ ಬೀದಿಗಿಳಿದು ಹೋರಾಟ ನಡೆಸಿದ್ದಾರೆ. ತಾಲಿಬಾನ್ ವಿರುದ್ಧ ಘೋಷಣೆಗಳನ್ನು ಕೂಗಿ ತಮ್ಮ ಆಕ್ರೋಶ ಹೊರಹಾಕುತ್ತಿದ್ದಾರೆ. ಇದ್ಯಾವುದಕ್ಕೂ ತಲೆ ಕೆಡಿಸಿಕೊಳ್ಳದ ತಾಲಿಬಾನಿಗಳು ಗಾಳಿಯಲ್ಲಿ ಗುಂಡು ಹಾರಿಸುವ ಮೂಲಕ ಹಾಗೂ ಕ್ರೂರವಾಗಿ ಹಿಂಸಿಸಿ ಕೊಲ್ಲುವ ಮೂಲಕ ಸ್ಥಳೀಯರನ್ನು ತನ್ನ ಹಿಡಿತಕ್ಕಿಟ್ಟುಕೊಳ್ಳುವ ಉಗ್ರತೆ ಮೆರೆದಿದೆ.

ನುಡಿದಂತೆ ನಡೆ ತಪ್ಪಿದ ತಾಲಿಬಾನ್:

ಆಫ್ಘಾನ್ ಪ್ರವೇಶಿಸಿದ ಆರಂಭದಲ್ಲಿ ತಾಲಿಬಾನಿಗಳು ಮಹಿಳಾ ಸ್ವಾತಂತ್ರ್ಯಕ್ಕೆ ಹಾಗೂ ಮಾಧ್ಯಮ ಸ್ವಾತಂತ್ರ್ಯಕ್ಕೆ ಧಕ್ಕೆಯಾಗದಂತೆ ನಡೆದುಕೊಳ್ಳುವುದಾಗಿ ಹೇಳಿತ್ತು. ಆದರೆ ತಾಲಿಬಾನ್ ಸರ್ಕಾರ ರಚನೆಯಾಗುತ್ತಿದ್ದಂತೆ ಎಲ್ಲಾ ಉಲ್ಟಾವಾಗಿದೆ. ದಿನದಿಂದ ದಿನಕ್ಕೆ ತಾಲಿಬಾನ್ ಉಪಟಳ ಆಫ್ಘಾನ್ ಜನರ ಜೀವ ಗಟ್ಟಿಯಾಗಿಟ್ಟುಕೊಳ್ಳುವಂತೆ ಮಾಡುತ್ತಿದೆ. ಉಸಿರು ಬಿಗಿದಿಟ್ಟುಕೊಳ್ಳುವ ವಾತಾವರಣವನ್ನೇ ಸೃಷ್ಟಿ ಮಾಡಿಬಿಟ್ಟಿದೆ ತಾಲಿಬಾನ್.

ಯಾವಾಗ? ಎಲ್ಲಿ? ಯಾರ ಮೇಲೆ? ಗುಂಡು ಹಾರುತ್ತೋ..? ಯಾರು ತಾಲಿಬಾನ್ ಕ್ರೂರ ಶಿಕ್ಷೆಗೆ ಒಳಗಾಗುತ್ತಾರೋ?ಎಂದೆಲ್ಲಾ ಭಯದಲ್ಲೇ ಜನ ಜೀವನ ನಡೆಸುವಂತ ಸ್ಥಿತಿ ಇದೆ.

ಹೀಗಾಗಿ ತಾಲಿಬಾನಿಗಳ ಗುಂಡಿಗೆ ಹೆದರಿ ಜೀವನ ಮಾಡುವುದಕ್ಕಿಂತ ಧೈರ್ಯದಿಂದ ಸಾಯಲು ತಾಲಿಬಾನ್ ಮಹಿಳೆಯರು ನಿರ್ಧರಿಸಿದ್ದಾರೆ. ಇದರಿಂದ ಕಾಬೂಲ್‌ನ ಸಚಿವಾಲಯಕ್ಕೆ ಪ್ರವೇಶಿಸದಂತೆ ನಿರ್ಬಂಧಿಸಿ ಪುರುಷರಿಗೆ ಮಾತ್ರ ಕಟ್ಟಡದೊಳಗೆ ಅವಕಾಶ ನೀಡಿದ ತಾಲಿಬಾನ್ ಉಗ್ರರ ವಿರುದ್ಧ ಮತ್ತೆ ಧ್ವನಿ ಎತ್ತಲು ಮಹಿಳೆಯರು ಮುಂದಾಗಿದ್ದಾರೆ.

 

ಸುಳ್ಳು ಸುದ್ದಿಗಳ ವಿರುದ್ಧದ ಹೋರಾಟಕ್ಕೆ ದೇಣಿಗೆ ನೀಡಿ ಬೆಂಬಲಿಸಿ
Spread the love

Leave a Reply

Your email address will not be published.

Verified by MonsterInsights